ಶೂಟಿಂಗ್ ಸೆಟ್ ನಲ್ಲಿ ಮಾದಕ ತಾರೆ ಸನ್ನಿಲಿಯೋನ್ ಕಾಲಿಗೆ ಗಾಯ, ರಕ್ತ ಕಂಡು ಕಿರಿಚಾಡಿದ ನಟಿ….!

Follow Us :

ಪೋರ್ನ್ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡು ಬಳಿಕ ಎಲ್ಲವನ್ನೂ ಬಿಟ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಮಾದಕ ತಾರೆ ಸನ್ನಿ ಲಿಯೋನ್ ಬಾಲಿವುಡ್ ಸಿನೆಮಾಗಳ ಜೊತೆಗೆ ಸೌತ್ ಸಿನೆಮಾಗಳಲ್ಲೂ ಸಹ ಪುಲ್ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಸ್ಪೇಷಲ್ ರೋಲ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸಿನೆಮಾ ಒಂದರ ಶೂಟಿಂಗ್ ವೇಳೆ ಕಾಲಿನ ಹೆಬ್ಬರಳಿಗೆ ಸಣ್ಣ ಗಾಯಾವಾಗಿದ್ದು, ರಕ್ತ ಬಂದಿದೆ. ಅದನ್ನು ನೋಡಿ ಸನ್ನಿ ಜೋರಾಗಿ ಕಿರಿಚಾಡಿದ್ದಾರೆ.

ನಟಿ ಸನ್ನಿ ಲಿಯೋನ್ ತನ್ನ ಸೌಂದರ್ಯವನ್ನೇ ಆಯುಧವನ್ನಾಗಿ ಮಾಡಿಕೊಂಡು ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ ಗಳ ಮೂಲಕ ಅನೇಕ ಅಭಿಮಾನಿಗಳನ್ನು ಹಾಗೂ ಸಿನೆಮಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಜೊತೆಗೆ ಸೌತ್ ಸಿನೆಮಾಗಳಲ್ಲೂ ಸಹ ನಟಿಸುತ್ತಾ ಪುಲ್ ಬ್ಯುಸಿಯಾಗಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಐದಾರು ಸಿನೆಮಾಗಳಿವೆ ಎನ್ನಲಾಗಿದೆ. ಹಂತ ಹಂತವಾಗಿ ತನ್ನ ಸಿನೆಮಾಗಳನ್ನು ಕಂಪ್ಲೀಟ್ ಮಾಡುತ್ತಿದ್ದಾರೆ. ಇದೀಗ ಸೌತ್ ಸಿನೆಮಾವೊಂದರ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.  ಈ ವೇಳೆ ಆಕೆಯ ಕಾಲಿನ ಬೆರಳಿಗೆ ಗಾಯವಾಗಿದೆ. ಅದು ದೊಡ್ಡ ಗಾಯವೇನು ಅಲ್ಲ. ಬಲಗಾಲಿನ ಹೆಬ್ಬರಳಿಗೆ ಸಣ್ಣ ಗಾಯವಾಗಿದೆ. ರಕ್ತ ಸಹ ಹೊರಬಂದಿದೆ. ಗಾಯ ಸಣ್ಣದಿದ್ದರೂ ಸಹ ಆಕೆ ತುಂಬಾ ನೋವನ್ನು ಅನುಭವಿಸಿದ್ದಾರೆ. ನೋವನ್ನು ತಾಳಲಾರದೆ ಜೋರಾಗಿ ಕಿರುಚಾಡಿದ್ದಾರೆ.

ಇನ್ನೂ ಈ ಸಂಬಂಧ ಸನ್ನಿ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ಸನ್ನಿ ಲಿಯೋನ್ ಈ ವಿಡಿಯೋ ಹಂಚಿಕೊಂಡಿದ್ದೇ ತಡ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಜೊತೆಗೆ ಆಕೆಗೆ ಕಾಲಿಗೆ ತಗುಲಿದ ಗಾಯ ಕಂಡು ಆಂದೋಲನಕ್ಕೆ ಗುರಿಯಾಗಿದ್ದಾರೆ. ಏನಾಗಿದೆ ಎಂಬೆಲ್ಲಾ ಕಾಮೆಂಟ್ ಗಳ ಜೊತೆಗೆ ನೀವು ನೋವು ಪಡುತ್ತಿರುವುದನ್ನು ನಾವು ನೋಡಲು ಆಗುವುದಿಲ್ಲ ಎಂದು ಸಹ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನೂ ಸನ್ನಿಗೆ ಗಾಯವಾದ ಕೂಡಲೇ ಅಲ್ಲಿನ ಚಿತ್ರತಂಡದ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಿಧಾನವಾಗಿ ಚಿಕಿತ್ಸೆ ಮಾಡಿ ಎಂದು ಅವರ ಮೇಲೂ ಸಹ ಕಿರಿಚಾಡಿದ್ದಾರೆ. ಇಂಜೆಕ್ಷನ್ ಅಂತಹುವು ಬೇಡ ಎಂದೂ ಸಹ ಹೇಳಿದ್ದಾರೆ.

ಈ ವಿಡಿಯೋದಲ್ಲಿ ಸನ್ನಿ ಧರಿಸಿದ ಕಾಸ್ಟೂಮ್ಸ್ ಗಮನಿಸಿ ಆಕೆ ಡಿ ಗ್ಲಾಮರ್‍ ರೋಲ್ ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಸನ್ನಿ ಲಿಯೋನ್ ಬಾಲಿವುಡ್ ಸಿನೆಮಾಗಳ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಕಳೆದ ವರ್ಷ ಆಕೆ ಜಿನ್ನಾ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಆಗದೇ ಇದ್ದರೂ ಸಹ ಆಕೆಯ ನಟನೆಯ ಪರವಾಗಿ ಒಳ್ಳೆಯ ಮಾರ್ಕ್ಸ್ ಪಡೆದುಕೊಂಡರು.