ಸಿನಿರಂಗದಲ್ಲಿ ಹೆಚ್ಚು ಗ್ಲಾಮರ್ ಶೋ ಮಾಡದೇ ಸ್ಟಾರ್ ಡಂ ಗಿಟ್ಟಿಸಿಕೊಂಡ ನಟಿಯರ ಸಾಲಿನಲ್ಲಿ ಸಾಯಿ ಪಲ್ಲವಿ ಮೊದಲಿಗರು ಎಂದರೇ ತಪ್ಪಾಗಲಾರದು. ಆಕೆ ಓವರ್ ಮೇಕಪ್ ಮಾಡದೇ, ಓವರ್ ಗ್ಲಾಮರ್ ಶೋ ಮಾಡದೇ ನ್ಯಾಚುರಲ್ ಸೌಂದರ್ಯದ ಮೂಲಕ ಕಡಿಮೆ ಸಮಯದಲ್ಲೇ ಸ್ಟಾರ್ ನಟಿಯಾದರು. ಕೆಲವು ದಿನಗಳಿಂದ ಸಾಯಿ ಪಲ್ಲವಿ ಮದುವೆಯಾಗಿದೆ ಎಂಬ ರೂಮರ್ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅದಕ್ಕೆ ಸಾಯಿ ಪಲ್ಲವಿ ಫೈರ್ ಆಗಿ ಕೌಂಟರ್ ಕೊಟ್ಟಿದ್ದಾರೆ.
ಕಳೆದೆರಡು ದಿನಗಳಿಂದ ನಟಿ ಸಾಯಿ ಪಲ್ಲವಿ ಹಾಗೂ ಒಬ್ಬ ವ್ಯಕ್ತಿಯ ಜೊತೆಗೆ ಮದುವೆಯಾಗಿದೆ ಎಂದು ರೂಮರ್ ಹುಟ್ಟಿಕೊಂಡಿತ್ತು. ಈ ರೂಮರ್ ಹುಟ್ಟಿಕೊಳ್ಳಲು ಆ ಪೊಟೋ ಸಹ ಒಂದು ಕಾರಣವಾಗಿದೆ. ವೈರಲ್ ಆಗುತ್ತಿರುವ ಪೊಟೋದಲ್ಲಿ ಸಾಯಿಪಲ್ಲವಿ ಹಾಗೂ ವೇಣು ಉಡುಗುಲ ಎಂಬ ವ್ಯಕ್ತಿ ಕೊರಳಲ್ಲಿ ಮಾಲೆ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದ ಇಬ್ಬರೂ ಮದುವೆಯಾಗಿದೆ ಎಂಬ ರೂಮರ್ ಜೋರಾಗಿಯೇ ಹರಿದಾಡಿತ್ತು. ಈ ಸುದ್ದಿ ನಿರ್ದೇಶಕರಾದ ವೇಣು ಉಡುಗುಲ ದೃಷ್ಟಿಗೆ ಹೋಗಿದೆ. ಕೂಡಲೇ ಆತ ರಿಯಾಕ್ಟ್ ಆಗಿದ್ದಾರೆ. ಈ ಬಗ್ಗೆ ಆತ ಸಹ ರಿಯಾಕ್ಟ್ ಆಗಿದ್ದಾರೆ. ಶಿವಕಾರ್ತಿಕೇಯನ್ ಹಾಗೂ ಸಾಯಿಪಲ್ಲವಿ ನಟಿಸುತ್ತಿರುವ ಸಿನೆಮಾದ ಪೂಜಾ ಕಾರ್ಯಕ್ರಮದ ಪೊಟೋ ಇದಾಗಿದೆ. ಸಾಯಿ ಪಲ್ಲವಿ ಮದುವೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಶುದ್ದ ಸುಳ್ಳು ಎಂದು ರಿಯಾಕ್ಷನ್ ಕೊಟ್ಟಿದ್ದರು.
ಇನ್ನೂ ಈ ಬಗ್ಗೆ ಇದೀಗ ಸಾಯಿ ಪಲ್ಲವಿ ಸಹ ಫೈರ್ ಆಗಿದ್ದಾರೆ. ಈ ಸಂಬಂಧ ಆಕೆ ಸೋಷಿಯಲ್ ಮಿಡಿಯಾದ ಮೂಲಕ ರಿಯಾಕ್ಟ್ ಮಾಡಿದ್ದು, ಒಂದು ಒಳ್ಳೆಯ ವಿಚಾರವನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡರೇ ಅದನ್ನು ಅಡ್ಡಿದಾರಿ ಹಿಡಿಯುವಂತೆ ಮಾಡುವುದು ಕ್ಷಮಿಲಾರದಂತಹ ಅಪರಾಧವಾಗುತ್ತದೆ ಎಂದು ಫೈರ್ ಆಗಿದ್ದಾರೆ. ಇನ್ನೂ ಸಾಯಿ ಪಲ್ಲವಿ ಮದುವೆಯ ಬಗ್ಗೆ ಅನೇಕ ಬಾರಿ ರೂಮರ್ ಗಳು ಕೇಳಿಬರುತ್ತಿತ್ತು. ಆದರೆ ಎಲ್ಲವನ್ನೂ ಆಕೆ ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ಈ ಹಿಂದೆ ಸಹ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿತ್ತು. ಆಗಲೂ ಸಹ ಮದುವೆಯಾಗಲಿದ್ದಾರೆ ಎಂಬ ರೂಮರ್ ಹುಟ್ಟಿಕೊಂಡಿತ್ತು. ಆದರೆ ಇದೀಗ ಆಕೆ ಮದುವೆ ರೂಮರ್ ಬಗ್ಗೆ ಫೈರ್ ಆಗಿದ್ದು, ಆಕೆಯ ಪೋಸ್ಟ್ ವೈರಲ್ ಆಗುತ್ತಿದೆ.
ಇನ್ನೂ ಸಾಯಿ ಪಲ್ಲವಿ ಏಕಾಏಕಿ ಯಾವುದೇ ಸಿನೆಮಾ ಒಪ್ಪಿಕೊಳ್ಳುವುದಿಲ್ಲ. ಪಾತ್ರಕ್ಕೆ ಪ್ರಾಧಾನ್ಯತೆಯಿದ್ದರೇ ಮಾತ್ರ ಆಕೆ ನಟಿಸುತ್ತಾಋಎ. ಇದೀಗ ಆಕೆ ಶಿವ ಕಾರ್ತಿಕೇಯನ್ ಜೊತೆಗೆ ಸಿನೆಮಾ ಮಾಡಲಿದ್ದಾರೆ. ಇದರ ಜೊತೆಗೆ ನಾಗಚೈತನ್ಯ ಹಾಗೂ ಸಾಯಿಪಲ್ಲವಿ ಕಾಂಬಿನೇಷನ್ ನಲ್ಲಿ ಲವ್ ಸ್ಟೋರಿ ಸಿನೆಮಾದ ಬಳಿಕ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ.
