ಆಂಧ್ರಪ್ರದೇಶದ ರಾಜಕಾರಣದಲ್ಲಿ ಕೆಲವು ದಿನಗಳಿಂದ ಚಂದ್ರಬಾಬು ನಾಯ್ಡು ಬಂಧನದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ. ಕೇವಲ ಆಂಧ್ರಪ್ರದೇಶದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಿಂದಲೂ ಚಂದ್ರಬಾಬು ನಾಯ್ಡು ರವರಿಗೆ ಬೆಂಬಲ ದೊರೆಯುತ್ತಿದೆ. ಇದೀಗ ಕಾಲಿವುಡ್ ಸ್ಟಾರ್ ನಟ ವಿಶಾಲ್ ಸಹ ಚಂದ್ರಬಾಬು ನಾಯ್ಡು ರವರ ಬಂಧನದ ಬಗ್ಗೆ ಮತ್ತೊಮ್ಮೆ ರಿಯಾಕ್ಟ್ ಆಗಿದ್ದಾರೆ. ಜೊತೆಗೆ ಜಗನ್ ಗೆ ಆತ ಅಭಿಮಾನಿ ಎಂದು ಹೇಳಿದ್ದಾರೆ. ಆತನ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.
ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ರವರ ಬಂಧನದ ಬಗ್ಗೆ ಈ ಹಿಂದೆ ನಟ ವಿಶಾಲ್ ರಿಯಾಕ್ಟ್ ಆಗಿದ್ದರು. ಚಂದ್ರಬಾಬು ನಾಯ್ಡು ತುಂಬಾ ಒಳ್ಳೆಯ ವ್ಯಕ್ತಿ, ದೊಡ್ಡ ನಾಯಕ ಆತನನ್ನು ಬಂಧನ ಮಾಡಿರುವುದು ನೋವಿನ ಸಂಗತಿ ಎಂದು, ಅವರನ್ನು ಬಂಧನ ಮಾಡಿದ್ದನ್ನು ನೋಡಿ ತುಂಭಾ ಭಯವಾಗಿತ್ತು. ಮಾಜಿ ಸಿಎಂ ರವನ್ನೇ ಆ ರೀತಿಯಾಗಿ ಬಂಧನ ಮಾಡಿದರೇ, ನಮ್ಮಂತಹ ಸಾಮಾನ್ಯ ವ್ಯಕ್ತಿಗಳ ಪರಿಸ್ಥಿತಿ ಹೇಗಿರಬಹುದು ಎಂದು ಕಾಮೆಂಟ್ ಮಾಡಿದ್ದರು. ಇದೀಗ ಮತ್ತೊಮ್ಮೆ ನಟ ವಿಶಾಲ್ ಈ ಕುರಿತು ರಿಯಾಕ್ಷನ್ ಕೊಟ್ಟಿದ್ದಾರೆ. ಅಷ್ಟಕ್ಕೂ ವಿಶಾಲ್ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,
ನಟ ವಿಶಾಲ್ ತಾನು ಜಗನ್ ಗೆ ದೊಡ್ಡ ಅಭಿಮಾನಿ, ತಾನು ಅಭಿಮಾನಿಸುವ ದೊಡ್ಡ ರಾಜಕೀಯ ನಾಯಕ ಜಗನ್ ರವರು ಎಂದು, ಆದರೆ ಚಂದ್ರಬಾಬು ಬಂಧನದಲ್ಲಿ ಆಂಧ್ರ ಸರ್ಕಾರ ಆಳವಾಗಿ ಯೋಚನೆ ಮಾಡಬೇಕಿತ್ತು. ಚಂದ್ರಬಾಬು ನಾಯ್ಡು ಬಂಧನ ವಿಚಾರದಲ್ಲಿ ನಾನು ಆವೇದನೆಗೆ ಗುರಿಯಾಗಿದ್ದೇನೆ. ಚಂದ್ರಬಾಬು ರನ್ನು ಬಂಧನ ಮಾಡುವುದಕ್ಕೂ ಮುಂಚೆ ಸಿಐಡಿ ಪೊಲೀಸರು ಮತಷ್ಟು ಯೋಚನೆ ಮಾಡಬೇಕು. ಖಚಿತವಾದ ಆಧಾರಗಳನ್ನು ಕಲೆ ಹಾಕಿ ಬಳಿಕ ಬಂಧನ ಮಾಡಬೇಕಿತ್ತು ಎಂದು ವಿಶಾಲ್ ಹೇಳಿದ್ದಾರೆ. ಅಷ್ಟೇಅಲ್ಲದೇ ಈ ವಿಚಾರವನ್ನು ತಾನು ಸಿನಿ ನಟನಾಗಿ ಮಾತ್ರವಲ್ಲದೇ ಸಾಮಾನ್ಯ ವ್ಯಕ್ತಿಯಾಗಿ ಅಭಿಪ್ರಾಯ ಹೊರಹಾಕುತ್ತಿದ್ದೇನೆ ಎಂದು ಹೇಳಿದ್ದಾರೆ.
ಸದ್ಯ ವಿಶಾಲ್ ಹಂಚಿಕೊಂಡ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾ ಸೇರಿದಂತೆ ರಾಜಕೀಯ ವಲಯದಲ್ಲಿ ಸಹ ಸದ್ದು ಮಾಡುತ್ತಿವೆ. ಸಿನಿರಂಗದಿಂದ ಮಾತ್ರ ಚಂದ್ರಬಾಬು ನಾಯ್ಡು ರವರಿಗೆ ಅಷ್ಟೊಂದು ಸ್ಪಂದನೆ ದೊರೆಯುತ್ತಿಲ್ಲ. ಆದರೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ಎಂ.ಎಲ್.ಎ ಹಾಗೂ ನಟ ಬಾಲಕೃಷ್ಣ ರವರು ಚಂದ್ರಬಾಬು ರವರಿಗೆ ಬೆಂಬಲ ನೀಡಿದ್ದರು. ಜೊತೆಗೆ ಮುಂದಿನ ಚುನಾವಣೆಯಲ್ಲಿ ಜನಸೇನಾ ಹಾಗೂ ಟಿಡಿಪಿ ಜಂಟಿಯಾಗಿ ಸ್ಪರ್ಧೆ ಮಾಡುವುದಾಗಿ ಸಹ ಘೋಷಣೆ ಮಾಡಲಾಗಿದೆ.
