Film News

ಆ ಹಿರೋಗಾಗಿ ಸಾಯಿ ಪಲ್ಲವಿ ತುಂಬಾ ರಿಸ್ಕ್ ಮಾಡಿದ್ರಂತೆ, ಮನೆಯಲ್ಲಿ ಒದೆ ಸಹ ತಿಂದಿದ್ದರಂತೆ?

ಸಿನಿರಂಗದಲ್ಲಿ ಓವರ್‍ ಗ್ಲಾಮರ್‍ ಪ್ರದರ್ಶನ ಮಾಡದೇ ಸಿನಿರಂಗದಲ್ಲಿ ಸಕ್ಸಸ್ ಪುಲ್ ಜರ್ನಿ ಸಾಗಿಸುತ್ತಿದ್ದ ನಟಿಯರಲ್ಲಿ ಸಾಯಿ ಪಲ್ಲವಿ ಮೊದಲ ಸ್ಥಾನದಲ್ಲಿರುತ್ತಾರೆ. ಜೊತೆಗೆ ಸಿನಿರಂಗದಲ್ಲಿ ಯಾವುದೇ ನೆಗೆಟೀವ್ ಟಾಕ್ ಇಲ್ಲದ ನಟಿಯೆಂತಲೂ ಕರೆಯಬಹುದಾಗಿದೆ. ಸಿನೆಮಾದಲ್ಲಿ ಆಕೆ ಅಭಿನಯದ ಜೊತೆಗೆ ಆಫ್ ಸ್ಕ್ರೀನ್ ನಲ್ಲೂ ಸಹ ಆಕೆಯ ನಡವಳಿಕೆ ಅನೇಕರಿಗೆ ತುಂಬಾನೆ ಇಷ್ಟವಾಗುತ್ತದೆ. ಆ ಕಾರಣದಿಂದಲೇ ಆಕೆಯ ಸೌಂದರ್ಯವನ್ನಲ್ಲದೇ ಆಕೆಯ ವ್ಯಕ್ತಿತ್ವ ಹಾಗೂ ಟ್ಯಾಲೆಂಟ್ ಅನ್ನೇ ಹೆಚ್ಚಾಗಿ ಅಭಿಮಾನಿಸುತ್ತಾರೆ. ಆಕೆ ಓರ್ವ ಹಿರೋಗಾಗಿ ಮನೆಯಲ್ಲಿ ಒದೆ ತಿಂದಿದ್ದರಂತೆ. ಅಷ್ಟಕ್ಕೂ ಆ ಘಟನೆ ಏನು ಎಂಬ ವಿಚಾರಕ್ಕೆ ಬಂದರೇ,

ನ್ಯಾಚುರಲ್ ಬ್ಯೂಟಿ ಎಂದೇ ಕ್ರೇಜ್ ಪಡೆದುಕೊಂಡ ನಟಿ ಸಾಯಿ ಪಲ್ಲವಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಮೂಲತಃ ತಮಿಳು ಮೂಲದವರಾದರೂ ಸಹ ಸಾಯಿಪಲ್ಲವಿ ಅಪಾರ ಸಂಖ್ಯೆಯ ತೆಲುಗು ಅಭಿಮಾನಿಗಳನ್ನೂ ಸಹ ಪಡೆದುಕೊಂಡಿದ್ದಾರೆ. ಫಿದಾ, ಎಂಸಿಎ, ಲವ್ ಸ್ಟ್ರೋರಿ, ಶ್ಯಾಮಸಿಂಗರಾಯ್ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು. ಈ ಸಿನೆಮಾಗಳಲ್ಲಿ ಆಕೆ ಪವರ್‍ ಪುಲ್ ರೋಲ್ ಪ್ಲೇ ಮಾಡಿದ್ದರು. ಇನ್ನೂ ಕಥೆಯಲ್ಲಿ ಪ್ರಧಾನ್ಯತೆಯಿದ್ದರೇ ಮಾತ್ರ ಆಕೆ ನಟಿಸುತ್ತಾರೆ. ಇದೇ ಆಕೆಯ ಸಕ್ಸಸ್ ಗೆ ಕಾರಣ ಎಂದೂ ಸಹ ಹೇಳಲಾಗುತ್ತದೆ. ಇದೀಗ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ತಾನು ಆ ಸ್ಟಾರ್‍ ಹಿರೋಗಾಗಿ ಮನೆಯಲ್ಲಿ ಒದೆಗಳನ್ನು ತಿಂದಿದ್ದರಂತೆ.

ಯೂಟ್ಯೂಬ್ ಚಾನಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತೆಲುಗು ಸಿನಿರಂಗದಲ್ಲಿ ತನ್ನ ಫೇವರಿಟ್ ಹಿರೋ ಬಗ್ಗೆ ಹೇಳಿದ್ದಾರೆ. ಆಕೆ ತನ್ನ ಫೇವರಿಟ್ ಹಿರೋ ಗಾಗಿ ತುಂಬಾ ರಿಸ್ಕ್ ಮಾಡಿ ಮನೆಯಲ್ಲಿ ಒದೆ ತಿಂದಿದ್ದರಂತೆ. ಆಕೆ ಇಂಟರ್‍ ಸೆಕೆಂಡ್ ಇಯರ್‍ ಓದುತ್ತಿರುವ ಸಮಯದಲ್ಲಿ ತನಗೆ ತುಂಬಾ ಇಷ್ಟವಾದ ಹಿರೋ ಪವನ್ ಕಲ್ಯಾಣ್ ರವರ ಸಿನೆಮಾ ನೋಡಲು ಮನೆಯಲ್ಲಿ ಯಾರಿಗೂ ತಿಳಿಯದೇ ಹೋಗಿದ್ದರಂತೆ. ಸಿನೆಮಾ ನೋಡಿ ಮನೆಗೆ ತಡವಾಗಿ ಹೋಗಿದ್ದೆ. ಯಾರು ಜೊತೆಗೆ ಇಲ್ಲದೇ ಸಿನೆಮಾಗೆ ಹೋಗಿ ತಡವಾಗಿ ಬಂದ ಹಿನ್ನೆಲೆಯಲ್ಲಿ ನಮ್ಮ ತಂದೆ ಚೆನ್ನಾಗಿ ಒದೆ ಕೊಟ್ಟರು. ಸಿನೆಮಾಗೆ ಹೋಗಬೇಕು ಎಂದರೇ ನಾವೇ ಕರೆದುಕೊಂಡು ಹೋಗುತ್ತಿದ್ದೆವಲ್ಲ ಎಂದು ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು ಎಂದು ತಾನು ತುಂಬಾ ಇಷ್ಟಪಡುವಂತಹ ಪವನ್ ಕಲ್ಯಾಣ್ ರವರಿಗಾಗಿ ತಾನು ಮಾಡಿದ ದೊಡ್ಡ ರಿಸ್ಕ್ ಇದೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಇನ್ನೂ ಸುಮಾರು ತಿಂಗಳುಗಳ ಬಳಿಕ ಸಾಯಿ ಪಲ್ಲವಿ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಶಿವ ಕಾರ್ತಿಕೇಯನ್ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾ  ಲೋಕನಾಯಕ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದು, ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ.

Most Popular

To Top