ಮಗಳನ್ನೆ ಕೊಂದ ತಂದೆ, ಮೃತ ದೇಹವನ್ನು ಬೈಕ್ ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ರೈಲು ಹಳಿಗೆ ಹಾಕಿ ಪಾಪಿ….!

ನಾಗರೀಕ ಸಮಾಜದಲ್ಲಿ ಆಗಾಗ ಕೆಲವೊಂದು ಘಟನೆಗಳು ನಡೆಯುತ್ತಿರುತ್ತವೆ. ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆಗಳು ಕೆಲವು ನಡೆಯುತ್ತಿರುತ್ತವೆ. ತಂದೆಯೇ ತನ್ನ ಮಗಳನ್ನು ಕೊಂದು ಮೃತದೇಹವನ್ನು ಬೈಕಿಗೆ ಕಟ್ಟಿ, ರಸ್ತೆಯಲ್ಲಿ ಎಳೆದುಕೊಂಡು ಹೋಗಿ ರೈಲು ಹಳಿಯ ಮೇಲೆ ಹಾಕಿದ ಘಟನೆಯೊಂದು ಪಂಜಾಬ್ ನ ಅಮೃತಸರ ಜಿಲ್ಲೆಯ ಮುಚಲ್ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಪಂಜಾಬ್ ರಾಜ್ಯದ ಅಮೃತಸರ ಜಿಲ್ಲೆಯ ಮುಚಲ್ ಎಂಬ ಗ್ರಾಮದ 20 ವರ್ಷದ ಯುವತಿಯೊಬ್ಬಳನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದಾನೆ. ದಲ್ಬೀರ್‍ ಸಿಂಗ್ ಎಂಬ ವ್ಯಕ್ತಿ ತನ್ನ ಮಗಳ ಮೇಲೆ ತುಂಬಾ ಕೋಪಗೊಂಡು ಈ ಕೃತ್ಯವೆಸೆಗಿದ್ದಾರಂತೆ. ಕಳೆದ ಬುಧವಾರ ಮನೆಯಲ್ಲಿ ಯಾರಿಗೂ ತಿಳಿಸದೇ ಹೊರಗೆ ಹೋಗಿ ಮರುದಿನ ಬಂದಿದ್ದಳಂತೆ. ಇದರಿಂದ ಕೋಪಗೊಂಡ ತಂದೆ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕುಟುಂಬದ ಸದಸ್ಯರು ಹೇಳುವಂತೆ, ಗುರುವಾರ ಮಧ್ಯಾಹ್ನ ಮೃತಳು ಮನೆಗೆ ಬಂದಿದ್ದಳಂತೆ. ಆಗ ದಲ್ಬೀರ್‍ ಸಿಂಗ್ ಆಕ್ರೋಷಗೊಂಡ ಆಕೆಯನ್ನು ಚೆನ್ನಾಗಿ ಒಡೆದಿದ್ದಾನೆ. ಬಳಿಕ ಹರಿತವಾದ ಆಯುಧಗಳಿಂದ ಆಕೆಯನ್ನು ಕೊಲೆ ಮಾಡಿದ್ದಾನೆ. ನಾವು ತಡೆಯಲು ಹೋದಾಗ ನಮ್ಮನ್ನು ಸಹ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಶವ ತೆಗೆದುಕೊಂಡು ಹೋಗಿದ್ದಾನೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಆರೋಪು ದಲ್ಬೀರ್‍ ಸಿಂಗ್ ಮನೆಯಲ್ಲಿರುವವರನ್ನು ಮನೆಯಲ್ಲೆ ಬಂಧಿಸಿ ಅವರನ್ನೂ ಕೊಲ್ಲುವ ಬೆದರಿಕೆ ಹಾಕಿದ್ದನಂತೆ. ಅದರಿಂದ ಅವರು ಮನೆಯಿಂದ ಹೊರ ಬರಲು ಸಾಧ್ಯವಾಗಿರಲಿಲ್ಲವಂತೆ. ಇನ್ನೂ ದಲ್ಬೀರ್‍ ಸಿಂಗ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನಂತೆ. ಇನ್ನೂ ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವತಿಯ ಕೊಲೆಯ ಹಿಂದಿರುವ ಕಾರಣ ತಿಳಿದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರಂತೆ. ಇನ್ನೂ ಆರೋಪಿ ಮಗಳನ್ನು ಕೊಂದು ಬೈಕ್ ನಲ್ಲಿ ಕಟ್ಟಿಕೊಂಡು ಹೋಗುತ್ತಿರುವ ದೃಶ್ಯವೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.