Film News

ಚಿರಂಜೀವಿ ಡ್ಯಾನ್ಸ್ ಬಗ್ಗೆ ಕಾಮೆಂಟ್ ಮಾಡಿದ ಸಾಯಿಪಲ್ಲವಿ, ಆ ಸ್ಟೆಪ್ ಗಳನ್ನು ಎಷ್ಟು ಭಾರಿ ಟ್ರೈ ಮಾಡಿದ್ರು ಆಗಿಲ್ಲ ಎಂದ ನಟಿ……!

ಟಾಲಿವುಡ್ ಸಿನಿರಂಗದ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿಯವರು ವಯಸ್ಸಾದರೂ ಸಹ ಯಂಗ್ ನಟರನ್ನೂ ಮೀರಿಸುವಂತಹ ಸ್ಟೆಪ್ಸ್ ಗಳನ್ನು ಹಾಕುತ್ತಿರುತ್ತಾರೆ. ಅವರ ಡ್ಯಾನ್ಸ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ ಎನ್ನಬಹುದು. ಟಾಲಿವುಡ್ ಗೆ ಡ್ಯಾನ್ಸ್ ಮೂಲಕ ಹೈಪ್ ತಂದುಕೊಟ್ಟ ನಟ ಎಂದೇ ಹೇಳಬಹುದು. ನೃತ್ಯವನ್ನು ಪರಿಚಯಿಸಿದ್ದು ಎ.ಎನ್.ಆರ್‍ ಬಳಿಕ ಮೆಗಾಸ್ಟಾರ್‍ ಚಿರಂಜೀವಿ ಎಂದರೇ ತಪ್ಪಾಗಲಾರದು. ಚಿರಂಜೀವಿ ಎಂದರೇ ಡ್ಯಾನ್ಸ್, ಡ್ಯಾನ್ಸ್ ಅಂದರೇ ಚಿರಂಜೀವಿ ಎಂತಲೂ, ಮೈಖಲ್ ಜಾಕ್ಸನ್ ಸ್ಟೆಪ್ ಗಳನ್ನು ಸಹ ತೆಲುಗು ಸಿನೆಮಾಗಳಲ್ಲಿ ಪರಿಚಯಿಸಿದ ನಟ ಎಂದು ಹೇಳಬಹುದು.

ಟಾಲಿವುಡ್ ಸಿನಿರಂಗದಲ್ಲಿ ಬೆಸ್ಟ್ ಡ್ಯಾನ್ಸರ್‍ ಎಂದೇ ಚಿರಂಜೀವಿಯವರನ್ನು ಕರೆಯುತ್ತಾರೆ. ಇಂದಿಗೂ ಸಹ ಅವರ ಡ್ಯಾನ್ಸ್ ಪವರ್‍ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚಿಗೆ ತೆರೆಕಂಡ ಭೋಳಾಶಂಕರ್‍, ವಾಲ್ತೇರು ವೀರಯ್ಯ ಸಿನೆಮಾದಲ್ಲೂ ಸಹ ಸಿನಿರಸಿಕರು ಫಿದಾ ಆಗುವಂತಹ ನೃತ್ಯ ಮಾಡಿದ್ದರು. ಟಾಲಿವುಡ್ ನ ಯಂಗ್ ಹಿರೋಗಳಾದ ಅಲ್ಲು ಅರ್ಜುನ್, ಜೂನಿಯರ್‍ ಎನ್.ಟಿ.ಆರ್‍, ರಾಮ್ ಚರಣ್ ರಂತಹವರೂ ಸಹ ಒಳ್ಳೆಯ ರೀತಿಯಲ್ಲಿ ನೃತ್ಯ ಮಾಡುತ್ತಾರೆ. ಆದರೆ ಚಿರಂಜೀವಿಯವರನ್ನು ಮಾತ್ರ ಬೀಟ್ ಮಾಡಲು ಆಗಲಿಲ್ಲ ಎಂದೇ ಹೇಳಬಹುದು. ಸದ್ಯ ಸಿನಿರಂಗದಲ್ಲಿ ಸಾಯಿಪಲ್ಲವಿ ಬೆಸ್ಟ್ ಡ್ಯಾನ್ಸರ್‍ ಎಂದು ಹೇಳಬಹುದು. ಆಕೆಯನ್ನು ಡಾಮಿನೇಟ್ ಮಾಡಲು ಶ್ರೀಲೀಲಾ ರವರಿಗೂ ಸಹ ಸಾಧ್ಯವಾಗಲಿಲ್ಲ. ಆಕೆಯ ನೃತ್ಯಕ್ಕೆ ಚಿರಂಜೀವಿಯವರೂ ಸಹ ಫಿದಾ ಆಗಿದ್ದರು. ಈ ವಿಚಾರವನ್ನು ಚಿರಂಜೀವಿಯವರೇ ಹೇಳಿದ್ದರು. ಇದೀಗ ಸಾಯಿಪಲ್ಲವಿ ಚಿರಂಜೀವಿಯವರ ನೃತ್ಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಒಪೆನ್ ಹಾರ್ಟ್ ವಿತ್ ಆರ್‍.ಕೆ ಜೊತೆಗೆ ಚಾಟಿಂಗ್ ಮಾಡುವ ಸಮಯದಲ್ಲಿ ಸಾಯಿಪಲ್ಲವಿ ಚಿರಂಜೀವಿಯವರ ನೃತ್ಯದ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಚಿರಂಜೀವಿಯವರ ಡ್ಯಾನ್ಸ್ ಗ್ರೇಸ್ ಬೇರೆ ಯಾರಿಗೂ ಸಾಧ್ಯವಾಗುವುದಿಲ್ಲ. ಅವರಂತೆ ಡ್ಯಾನ್ಸ್ ಮಾಡೋಕೆ ತುಂಬಾ ಪ್ರಯತ್ನ ಮಾಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರು ಮಾಡಿದಂತಹ ಮೂಮೆಂಟ್ಸ್, ಗ್ರೇಸ್ ನನಗೆ ಮಾಡೋಕೆ ಆಗಿಲ್ಲ. ಆತ ಮೋಸ್ಟ್ ಗ್ರೇಸ್ ಪುಲ್ ಡ್ಯಾನ್ಸರ್‍ ಎಂದು ಹೇಳಿದ್ದಾರೆ. ಅದರಲ್ಲೂ ಮುಠಾಮೇಸ್ತ್ರಿ ಸಿನೆಮಾದಲ್ಲಿನ ಮಾರ್ಕೆಟ್ ನಲ್ಲಿ ಬರುವಂತಹ ಟೈಟಲ್ ಸಾಂಗ್ ಬಗ್ಗೆ ಮಾತನಾಡಿದ್ದು, ಆ ಹಾಡಿನಲ್ಲಿನ ಮೂಮೆಂಟ್ಸ್ ಮಾಡೋಕೆ ತುಂಬಾ ಟ್ರೈ ಮಾಡಿದ್ದೆ. ಆದರೆ ನನಗೆ ಬರಲೇ ಇಲ್ಲ. ನಾನು ಏನು ಮಾಡಿದರೂ ಹೆಣ್ಣು ಮಗು. ಅದು ಪುರುಷರು ಮಾಡುವ ರಿಥಮ್ ಅದು ಚಿರಂಜೀವಿಯವರಿಗೆ ಮಾತ್ರ ಸಾಧ್ಯ ಎಂದಿದ್ದಾರೆ.

ಜೊತೆಗೆ ಮಾಸ್ಟರ್‍ ಸಿನೆಮಾದಲ್ಲಿನ ನಡಕ ಕಲಿಸಿನ ನವರಾತ್ರಿ ಸಿನೆಮಾದ ಸ್ಟೆಪ್ ಗಳನ್ನು ಸಹ ನಾನು ಮರೆಯುವುದಿಲ್ಲ. ಎರಡು ಮೂರು ಸಿನೆಮಾಗಳಲ್ಲಿನ ಹಾಡುಗಳ ನೃತ್ಯದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಆಕೆಯ ಕಾಮೆಂಟ್ ಗಳನ್ನು ಕೇಳಿದ ಮೆಗಾ ಅಭಿಮಾನಿಗಳು ಸಹ ಪುಲ್ ಖುಷಿಯಾಗಿದ್ದಾರೆ ಎನ್ನಲಾಗಿದೆ.

Most Popular

To Top