News

ದೈವ ಕೋಲದಲ್ಲಿ ಭಾಗಿಯಾದ ಸ್ಪೀಕರ್ ಯು.ಟಿ. ಖಾದರ್, ಮುಸ್ಲೀಂ ಮುಖಂಡರ ಆಕ್ರೋಷ…….!

ಕರ್ನಾಟಕ ವಿಧಾನಸಭಾ ಸ್ಪೀಕರ್‍ ಯು.ಟಿ.ಖಾದರ್‍ ರವರು ದೈವ ಕೋಲದಲ್ಲಿ ಭಾಗಿಯಾಗಿದ್ದು, ಪ್ರಸಾದ ಸ್ವೀಕರಿಸಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಖಾದರ್‍ ರವರು ಕೋಲದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಮುಸ್ಲೀಂ ಧಾರ್ಮಿಕ ಮುಖಂಡರು ಬಹಿರಂಗವಾಗಿಯೇ ಆಕ್ರೋಷ ಹೊರಹಾಕಿದ್ದಾರೆ.

ಸ್ಪೀಕರ್‍ ಯು.ಟಿ.ಖಾದರ್‍ ರವರು ಕಾರ್ಣಿಕದ ಬಂಟ್ವಾಳ ಪಣೋಲಿಬೈಲು ಕಲ್ಲುರ್ಟಿ ಕ್ಷೇತ್ರದಲ್ಲಿ ದೈವ ಕೋಲ ಸೇವೆಯಲ್ಲಿ ಭಾಗಿಯಾಗಿ ದೈವ ನರ್ತಕರಿಂದ ಪ್ರಸಾದ ಸ್ವೀಕರಿಸಿದ್ದು, ಈ ಬಗ್ಗೆ ಭಾರಿ ಚರ್ಚೆ ಯಾಗುತ್ತಿದೆ. ಜೊತೆಗೆ  ಆಕ್ರೋಷ ಮತ್ತು ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಮುಸ್ಲೀಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಸಾಮಾಜಿಕ ತಾಣದಲ್ಲಿ ಆಕ್ರೋಷ ಹೊರ ಹಾಕಿದ್ದಾರೆ. ಯು.ಟಿ.ಖಾದರ್‍ ನನ್ನು ಮುಸ್ಲೀಂರು ಬರೀ ರಾಜಕಾರಣಿಯಾಗಿ ಕಂಡರೆ ಸಾಕು, ಧಾರ್ಮಿಕ ಮುಂದಾಳುವಾಗಿ ಕಾಣುವುದು, ಉಲಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲೀಂ ನಾಯಕನಾಗಿ ಹತ್ತಿಸುವುದು ತರವಲ್ಲ. ಖಾದರ್‍ ಕೊರಗಜ್ಜನಿಗೂ ಕಲ್ಲುರ್ಟಿ, ಪಂಜುರ್ಲಿಗೂ ಆರಾಧಿಸಲಿ, ಪ್ರಸಾದ ಪಡೆಯಲಿ ಅದು ಅವರು ವೈಯುಕ್ತಿಕ ಸ್ವಾತಂತ್ರ. ಅದೊಂದು ನಮ್ಮ ದೇಶದಲ್ಲಿ ಎಲ್ಲರಿಗೂ ಇರುವಂತಹ ಸಾಂವಿಧಾನಿಕ ಸ್ವಾತಂತ್ಯ್ರವಾಗಿದೆ. ಅದನ್ನು ತಡೆಯುವ ಹಕ್ಕು ನಮಗಿಲ್ಲ ಎಂದಿದ್ದಾರೆ.

ಧಾರ್ಮಿಕ ನಾಯಕನಾಗಿ ನಾವು ಖಾದರ್‍ ಮಾಡಿದ ಕೆಲಸವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಉಲಮಾಗಳು ಅವರಿಗೆ ಗೌರವ ಕೊಡುವುದು ಮುಸ್ಲೀಂ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಣಮಿಸುತ್ತದೆ ಎಂದು ಮುಸ್ಲೀಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಸಾಮಾಜಿಕ ತಾಣದಲ್ಲಿ ಆಕ್ರೋಷ ಹೊರ ಹಾಕಿದ್ದಾರೆ. ಈ ಬಗ್ಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಯು.ಟಿ.ಖಾದರ್‍ ರವರ ಗೆಲುವಿಗಾಗಿ ಪಣೋಲಿ ಬೈಲು ಕ್ಷೇತ್ರದಲ್ಲಿ ಹರಕೆ ಹೊತ್ತ ಸೇವೆ ಕೋಲದಲ್ಲಿ ಸ್ಪೀಕರ್‍ ಖಾದರ್‍ ಸಹ ಭಾಗಿಯಾಗಿದ್ದಾರೆ ಎಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Most Popular

To Top