Film News

ದೇಶ ಗರ್ವಿಸುವಂತಹ ಅವಾರ್ಡ್ ಪಡೆದುಕೊಂಡ RRR, ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್….!

ದೇಶ ಹಾಗೂ ವಿದೇಶದಲ್ಲೂ ಭಾರಿ ಸಕ್ಸಸ್ ಕಂಡ ಸಿನೆಮಾಗಳಲ್ಲಿ RRR ಸಹ ಒಂದಾಗಿದ್ದು, ಈಗಾಗಲೇ ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಇದೀಗ ಇಡೀ ದೇಶ ಗರ್ವ ಪಡುವಂತೆ ಪ್ರತಿಷ್ಟಿತ ಆಸ್ಕರ್‍ ಅವಾರ್ಡ್ ಪಡೆದುಕೊಂಡಿದೆ. ಈ ಸಿನೆಮಾದಲ್ಲಿ ನಾಟು ನಾಡು ಹಾಡಿಗೆ ಅಕಾಡೆಮಿ ಅವಾರ್ಡ್ಸ್ ಸಂಸ್ಥೆ ಆಸ್ಕಾರ್‍ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಕೇವಲ ಸಿನಿಮಾ ಸೆಲೆಬ್ರೆಟಿಗಳು ಮಾತ್ರವಲ್ಲದೇ ದೇಶದ ಕೋಟ್ಯಂತರ ಜನತೆ ಸಹ RRR ತಂಡವನ್ನು ಪ್ರಶಂಸೆ ಮಾಡುತ್ತಾ ಶುಭಾಷಯಗಳನ್ನು ಸುರಿಸುತ್ತಿದ್ದಾರೆ.

ಆಸ್ಕಾರ್‍ ಅವಾರ್ಡ್ ಕಾರ್ಯಕ್ರಮಕ್ಕೆ ಕೆಲವು ದಿನಗಳಿಗೂ ಮುಂಚೆಯೇ ತಲುಪಿದ RRR ತಂಡ ಭಾರಿ ಮಟ್ಟದಲ್ಲೇ ಪ್ರಮೋಷನ್ ಸಹ ಮಾಡಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕಾರ್‍ ಅವಾರ್ಡ್ ಸ್ವಂತ ಮಾಡಿಕೊಂಡು ಚರಿತ್ರೆ ಸೃಷ್ಟಿಸಿದೆ. ಇನ್ನೂ ಈ ಅವಾರ್ಡ್ ಫಂಕ್ಷನ್ ನಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ದಿ ಅವಾರ್ಡ್ ಗೋಸ್ ಟು ನಾಟು ನಾಟು ಫ್ರಂ RRR ಎಂದ ಕೂಡಲೇ ಸಮಾರಂಭದಲ್ಲಿದ್ದ ರಾಜಮೌಳಿ, ರಾಮ್ ಚರಣ್, ಎನ್.ಟಿ.ಆರ್‍ ಹಾಗೂ ಕೀರವಾಣಿ ಸಂತೋಷದಲ್ಲಿ ಮುಳುಗಿ ತೇಲಿದರು. ಮೊದಲಿಗೆ ತೆಲುಗು ಸಿನೆಮಾ ಆಸ್ಕರ್‍ ಅವಾರ್ಡ್ ವರೆಗೂ ತಲುಪುತ್ತಾ ಇಲ್ಲವಾ ಎಂಬ ಪರಿಸ್ಥಿತಿಯಲ್ಲಿ ಆಸ್ಕಾರ್‍ ಗೆ ನಾಮಿನೇಟ್ ಆಗುವುದರ ಜೊತೆಗೆ ಅವಾರ್ಡ್ ಸಹ ಗೆದ್ದು ಚರಿತ್ರೆ ಸೃಷ್ಟಿಸಿದೆ.

ಇನ್ನೂ ಈ ಆಸ್ಕಾರ್‍ ನಾಮಿನೇಷನ್ ನಲ್ಲಿ ಟಾಪ್ ಗನ್ ಮೆವೆರಿಕ್ ಸಿನೆಮಾದಿಂದ ಹೋಲ್ಡ್ ಮೈ ಹ್ಯಾಂಡ್, ಟೆಲ್ ಇಟ್ ಲೈಕ್ ಎ ವುಮೆನ್ ಸಿನೆಮಾದಿಂದ ಅಪ್ಲೋಜ್, ಬ್ಲಾಕ್ ಪಾಂಥರ್‍ ವಾಕಂಡಾ ಫಾರೆವರ್‍ ಸಿನೆಮಾದಿಂದ ಲಿಫ್ಟ್ ಮಿ ಅಪ್, ಎವರಿ ಥಿಂಗ್ ಎವರಿ ವೇರ್‍ ಆಲ್ ಎಟ್ ವನ್ಸ್ ಸಿನೆಮಾದಿಂದ ದಿಸ್ ಈಜ್ ಏ ಲೈಪ್ ಎಂಬ ಹಾಡುಗಳು RRR ಸಿನೆಮಾದ ನಾಟು ನಾಟು ಹಾಡಿಗೆ ಭಾರಿ ಪೈಪೋಟಿ ನೀಡಿತು. ಎಲ್ಲವನ್ನೂ ಮೀರಿ ನಾಟು ನಾಟು ಹಾಡು ಆಸ್ಕಾರ್‍ ಪಡೆದುಕೊಂಡಿದೆ. ಇನ್ನೂ RRR ಸಿನೆಮಾದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ವೇದಿಕೆಗೆ ತೆರಳಿ ಅವಾರ್ಡ್ ಪಡೆದುಕೊಂಡಿದ್ದಾರೆ.

ಇನ್ನೂ RRR ಸಿನೆಮಾದಿಂದ ನಾಟು ನಾಟು ಹಾಡು ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆದಾಗಿನಿಂದಲೂ ತುಂಬಾನೆ ಸಂಚಲನ ಸೃಷ್ಟಿಸಿತ್ತು. ಭಾರತ ಮಾತ್ರವಲ್ಲದೇ, ಅಮೇರಿಕಾ, ಇಂಗ್ಲೇಡ್, ಜಪಾನ್, ಚೈನಾ ಸೇರಿದಂತೆ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸಿತ್ತು. ಇನ್ನೂ ನಾಟು ನಾಟು ಹಾಡು ಅವಾರ್ಡ್ ಪಡೆದುಕೊಂಡಿದ್ದು, ಆ ಹಾಡು ಅಷ್ಟೊಂದು ಚೆನ್ನಾಗಿ ಮೂಡಿಬರಲು ರಾಜಮೌಳಿ, ಕೀರವಾಣಿ, ಪ್ರೇಮ್ ರಕ್ಷಿತ್ ಮಾಸ್ಟರ್‍, ಚಂದ್ರಬೋಸ್, ರಾಹುಲ್ ಸಿಂಪ್ಲಿಗಂಜ್ ಹಾಗೂ ಕಾಲಬೈರವ ರವರುಗಳ ಪಾತ್ರ ಅಪಾರ ವಾದುದು ಎಂದು ಹೇಳಬಹುದಾಗಿದೆ.

Most Popular

To Top