Film News

ನನಗೆ ಇಷ್ಟ ಆದರೆ ವೈನ್ ಕುಡಿತೀನಿ, ನನಗೆ ಇಷ್ಟಬಂದಂತೆ ನಾನು ಬದುಕುವುದು ಎಂದ ಬಾಲಿವುಡ್ ಸ್ಟಾರ್ ನಟಿ ಕರೀನಾ….!

ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ರವರಿಗೆ ದೊಡ್ಡ ಮಟ್ಟದಲ್ಲೇ ಅಭಿಮಾನಿ ಬಳಗವಿದೆ. ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಟಿಯರಲ್ಲಿ ಕರೀನಾ ಕಪೂರ್‍ ಸಹ ಒಬ್ಬರಾಗಿದ್ದಾರೆ. ವಯಸ್ಸಾದರೂ ಸಹ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಮಕ್ಕಳು ಕುಟುಂಬ ದೊಂದಿಗೆ ಸಿನೆಮಾಗಳನ್ನು ಸಹ ಸಮರೋಪಾದಿಯಲ್ಲಿ ಸಾಗಿಸುತ್ತಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಕಾಮೆಂಟ್ ಗಳನ್ನು ನೀಡಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಕರೀನಾ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಆಕೆ ಅನೇಕ ಪ್ರಶ್ನೆಗಳಿಗೆ ಉತ್ತರ ಸಹ ನೀಡಿದ್ದಾರೆ. ವಯಸ್ಸಿನ ಬಗ್ಗೆ ಪ್ರಶ್ನೆಗೆ ಎದುರಾಗಿದ್ದು, ಅದಕ್ಕೆ ಉತ್ತರಿಸಿದ ಕರೀನಾ ನಿಮ್ಮ ವಯಸ್ಸನ್ನು ನೀವು ಒಪ್ಪಿಕೊಳ್ಳಬೇಕು ಜೊತೆಗೆ ನಿಮ್ಮ ವಯಸ್ಸಿನ ಬಗ್ಗೆ ಹೆಮ್ಮೆ ಸಹ ಪಡಬೇಕು. ಇನ್ನೂ ಈ ಹಿಂದೆ ಸಿನೆಮಾ ನಾಯಕಿಯರು ಮದುವೆಯಾಗುವುದಕ್ಕೆ ದೊಡ್ಡ ನಿಷೇಧ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಎಲ್ಲಾ ಬದಲಾಗುತ್ತಿದೆ. ಇತ್ತೀಚಿಗೆ ಅನೇಕ ಮಹಿಳೆಯರು ತಮ್ಮ ವಯಸ್ಸಿನ ಬಗ್ಗೆ ತುಂಬಾ ಚಿಂತೆಗೆ ಗುರಿಯಾಗಿರುತ್ತಾರೆ. ಇನ್ನೂ ಬಾಲಿವುಡ್ ನಲ್ಲಿ ಮದುವೆಯಾದರೂ ಸಹ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದಿದ್ದರೆ.

ಇನ್ನೂ ವೃತ್ತಿ ಹಾಗೂ ಜೀವನದ ಸಮತೋಲನವನ್ನು ಸಾಧಿಸಲು ಯಾವುದೇ ಸೂತ್ರವಿಲ್ಲ ರಹಸ್ಯ ಸಹ ಇಲ್ಲ. ನೀವು ಏನು ಮಾಡುತ್ತಿದ್ದಿರಾ ಅಥವಾ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ನಿರ್ಧಾರ ಮಾಡುವುದು ನಿಮ್ಮ ಇಚ್ಚೆಯಾಗಿರಬೇಕು. ಇನ್ನೂ ನನ್ನ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗಲು ನನ್ನ ಮನಸ್ಸು ಒಪ್ಪದೇ ಇದ್ದರೇ,, ನಾನು ಯಾವುದೇ ಕಾರ್ಯಕ್ರಮಗಳಿಗೆ ಹೋಗಲು ಸಹ ಇಷ್ಟಪಡುವುದಿಲ್ಲ. ಅಷ್ಟೇಅಲ್ಲದೇ ನಾನು ನನಗಾಗಿ ನನ್ನ ಆಯ್ಕೆ ಮಾಡಿಕೊಳ್ಳಲು ಸಂಪೂರ್ಣ ಸ್ವತಂತ್ರ ಹೊಂದಿದ್ದೇನೆ. ಒಂದು ವೇಳೆ ನನಗೆ ನನ್ನ ಪತಿಯೊಂದಿಗೆ ಕುಳಿತು ವೈನ್ ಕುಡಿಯಲು ಮನಸ್ಸಾದರೇ ಕುಡಿಯುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಕರಿನಾ ಕಪೂರ್‍ ಮದುವೆಯಾದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ನಟಿ ಕರೀನಾ ಸ್ಟಾರ್‍ ನಟ ಸೈಫ್ ಅಲಿ ಖಾನ್ ಜೊತೆ ವಿವಾಹವಾದರು. ಮದುವೆಯಾದರೂ ಸಹ ಆಕೆ ಕೆಲವೊಂದು ಸಿನೆಮಾಗಳಲ್ಲಿ ಹಾಗೂ ಜಾಹಿರಾತುಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವೊಂದು ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

Most Popular

To Top