Film News

ಟೈಟ್ ಫಿಟ್ ಡ್ರೆಸ್ ನಲ್ಲಿ ಕ್ರೇಜಿಯಾಗಿ ವರ್ಕೌಟ್ಸ್ ಮಾಡುತ್ತಾ ಯುವಕರನ್ನು ಹುಚ್ಚೆಬ್ಬಿಸುವಂತೆ ಮಾಡಿದ ರಶ್ಮಿಕಾ ಮಂದಣ್ಣ…..!

ಸ್ಯಾಂಡಲ್ ವುಡ್ ಮೂಲದ ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆಯಿರುವ ನಟಿಯಾಗಿದ್ದಾರೆ. ಸೌತ್ ಅಂಡ್ ನಾರ್ತ್‌ನಲ್ಲೂ ಭಾರಿ ಬಜೆಟ್ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ರಶ್ಮಿಕಾ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಹೆವಿ ವರ್ಕೌಟ್ಸ್ ಮಾಡುತ್ತಿರುತ್ತಾರೆ. ಇದೀಗ ಆಕೆ ಟೈಟ್ ಫಿಟ್ ಡ್ರೆಸ್ ನಲ್ಲಿ ಕ್ರೇಜಿಯಾಗಿ ವರ್ಕೌಟ್ಸ್ ಮಾಡುವಂತಹ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದನ್ನಾ ಹೆಸರು ಕಳೆದೆರಡು ದಿನಗಳಿಂದ ಜೋರಾಗಿ ಹರಿದಾಡುತ್ತಿದೆ. ಆಕೆಯ ಡೀಫ್ ಫೇಕ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೋಗೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ಸಹ ಎದುರಾಗಿತ್ತು. ಆಕೆಗೆ ಬೆಂಬಲ ಸೂಚಿಸಿ ಅನೇಕ ಸಿನೆಮಾ ಸೆಲೆಬ್ರೆಟಿಗಳು, ರಾಜಕೀಯ ನಾಯಕರು, ಫ್ಯಾನ್ಸ್ ಸೇರಿದಂತೆ ಅನೇಕರು ಆಕೆಗೆ ಸಪೋರ್ಟ್ ಮಾಡಿದ್ದರು. ಈ ವಿಚಾರದಿಂದ ಆಕೆಗೆ ಬೆಂಬಲ ನೀಡಿದ ಎಲ್ಲರಿಗೂ ರಶ್ಮಿಕಾ ಸಹ ಧನ್ಯವಾದ ತಿಳಿಸಿದ್ದರು. ಸರ್ಕಾರ ಸಹ ಅಂತಹ ಮಾರ್ಫಿಂಗ್ ವಿಡಿಯೋ ಬಗ್ಗೆ ಕ್ರಮ ತೆಗೆದುಕೊಂಡಿದ್ದು, ದೂರು ಬಂದ 24 ಗಂಟೆಯೊಳಗೆ ವಿಡಿಯೋ ಡಿಲೀಟ್ ಮಾಡಬೇಕೆಂಬ ನಿಯಮ ಸಹ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ರಶ್ಮಿಕಾ ಮಂದಣ್ಣ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಸಿನೆಮಾ ಅಪ್ಡೇಟ್ ಗಳ ಜೊತೆಗೆ ಪೊಟೋಗಳು ವಿಡಿಯೋಗಳ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಇದೀಗ ಆಕೆ ಟೈಟ್ ಫಿಟ್ ಡ್ರೆಸ್ ನಲ್ಲಿ ವರ್ಕೌಟ್ಸ್ ಮಾಡುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಟೈಟ್ ಶಾರ್ಟ್, ಟಿ ಶರ್ಟ್ ನಲ್ಲಿ ರಶ್ಮಿಕಾ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆ ವಿವಿಧ ಭಂಗಿಗಳಲ್ಲಿ ವರ್ಕೌಟ್ ಮಾಡುತ್ತಿರುವುದು ಪಡ್ಡೆಹುಡುಗರ ನಿದ್ದೆಗೆಡಿಸಿದೆ ಎನ್ನಲಾಗಿದೆ. ಇನ್ನೂ ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.

ಇನ್ನೂ ಈ ವಿಡಿಯೋದಲ್ಲಿ ರಶ್ಮಿಕಾ ಕೆಲವೊಂದು ವಿಚಾರಗಳನ್ನು ಸಹ ಹೇಳಿದ್ದಾರೆ. ನೀವು ವ್ಯಾಯಾಮ ಮಾಡಿದ ಬಳಿಕ ಆ ದಿನ ಒಳ್ಳೆಯ ದಿನ ಅಂತಾ ಗೊತ್ತು. ಜುನೈದ್ ಶೇಕ್ ಇದು ನನಗೆ ಸುಲಭ ಮಾಡಬಾರದೆ, ಎಂದಿನಂತೆ ನನ್ನನ್ನು ನನ್ನಂತೆ ಸಾಯಿಸಿದ್ದಕ್ಕೆ ಧನ್ಯವಾದ ಎಂದು, ನಾನು ಮತಷ್ಟು ಬಲಿಷ್ಟವಾಗಿ ಬರುತ್ತೇನೆ, ಇನ್ನೂ ಬಲಿಷ್ಟವಾದ ನಾಳೆಗೆ ಶುಭಾಷಯಗಳು ಎಂದು ಹೇಳಿದ್ದಾರೆ. ಇನ್ನೂ ರಶ್ಮಿಕಾ ಹಾಗೂ ರಣಬೀರ್‍ ಅಭಿನಯದ ಯಾನಿಮಲ್ ಸಿನೆಮಾ ಸಹ ಶೀಘ್ರದಲ್ಲೇ ತೆರೆಕಾಣಲಿದೆ. ಜೊತೆಗೆ ಅಲ್ಲು ಅರ್ಜುನ್ ರವರ ಪುಷ್ಪಾ-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

Most Popular

To Top