News

ಅನ್ಯಧರ್ಮದ ಯುವಕನನ್ನು ಪ್ರೀತಿಸಿದ ಮಗಳನ್ನು ರಾಡ್ ನಿಂದ ಹೊಡೆದು, ಕ್ರಿಮಿನಾಶಕ ಕುಡಿಸಿ ಕೊಂದ ಅಪ್ಪ….!

ಪ್ರೀತಿಯ ವಿಚಾರಕ್ಕೆ ಅನೇಕ ಕೊಲೆಗಳು ನಡೆದಿರುವುದರ ಬಗ್ಗೆ ಕೇಳಿದ್ದೇವೆ. ಅದೇ ಮಾದರಿಯಲ್ಲಿ ತನ್ನ ಮಗಳು ಅನ್ಯ ಕೋಮಿನ ಯುವಕನನ್ನು ಪ್ರೀತಿ ಮಾಡಿದ್ದರಿಂದ ಕೆರಳಿದ ತಂದೆ ತನ್ನ 14 ವರ್ಷದ ಮಗಳಿಗೆ ರಾಡ್ ನಿಂದ ಥಳಿಸಿ, ಬಲವಂತವಾಗಿ ಕ್ರಿಮಿನಾಶಕ ಔಷಧಿಯನ್ನು ಕುಡಿಸಿ ಕೊಲೆ ಮಾಡಿದರುವಂತಹ ಘಟನೆಯೊಂದು ನಡೆದಿದೆ. ಈ ಘಟನೆ ಕೇರಳದ ಎರ್ನಾಕುಲಂ ಎಂಬಲ್ಲಿ ನಡೆದಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಕೇರಳದ ಎರ್ನಾಕುಲಂ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 14ವರ್ಷದ ಮಗಳನ್ನು ಬರ್ಬತವಾಗಿ ಕಬ್ಬಿಣದ ರಾಡಿನಿಂದ ಹೊಡೆದು, ಬಳಿಕ ಬಲವಂತವಾಗಿ ಕ್ರಿಮಿನಾಶಕ ನೀಡಿ ಕೊಲೆಮಾಡಿದ್ದಾನೆ. ಈ ಘಟನೆ ಕಳೆದ ಅ.29 ರಂದು ನಡೆದಿದ್ದು, ಹಲ್ಲೆಗೊಳಗಾದ ಬಾಲಕಿ ಒಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕಳೆದ ಮಂಗಳವಾರ ಮೃತಪಟ್ಟಿದ್ದಾಳೆ. ಕೊಲೆ ಮಾಡಿದ ಆರೋಪಿಯನ್ನು 43 ವರ್ಷದ ಅಬಿಸ್ ಮೊಹಮ್ಮದ್ ನನ್ನು ಪೊಲೀಸರು ಬಂಧಿಸಿದ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲು ಮಾಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಅಬೀಸ್ ಮೊಹಮ್ಮದ್ ತನ್ನ ಮಗಳು ಅನ್ಯ ಧರ್ಮದ ಹುಡುಗನೊಂದಿಗೆ ಪೋನ್ ನಲ್ಲಿ ಮಾತನಾಡಿದ್ದಕ್ಕಾಗಿ ಕೋಪಗೊಂಡಿದ್ದಾನೆ. ಈ ಬಗ್ಗೆ ಮಗಳಿಗೆ ಅನೇಕ ಬಾರಿ ಎಚ್ಚರಿಕೆ ಸಹ ನೀಡಿದ್ದಾರೆ. ಯಾರ ಜೊತೆಗೆ ಮಾತನಾಡಬೇಡ ಎಂದು ಹೇಳಿದ್ದರೂ ಬಾಲಕಿ ಆ ಹುಡುಗನೊಂದಿಗೆ ಮಾತನಾಡುತ್ತಲೇ ಇದ್ದಿದ್ದನ್ನು ಕಂಡ ತಂದೆ ಕೋಪಗೊಂಡು ಕಬ್ಬಿಣದ ರಾಡ್ ನಿಂದ ದಾರುಣವಾಗಿ ಬಾಲಕಿಯನ್ನು ಥಳಿಸಿದ್ದಾನೆ. ಬಳಿಕ ಬಲವಂತವಾಗಿ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿದ್ದಾನೆ. ಆರೋಪಿ ಅಬೀಸ್ ನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ ಎನ್ನಲಾಗಿದೆ.

Most Popular

To Top