ಬೆಕ್ಕನ್ನು ಸಹ ಬಿಡದ ವಿಕೃತ ಕಾಮಿ, ಹಾಲು ಕುಡಿಸುವ ನೆಪದಲ್ಲಿ ಸಾಕು ಬೆಕ್ಕಿನ ಮೇಲೆ ಅತ್ಯಾಚಾರವೆಸಗಿದ ಕಾಮುಕ…..!

Follow Us :

ಸಮಾಜದಲ್ಲಿ ವಿಕೃತ ಕಾಮಿಗಳು ತಮ್ಮ ವಿಕೃತಿಯನ್ನು ಮೆರೆಯುತ್ತಿರುತ್ತಾರೆ. ಪುಟ್ಟ ಕಂದಮ್ಮಗಳಿಂದ ಹಿಡಿದು ವಯೋವೃದ್ದರ ಮೇಲೂ ಸಹ ಲೈಂಗಿಕ ದೌರ್ಜನ್ಯವೆಸಗುವಂತಹ ನೀಚ ಕೃತ್ಯಕ್ಕೆ ಮುಂದಾಗಿರುತ್ತಾರೆ. ಅದರಲ್ಲೂ ಮತ್ತೆ ಕೆಲವರು ಪ್ರಾಣಿಗಳ ಮೇಲೂ ಸಹ ತಮ್ಮ ಕಾಮ ತೀರಿಸಿಕೊಳ್ಳಲು ಮುಂದಾಗುತ್ತಾರೆ. ಅದೇ ಮಾದರಿಯಲ್ಲಿ ಯುವಕನೋರ್ವ ಸಾಕು ಬೆಕ್ಕಿನ ಮೇಲೆ ಅತ್ಯಾಚಾರ ವೆಸಗಿರುವ ಆರೋಪ ಕೇಳಿಬಂದಿದ್ದು, ಆತನ ವಿರುದ್ದ ಪ್ರಕರಣ ಸಹ ದಾಖಲಾಗಿದೆ.

ಡೆಹ್ರಾಡೂನ್ ನ ಕ್ಯಾಂಟ್ ಕೊಟ್ಟಾಲಿ ವ್ಯಾಪ್ತಿಯ ಡಾಕ್ರಾದಿಂದ ಈ ಅಘಾತಕಾರಿ ಸುದ್ದಿ ಕೇಳಿಬಂದಿದೆ. ಮನೆಯಲ್ಲಿ ಸಾಕಿರುವ ಬೆಕ್ಕಿನ ಮೇಲೆ ಯುವಕ ಅತ್ಯಾಚಾರ ವೆಸಗಿದ್ದಾನೆ ಆರೋಪಿ ಯುವಕನನ್ನು 23 ವರ್ಷದ ಪವನ್ ಕುಮಾರ್‍ ಎಂದು ಗುರ್ತಿಸಲಾಗಿದ್ದು, ಆರೋಪಿಯನ್ನು ಬಿಹಾರ ಮೂಲದ ವ್ಯಕ್ತಿಯೆಂದು ಹೇಳಲಾಗಿದೆ. ಆರೋಪಿ ಯುವಕ ಸಾಕು ಬೆಕ್ಕನ್ನು ತನ್ನ ಕಾಮ ತೃಷೆಗೆ ಬಳಸಿಕೊಂಡಿದ್ದಾನೆ. ಬೆಕ್ಕಿಗೆ ಹಾಲು ಕುಡಿಸುವ ನೆಪದಲ್ಲಿ ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಈ ಸಮಯದಲ್ಲಿ ಬೆಕ್ಕನ್ನು ನೋಡಲು ಹೋದ ಮಾಲಕಿ ಬೆಕ್ಕಿನೊಂದಿಗೆ ಆತ ಅನುಮಾನಾದಸ್ಪದವಾಗಿ ಇರುವುದನ್ನು ಕಂಡಿದ್ದಾಳೆ.

ಬಳಿಕ ಮಹಿಳೆ ಬೆಕ್ಕನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾಳೆ. ಈ ವೇಳೆ ಬೆಕ್ಕಿನೊಂದಿಗೆ ಅಸ್ವಾಭಾವಿಕ ಕೃತ್ಯಗಳು ನಡೆದಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಬೆಕ್ಕಿನ ಬಾಲಕಿ ಮಮತಾ ಥಾಪಾ ಈ ಬಗ್ಗೆ ದೂರು ನೀಡಿದ್ದಾರೆ. ಬೆಕ್ಕಿಗೆ ಪ್ರಾಣಿ ಪ್ರೇಮಿ ಶೈಲಿ ಯಾದವ್ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಬೆಕ್ಕಿನ ಮಾಲಕಿಯ ಮನೆಯಲ್ಲಿ ನಾಲ್ವರು ಯುವಕರು ಬಾಡಿಗೆಗೆ ಇದ್ದರು. ನ.1 ರಂದು ಈ ಮೂವರು ಯುವಕರು ಕೆಲಸಕ್ಕೆ ಹೋಗಿದ್ದರಂತೆ, ಕೊಠಡಿಯಲ್ಲಿ ಆರೋಪಿ ಪವನ್ ಕುಮಾರ್‍ ಒಬ್ಬನೇ ಇದ್ದಾಗ ಈ ಘಟನೆ ನಡೆದಿದೆ. ಇನ್ನೂ ಆರೋಪಿಯ ವಿರುದ್ದ ಪ್ರಾಣಿ ಹಿಂಸೆ ಕಾಯ್ದೆ ಹಾಗೂ ನೈಸರ್ಗಿಕ ಲೈಂಗಿಕ ಶೋಷಣೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.