News

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಚಿರತೆ, ಒಬ್ಬೊಬ್ಬರೇ ಓಡಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಎಚ್ಚರಿಕೆ….!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿಯ ಕೂಡ್ಲು, ಸಿಂಗಸಂದ್ರ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಈ ಕಾರಣದಿಂದ ಆ ಭಾಗದ ಜನರಿಗೆ ಆತಂಕ ಶುರುವಾಗಿದೆ. ಇನ್ನೂ ಜನರು ಒಬ್ಬೊಬ್ಬರೇ ಓಡಾಡದಂತೆ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿ ಹಾಗೂ ಸಿಂಗಸಂದ್ರ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಈ ಕಾರಣದಿಂದ ಸ್ಥಳೀಯ ನಿವಾಸಿಗಳು ಭಯಭೀತರನ್ನಾಗಿ ಮಾಡಿದೆ. ಸ್ಥಳೀಯ ನಿವಾಸಿ ದಾಮೋದರ್‍ ರೆಡ್ಡಿ ಎಂಬುವವರು ಮನೆಯ ಬಳಿ ಚಿರತೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಬೀದಿ ನಾಯಿಗಳು ಚಿರತೆಯನ್ನು ನೋಡಿ ಓಡಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಚಿರತೆ ನೋಡಿದ ಸ್ಥಳೀಯರು ಮನೆಯಲ್ಲಿಯೇ ಭಯದಿಂದ ಉಳಿಯುವಂತಾಗಿದೆ. ಸ್ಥಳೀಯರು ಕೂಡಲೇ ಚಿರತೆಯನ್ನು ಹಿಡಿಯುವಂತೆ ಒತ್ತಾಯ ಸಹ ಮಾಡಿದ್ದಾರೆ.

ಇನ್ನೂ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ ಶನಿವಾರವೇ ತಂಡವನ್ನು ಸಹ ಕಳುಹಿಸಿ ಚಿರತೆಯನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಚಿರತೆಯ ಸುಳಿವು ಇನ್ನೂ ಸಿಕ್ಕಿಲ್ಲದ ಕಾರಣ ಹುಡುಕಾಟ ಮುಂದುವರೆದಿದ್ದು, ಸ್ಥಳೀಯ ಜನತೆ ಎಚ್ಚರಿಕೆಯಿಂದ ಇರಬೇಕೆಂದು ಬೆಂಗಳೂರು ನಗರ ಅರಣ್ಯ ಉಪಸಂರಕ್ಷಣಾಧಿಕಾರಿ ಎನ್.ರವೀಂದ್ರ ಕುಮಾರ್‍ ತಿಳಿಸಿದ್ದಾರೆ. ರಾತ್ರಿ ಸಮಯದಲ್ಲಿ ಯಾರೂ ಒಂಟಿಯಾಗಿ ಓಡಾಡಬೇಡಿ, ಅನಿವಾರ್ಯವಿದ್ದರೇ ಕಾರಿನಲ್ಲಿ ಓಡಾಡಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕೆ.ಆರ್‍.ಪುರಂ ಅರಣ್ಯಾಧಿಕಾರಿಗಳು ಚಿರತೆಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

Most Popular

To Top