Film News

ಸಂಕ್ರಾಂತಿಯಂದು ಆಂರೆಂಜ್ ಕಲರ್ ಡ್ರೆಸ್ ನಲ್ಲಿ ಟ್ರೆಡಿಷನಲ್ ಲುಕ್ಸ್ ಕೊಟ್ಟ ರಶ್ಮಿಕಾ, ವೈರಲ್ ಆದ ಪೊಟೋಸ್…..!

ಸ್ಯಾಂಡಲ್ ವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಕಡಿಮೆ ಸಮಯದಲ್ಲೇ ಭಾರಿ ಫೇಂ ಪಡೆದುಕೊಂಡರು. ತೆಲುಗು ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ಅಲ್ಲೂ ಸಹ ಒಳ್ಳೆಯ ಸಾಧನೆ ಮಾಡಿದರು. ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲೂ ಸಹ ರಶ್ಮಿಕಾ ಎಂಟ್ರಿ ಕೊಟ್ಟರು. ಇತ್ತೀಚಿಗೆ ತೆರೆಕಂಡ ಯಾನಿಮಲ್ ಸಿನೆಮಾದ ಮುಳಕ ಆಕೆ ಬ್ಲಾಕ್ ಬ್ಲಸ್ಟರ್‍ ಹಿಟ್ ಸಹ ಪಡೆದುಕೊಂಡರು. ಈ ಸಿನೆಮಾ ಬರೊಬ್ಬರಿ 900 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಆಕೆ ಸಂಕ್ರಾಂತಿ ಹಬ್ಬದ ನಿಮಿತ್ತ ಆರೆಂಜ್ ಕಲರ್‍ ಲೆಹಂಗಾದಲ್ಲಿ ಟ್ರೆಡಿಷನಲ್ ಆಗಿಯೇ ಎಲ್ಲರನ್ನೂ ಕಟ್ಟಿಹಾಕಿದ್ದಾರೆ ಎನ್ನಲಾಗುತ್ತಿದೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದರು. ಆಕೆ ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಆಕೆ ಹಂಚಿಕೊಂಡ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಸಹ ಆಗುತ್ತಿರುತ್ತದೆ. ಜೊತೆಗೆ ಅದೇ ಮಾದರಿಯಲ್ಲಿ ಆಕೆಯನ್ನು ವಿಮರ್ಶೆ ಸಹ ಮಾಡುತ್ತಿರುತ್ತಾರೆ. ಅದರಲ್ಲೂ ರಶ್ಮಿಕಾ ಬಾಲಿವುಡ್ ಗೆ ಹಾರಿದ ಬಳಿಕ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಸಂಕ್ರಾಂತಿ ಹಬ್ಬದಂದು ಸ್ಪೇಷಲ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಆರೆಂಜ್ ಕಲರ್‍ ಸೀರೆಯಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಆರೆಂಜ್ ಕಲರ್‍ ಲೆಂಹಾಗದಲ್ಲಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ. ಟ್ರೆಡಿಷಿನಲ್ ಆಗಿ ಆಕೆಯನ್ನು ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ರಶ್ಮಿಕಾ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಆಕೆ ಪೋಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಲೈಕ್ ಗಳು ಕಾಮೆಂಟ್ ಗಳು ಹರಿದುಬರುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಸಹ ರಶ್ಮಿಕಾಗೆ ಸಂಕ್ರಾಂತಿ ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ರಶ್ಮಿಕಾ ಯಾನಿಮಲ್ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಸದ್ಯ ಆಕೆ ಪುಷ್ಪಾ-2 ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನೆಮಾದ ಜೊತೆಗೆ ರೈನ್ ಬೋ, ದಿ ಗರ್ಲ್ ಫ್ರೆಂಡ್, ಚಾವ ಮೊದಲಾದ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top