ರಾಮ್ ಚರಣ್ ಮಗಳೊಂದಿಗೆ ಆಟವಾಡಿದ ಅಲ್ಲು ಪುತ್ರಿ ಆರ್ಹಾ, ವೈರಲ್ ಆದ ಕ್ಯೂಟ್ ವಿಡಿಯೋ…..!

Follow Us :

ಸಂಕ್ರಾಂತಿ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಮೆಗಾ ಫ್ಯಾಮಿ ಹಾಗೂ ಅಲ್ಲು ಫ್ಯಾಮಿಲಿ ಒಟ್ಟಾಗಿ ಸೇರಿದ್ದರು. ಬೆಂಗಳೂರಿನ ಫಾರಂ ಹೌಸ್ ನಲ್ಲಿ ಎರಡೂ ಕುಟುಂಬಗಳೂ ಅದ್ದೂರಿಯಾಗಿ ಸಂಕ್ರಾಂತಿಯನ್ನು ಆಚರಿಸಿದ್ದರು. ಈ ಸಂಬಂಧ ಕೆಲವೊಂದು ಪೊಟೋಗಳು ಹಾಗೂ ವಿಡಿಯೋಗಳೂ ಸಹ ವೈರಲ್ ಆಗಿತ್ತು. ಇದೀಗ ರಾಮ್ ಚರಣ್ ಪುತ್ರಿ ಕ್ಲಿಂಕಾರ ಜೊತೆಗೆ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಆಟವಾಡಿದ ಕ್ಯೂಟ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಇತ್ತೀಚಿಗೆ ಮೆಗಾ ಕುಟುಂಬ ಹಾಗೂ ಅಲ್ಲು ಕುಟುಂಬ ವಿಶೇಷ ದಿನಗಳಂದು ಭೇಟಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಸಂಕ್ರಾಂತಿ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಎರಡೂ ಕುಟುಂಬಗಳು ಒಂದು ಕಡೆ ಸೇರಿದೆ. ಇನ್ನೂ ಈ ಸಂಬ್ರಮದ ಕೆಲವೊಂದು ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಈ ಪೊಟೋದಲ್ಲಿ ಇಡೀ ಮೆಗಾ ಕುಟುಂಬ ಹಾಗೂ ಅಲ್ಲು ಕುಟುಂಬದ ಬಹುತೇಕ ಎಲ್ಲಾ ಸದಸ್ಯರೂ ಭಾಗಿಯಾಗಿದ್ದರು. ಅದರಲ್ಲೂ ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿಯವರ ಅಕಿರಾ ನಂದನ್, ಆದ್ಯ ಕಾಣಿಸಿದ್ದು ಅಭಿಮಾನಿಗಳು ಮತಷ್ಟು ಖುಷಿಯಾಗಿದ್ದಾರೆ. ಇದೀಗ ಈ ಸಂಭ್ರಮದಿಂದ ಮತ್ತೊಂದು ವಿಡಿಯೋ ಹೊರಬಂದಿದ್ದು, ಈ ವಿಡಿಯೋ ತುಂಬಾನೆ ಸಖತ್ ವೈರಲ್ ಆಗುತ್ತಿರುತ್ತದೆ.

ಈ ವಿಡಿಯೋದಲ್ಲಿ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಹಾಗೂ ರಾಮ್ ಚರಣ್ ಪುತ್ರಿ ಕ್ಲಿಂಕಾರ ಗೆ ಸಂಬಂಧಿಸಿದ ವಿಡಿಯೋ ಆಗಿದೆ. ಈ ವಿಡಿಯೋದಲ್ಲಿ ಅಲ್ಲು ಅರ್ಹ ಉಪಾಸನಾ ಹಾಗೂ ಕ್ಲಿಂಕಾರ ಜೊತೆಗೆ ಆಟವಾಡುತ್ತಿರುತ್ತಾಳೆ. ಕ್ಲಿಂಕಾರ ಪುಟ್ಟ ಪಾದಗಳನ್ನು ಹಿಡಿದು ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋಗೆ ಪುಷ್ಪಾ ಸಿನೆಮಾ ಶ್ರೀವಲ್ಲಿ ಹಾಡನ್ನು ಹಾಕಲಾಗಿದೆ. ಅಲ್ಲು ಅರ್ಹಾ ಕ್ಲಿಂಕಾರ ಳನ್ನು ಶ್ರೀವಲ್ಲಿಯಾಗಿ ಆಟವಾಡಿಸುತ್ತಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಜೊತೆಗೆ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ಜೊತೆಯಾಗಿ ಸಂಕ್ರಾಂತಿ ಸಂಭ್ರಮಿಸಿದ್ದು ಅವರ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ ಎನ್ನಲಾಗಿದೆ.

ಇನ್ನೂ ಅಲ್ಲು ಅರ್ಜುನ್ ಪುಷ್ಪಾ-2 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಒದೇ ವರ್ಷ ಆ.15 ರಂದು ಈ ಸಿನೆಮಾ ಅದ್ದೂರಿಯಾಗಿ ತೆರೆಕಾಣಲಿದೆ. RRR ಸಿನೆಮಾದ ಬಳಿಕ ರಾಮ್ ಚರಣ್ ಗೇಂ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಖ್ಯಾತ ನಿರ್ದೇಶಕ ಶಂಕರ್‍ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಈ ಸಿನೆಮಾ ಸಹ ಶೀಘ್ರದಲ್ಲೇ ತೆರೆಕಾಣಲಿದೆ ಎನ್ನಲಾಗುತ್ತಿದೆ.