News

ಲೇಪಾಕ್ಷಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ, ರಾಮ ಭಜನೆ ಮಾಡುತ್ತಾ ಪುಳಕಿತರಾದ ಮೋದಿ…..!

ಇಡೀ ಭಾರತದ ಹಿಂದೂಗಳ ಸುಮಾರು ವರ್ಷಗಳ ಕನಸಾದ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಟಾಪನೆಗೆ ದಿನಗಣನೆ ಶುರುವಾಗಿದೆ. ರಾಮಯಣದಲ್ಲಿ ಮಹತ್ವದ ಸ್ಥಾನ ಪಡೆದಿರುವ ಆಂಧ್ರಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ ಮೋದಿಯವರು ರಾಮ ಭಜನೆ ಮಾಡುತ್ತಾ ಕಾಣಿಸಿಕೊಂಡಿದ್ದಾರೆ.

ರಾವಣ ಸೀತಾ ಮಾತೆಯನ್ನು ಅಪಹರಿಸುವಾಗ ಜಟಾಯು ಪಕ್ಷಿ ಇದೇ ಜಾಗದಲ್ಲಿ ರಾವಣನ ಬೆನ್ನಟ್ಟಿ ಹೋರಾಟ ಮಾಡಿತ್ತು. ಇದೇ ವೇಳೆ ರಾವಣ ತನ್ನ ಖಡ್ಗದಿಂದ ಜಟಾಯು ರೆಕ್ಕೆಗಳನ್ನು ಕಡಿಯುತ್ತಾನೆ. ಬಳಿಕ ಜಟಾಯು ಪಕ್ಷಿ ನೆಲಕ್ಕೆ ಬಿದ್ದು ಸಾವಿನ ಅಂಚಿನಲ್ಲಿರುವಾಗ ರಾವಣ ಸೀತೆಯನ್ನು ಅಪಹರಣ ಮಾಡಿದ ವಿಚಾರ ಶ್ರೀರಾಮನಿಗೆ ತಿಳಿಸಿ ಪ್ರಾಣ ಬಿಡುತ್ತದೆ. ಬಳಿಕ ಶ್ರೀರಾಮ ಜಟಾಯು ಅಂತ್ಯಕ್ರಿಯೆ ನಡೆಸಿ ಮೋಕ್ಷ ಕಲ್ಪಿಸಿದ ಎಂದು ಹೇಳಲಾಗುತ್ತಿದೆ. ಈ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದ ಸ್ಥಳಕ್ಕೆ ಪ್ರಧಾನಿ ಭೇಟಿ ನೀಡಿದ್ದರು. ಈ ವೇಳೆ ವೀರಭದ್ರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೇ ಸಮಯದಲ್ಲಿ ರಾಮ ಭಜನೆ ಮಾಡುತ್ತಾ ಪುಳಕಿತರಾದರು.

ಏಷ್ಯಾ ಖಂಡದಲ್ಲಿ ಸುಮಾರು 541 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಂಧ್ರಪ್ರದೇಶದ ಗೋರಂಟ್ಲ ಮಂಡಲದ ಪಾಲಸಮುದ್ರಂ ಎಂಬಲ್ಲಿ ಕಸ್ಟಮ್ಸ್, ಪರೋಕ್ಷ ತೆರಿಗೆಗಳ ಮತ್ತು ಮಾದಕ ವಸ್ತುಗಳ ರಾಷ್ಟ್ರೀಯ ಅಕಾಡೆಮಿಯನ್ನು ಸಹ ಉದ್ಘಾಟನೆ ಮಾಡಲಾಗಿದೆ. ಪುಟ್ಟಪರ್ತಿ ವಿಮಾನ ನಿಲ್ದಾಣದಲ್ಲಿ ಮೋದಿಗೆ ರಾಷ್ಟ್ರ ಗವರ್ನರ್‍ ಅಬ್ದುಲ್ ನಜೀರ್‍, ಆಂಧ್ರ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸೇರಿದಂತೆ ಕೆಲವು ಅಧಿಕಾರಿಗಳು ಸ್ವಾಗತ ಕೋರಿದರು. ಈ ಅಕಾಡೆಮಿಯಲ್ಲಿ ಐಎಎಸ್, ಐಪಿಎಸ್, ಐಆರ್‍ ಎಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ.

Most Popular

To Top