ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ನ್ಯಾಷನಲ್ ಕ್ರಷ್ ರಶ್ಮಿಕಾ, ಅಂಡರ್ 30 ವಿಭಾಗದಲ್ಲಿ ಸ್ಥಾನ ಪಡೆದುಕೊಂಡ ರಶ್……!

Follow Us :

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕನ್ನಡ ಸಿನೆಮಾದ ಮೂಲಕ ಫೇಂ ಪಡೆದುಕೊಂಡು ಸದ್ಯ ಸೌತ್ ಅಂಡ್ ನಾರ್ತ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್‍ ನಟಿಯರ ಸಾಲಿಗೆ ಸೇರಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಸಾಗುತ್ತಿರುವ ರಶ್ಮಿಕಾ ಮಂದಣ್ಣ ರವರಿಗೆ ಮತ್ತೊಂದು ಹಿರಿಮೆ ಸಿಕ್ಕಿದೆ. ಪ್ರತಿಷ್ಟಿತ ಪೋರ್ಬ್ಸ್ ಇಂಡಿಯಾದಲ್ಲಿ ರಶ್ಮಿಕಾ ಸ್ಥಾನ ಪಡೆದುಕೊಂಡಿದ್ದಾರೆ. ಫೆ.2024 ಪೋರ್ಬ್ಸ್ ಇಂಡಿಯಾದ ಅಂಡರ್‍ 30 ವಿಭಾಗದಲ್ಲಿ ಸ್ಥಾನ ಪಡೆದುಕೊಂಡು ಎಲ್ಲರನ್ನೂ ಆಶ್ಚರ್ಯಪಡಿಸಿದ್ದಾರೆ. ಸದ್ಯ 27 ವರ್ಷ ವಯಸ್ಸಿನ ರಶ್ಮಿಕಾ ದೇಶದ ಸಿನಿರಂಗದಲ್ಲಿ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿರುವ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಇದೀಗ ಸೌತ್ ಅಂಡ್ ನಾರ್ತ್ ನಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಜೊತೆಗೆ ಅತ್ಯಂತ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯರ ಪಟ್ಟಿಯಲ್ಲಿ ಸಹ ಇದ್ದಾರೆ. ಅದರಲ್ಲೂ ಆಕೆ ಪುಷ್ಪಾ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಮಾತ್ರವಲ್ಲದೇ ಪ್ಯಾನ್ ವರ್ಲ್ಡ್ ನಲ್ಲಿ ಕ್ರೇಜ್ ಪಡೆದುಕೊಂಡರು. ಸದ್ಯ ಪುಷ್ಪಾ-2 ಸಿನೆಮಾದಲ್ಲೂ ಸಹ ರಶ್ಮಿಕಾ ನಟಿಸುತ್ತಿದ್ದು, ಈ ಸಿನೆಮಾ ಆಸ್ಕರ್‍ ಅವಾರ್ಡ್ ಪಡೆದುಕೊಳ್ಳುವ ಅವಕಾಶಗಳೂ ಸಹ ತುಂಬಾನೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ನ್ಯಾಷನಲ್ ಕ್ರಷ್ ಎಂಬ ಖ್ಯಾತಿಗೆ ಗುರಿಯಾಗಿರುವ ರಶ್ಮಿಕಾ ಇಂಟರ್‍ ನ್ಯಾಷನಲ್ ಕ್ರಷ್ ಆದರೂ ಆಗಬಹುದು ಎಂದು ಹೇಳಲಾಗುತ್ತಿದೆ.

ಇದೀಗ ರಶ್ಮಿಕಾ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವದ ಟಾಪ್ ಮ್ಯಾಗಜೈನ್ ಪೋರ್ಬ್ಸ್ ನ ಇಂಡಿಯನ್ ವರ್ಷನ್ ನಲ್ಲಿ ರಶ್ಮಿಕಾ ರವರ ಆರ್ಟಿಕಲ್ ಪ್ರಕಟಿಸಿದೆ. ಭಾರತದಲ್ಲಿ ಟಾಪ್ ಸ್ಥಾನದಲ್ಲಿರುವ ಯುವ ವ್ಯಾಪಾರಿಗಳು, ಸಿನೆಮಾ ಸ್ಟಾರ್‍ ಗಳು ಸೇರಿದಂತೆ ಹೊಸ ಆವಿಷ್ಕಾರಗಳಲ್ಲಿ ಸಾಧನೆ ಮಾಡುವಂತಹ ಹಾಗೂ ಸ್ಪೋರ್ಟ್ಸ್ ಗೆ ಸಂಬಂಧಿಸಿದ ಸಾಧಕರನ್ನು ಪೋರ್ಬ್ಸ್ ಇಂಡಿಯಾ ಪ್ರತ್ಯೇಕವಾದ ಆರ್ಟಿಕಲ್ ಪ್ರಕಟಿಸಿದೆ. ಈ ಆರ್ಟಿಕಲ್ ನಲ್ಲಿ ಸಿನೆಮಾ ರಂಗದಿಂದ ರಶ್ಮಿಕಾ ಮಂದಣ್ಣ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಮುಖಪುಟದಲ್ಲಿ ಯಂಗ್ ಟ್ಯಾಲೆಂಟ್ಸ್ ಗಳೊಂದಿಗೆ ಸ್ಟಿಲ್ಸ್ ಕೊಟ್ಟಿದ್ದಾರೆ. ಈ ಪೊಟೋ ವನ್ನು ರಶ್ಮಿಕಾ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ರಶ್ಮಿಕಾ ಗೆ ಶುಭಾಷಯಗಳನ್ನು ಕೋರುತ್ತಿದ್ದಾರೆ.

ಇನ್ನೂ ರಶ್ಮಿಕಾ ಕೊನೆಯದಾಗಿ ಯಾನಿಮಲ್ ಎಂಬ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಈ ಸಿನೆಮಾದ ಬಳಿಕ ಆಕೆ ತನ್ನ ಸಂಭಾವನೆಯನ್ನು ಸಹ ಏರಿಸಿಕೊಂಡಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗುತ್ತಿದೆ. ಸದ್ಯ ರಶ್ಮಿಕಾ ಮಂದಣ್ಣ ಪುಷ್ಪಾ-2, ರೈನ್ ಬೋ, ದಿ ಗರ್ಲ್ ಫ್ರೆಂಡ್ ಸಿನೆಮಾದ ಜೊತೆಗೆ ಕಾಲಿವುಡ್ ಸ್ಟಾರ್‍ ಧನುಷ್ ಜೊತೆಗೂ ಸಹ ಸಿನೆಮಾ ಮಾಡಲಿದ್ದಾರೆ. ಜೊತೆಗ ಪ್ರಭಾಸ್ ರವ ಸ್ಪಿರಿಟ್ ಸಿನೆಮಾದಲ್ಲೂ ಸಹ ರಶ್ಮಿಕಾ ನಟಿಸಲಿದ್ದಾರೆ ಎಂಬ ರೂಮರ್‍ ಜೋರಾಗಿಯೇ ಕೇಳಿಬರುತ್ತಿದೆ.