Film News

ಲಿಪ್ ಲಾಕ್ ಮಾಡೋಕೆ ಇಷ್ಟವಾಗದೇ ಆ ನಟನ ಸಿನೆಮಾ ರಿಜೆಕ್ಟ್ ಮಾಡಿದ ಮಹಾನಟಿ ಕೀರ್ತಿ ಸುರೇಶ್……!

ನಟನೆಯ ಜೊತೆಗೆ ಸೌಂದರ್ಯವನ್ನು ಸಹ ಹೊಂದಿರುವ ನಟಿ ಕೀರ್ತಿ ಸುರೇಶ್ ಸಿನಿರಂಗದಲ್ಲಿ ಬೇಡಿಕೆಯಿರುವಂತಹ ನಟಿಯಾಗಿದ್ದಾರೆ. ಆಕೆಯ ತಾಕತ್ತು ಏನು ಎಂಬುದನ್ನು ಮಹಾನಟಿ ಸಿನೆಮಾದ ಮೂಲಕ ಪ್ರದರ್ಶನ ಮಾಡಿದರು. ಈ ಸಿನೆಮಾದ ಬಳಿಕ ಕೀರ್ತಿಗೆ ಅನೇಕ ಅವಕಾಶಗಳು ದೊರೆತವು. ಈ ಸಿನೆಮಾದಲ್ಲಿ ಆಕೆಯ ಅಭಿನಯಕ್ಕಾಗಿ ಜಾತಿಯ ಉತ್ತಮ ನಟಿಯಾಗಿ ಅವಾರ್ಡ್ ಸಹ ಪಡೆದುಕೊಂಡರು. ಕೆರಿಯರ್‍ ಆರಂಭದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಕೀರ್ತಿ ಇದೀಗ ತಾನು ಬೋಲ್ಡ್ ಆಗಿ ಸಹ ಕಾಣಿಸಬಲ್ಲೆ ಎಂಬುದನ್ನು ಸಾರಿ ಹೇಳುವ ನಿಟ್ಟಿನಲ್ಲಿ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ.

ಸ್ಟಾರ್‍ ನಟಿ ಕೀರ್ತೀ ಸುರೇಶ್ ಕೆರಿಯರ್‍ ಆರಂಭದಲ್ಲಿ ಹೋಮ್ಲಿ ಹಿರೋಯಿನ್ ಆಗಿಯೆ ಕಾಣಿಸಿಕೊಂಡರು. ಇದೀಗ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸರ್ಕಾರು ವಾರಿ ಪಾಠ ಸಿನೆಮಾದ ಬಳಿಕ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆಕೆಗೆ ಸರಿಯಾದ ಸಕ್ಸಸ್ ಸಿಗದ ಸಮಯದಲ್ಲೇ ಸರ್ಕಾರುವಾರಿ ಪಾಠ ಹಾಗೂ ದಸರಾ ಸಿನೆಮಾಗಳು ಆಕೆಗೆ ಬಿಗ್ ಬ್ರೇಕ್ ನೀಡಿತ್ತು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ಸಹ ಪಡೆದುಕೊಂಡರು. ಆದರೆ ಕೊನೆಯದಾಗಿ ಆಕೆ ಕಾಣಿಸಿಕೊಂಡ ಮೆಗಾಸ್ಟಾರ್‍ ರವರ ಭೋಳಾ ಶಂಕರ್‍ ಸಿನೆಮಾ ಪ್ಲಾಪ್ ಪಡೆದುಕೊಂಡಿತ್ತು. ಇನ್ನೂ ಈ ಹಿಂದೆ ನಟಿ ಕೀರ್ತಿ ಸುರೇಶ್ ಆ ನಟನ ಜೊತೆಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಬೇಕೆಂಬ ಕಾರಣದಿಂದ ಆ ಸಿನೆಮಾ ರಿಜೆಕ್ಟ್ ಮಾಡಿದ್ದಾರಂತೆ. ಅಷ್ಟಕ್ಕೂ ಆ ನಟ ಯಾರು ಎಂಬ ವಿಚಾರಕ್ಕೆ ಬಂದರೇ,

ನಟಿ ಕೀರ್ತಿ ಸುರೇಶ್ ಸಿನೆಮಾಗಳಲ್ಲಿ ಆಗಷ್ಟೆ ಸಕ್ಸಸ್ ಕಂಡುಕೊಳ್ಳುವ ಸಮಯದಲ್ಲಿ ಆಕೆಗೆ ಬಿಗ್ ಆಫರ ಬಂದಿತ್ತಂತೆ. ಸ್ಟಾರ್‍ ನಟ ನಿತಿನ್ ಜೊತೆಗೆ ನಟಿಸುವ ಅವಕಾಶ ಬಂದಿತ್ತಂತೆ. ಆದರೆ ಈ ಸಿನೆಮಾದಲ್ಲಿ ಕೀರ್ತಿ ಸುರೇಶ್ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಬೇಕಾಗಿತ್ತು. ಆದರೆ ಅದಕ್ಕೆ ಒಪ್ಪದ ಕೀರ್ತಿ ಸುರೇಶ್ ಆ ಸಿನೆಮಾದಲ್ಲಿ ಲಿಪ್ ಲಾಕ್ ದೃಶ್ಯ ಇದ್ದರೇ ಸಿನೆಮಾ ಮಾಡೊಲ್ಲ ಎಂದು ಹೇಳಿದ್ದರಂತೆ. ಅಂಧಾದುನ್ ಎಂಬ ತಮಿಳು ಸಿನೆಮಾದ ತೆಲುಗು ವರ್ಷನ್ ನಲ್ಲಿ ನಟಿಸೋಕೆ ನಿತಿನ್ ಜೊತೆಗೆ ಕೀರ್ತಿ ಸುರೇಶ್ ರವರನ್ನು ಸಂಪರ್ಕ ಮಾಡಿದ್ದರಂತೆ. ಆದರೆ ಆಕೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸೋಕೆ ಸಿದ್ದವಿಲ್ಲದ ಕಾರಣ ಈ ಸಿನೆಮಾವನ್ನು ರಿಜೆಕ್ಟ್ ಮಾಡಿದ್ದರಂತೆ. ನಟಿ ಕೀರ್ತಿ ಸುರೇಶ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಆಕೆ ಬಾಲಿವುಡ್‌ ಗೂ ಎಂಟ್ರಿ ಕೊಡಲಿದ್ದಾರೆ. ಇದೀಗ ಈ ಸಿನೆಮಾದ ಅಪ್ಡೇಟ್ ಸಹ ಸಿಕ್ಕಿದೆ. ಕೀರ್ತಿ ಸುರೇಶ್ ಬಾಲಿವುಡ್ ಸ್ಟಾರ್‍ ನಟ ವರುಣ್ ಧವನ್ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದೆ. VD18 ಟೈಟಲ್ ನಡಿ ಕೀರ್ತಿ ಸುರೇಶ್ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ.

Most Popular

To Top