ಕನ್ನಡದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಗೆ ಪ್ರಪೋಸ್ ಮಾಡಿದ ನಂದಮೂರಿ ಕಲ್ಯಾಣ್ ರಾಮ್, ಕ್ಯೂಟ್ ಪ್ರಪೋಸ್ ವೈರಲ್….!

Follow Us :

ತೆಲುಗು ಸಿನಿರಂಗದ ನಂದಮೂರಿ ಕುಟುಂಬದ ಸ್ಟಾರ್‍ ನಟ ನಂದಮೂರಿ ಕಲ್ಯಾಣ್ ರಾಮ್ ಇತ್ತೀಚಿಗಷ್ಟೆ ಬಿಂಬಿಸಾರ ಎಂಬ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಪಡೆದುಕೊಂಡರು. ಇದೀಗ ಕಲ್ಯಾಣ್ ರಾಮ್ ಅಮಿಗೋಸ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾ ಫೆ.10 ರಂದು ತೆರೆಗೆ ಬರಲಿದ್ದು, ಈ ಸಿನೆಮಾದಲ್ಲಿ ಕನ್ನಡದ ಬ್ಯೂಟಿ ಆಶಿಕಾ ರಂಗನಾಥ್ ಸಹ ಕಲ್ಯಾಣ್ ರಾಮ್ ಜೊತೆಗೆ ಬಣ್ಣ ಹಚ್ಚಿದ್ದಾರೆ. ಇದೀಗ ಕಲ್ಯಾಣ್ ರಾಮ್ ಆಶಿಕಾ ರಂಗನಾಥ್ ಗೆ ಪ್ರಪೋಸ್ ಮಾಡಿದ್ದಾರೆ.

ನಂದಮೂರಿ ಕಲ್ಯಾಣ್ ರಾಮ್ ಅಮಿಗೋಸ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಸಿನೆಮಾ ಪ್ರಮೋಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಸಿನೆಮಾವನ್ನು ರಾಜೇಂದ್ರರೆಡ್ಡಿ ನಿರ್ದೇಶನ ಮಾಡಿದ್ದಾರೆ. ಕಲ್ಯಾಣ್ ರಾಮ್ ಕೆರಿಯರ್‍ ನಲ್ಲೇ ಮೊದಲ ಬಾರಿಗೆ ತ್ರಿಬಲ್ ಆಕ್ಟಿಂಗ್ ಮಾಡಲಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಕಲ್ಯಾಣ್ ರಾಮ್ ಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ಇನ್ನೂ ಆಶಿಕಾ ರಂಗನಾಥ್ ಈ ಸಿನೆಮಾದ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಮಿಗೋಸ್ ಸಿನೆಮಾದ ಹಾಡುಗಳು, ಟ್ರೈಲರ್‍ ಸಹ ಬಿಡುಗಡೆಯಾಗಿದೆ. ಇನ್ನೂ ಆಶಿಕಾ ಸಹ ಅವಸರಕ್ಕೆ ಅಗತ್ಯವಿದ್ದಂತೆ ಗ್ಲಾಮರ್‍ ಸಹ ಶೋ ಮಾಡಿದ್ದಾರೆ. ಇದೀಗ ಅಮಿಗೋಸ್ ಚಿತ್ರತಂಡದ ಕಲ್ಯಾಣ್ ರಾಮ್, ಆಶಿಕಾ, ಬ್ರಹ್ಮಾಜಿ ಸ್ಟಾರ್‍ ಆಂಕರ್‍ ಸುಮಾ ಕನಕಾಲ ಹೋಸ್ಟ್ ಮಾಡುವ ಸುಮಾ ಅಡ್ಡಾ ಶೋನಲ್ಲಿ ಹಾಜರಾಗಿದ್ದರು. ಇದರ ಪ್ರೊಮೋ ಇದೀಗ ಬಿಡುಗಡೆಯಾಗಿದೆ.

ಈ ಶೋ ನಲ್ಲಿ ಸುಮಾ ಕಲ್ಯಾಣ್ ರಾಮ್ ಜೊತೆಗೆ ಸಖತ್ ಸದ್ದು ಮಾಡಿದ್ದಾರೆ. ಕಲ್ಯಾಣ್ ರಾಮ್ ಗೆ ಸುಮಾ ಅಮಿಗೋಸ್ ಎಂದರೇ ಏನು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಕಲ್ಯಾಣ್ ರಾಮ್ ಅಮಿಗೋಸ್ ಎಂದರೇ ಸ್ಪಾನಿಷ್ ನಲ್ಲಿ ಸ್ನೇಹಿತರು ಎಂದರು. ಬಳಿಕ ಸುಮಾ ಫ್ರೆಂಡ್ಸ್ ಎಂದೇ ಟೈಟಲ್ ಇಡಬಹುದಾಗಿತ್ತು ಅಲ್ವಾ ಎಂದು ಸುಮಾ ಶೈಲಿಯಲ್ಲಿ ಪಂಚ್ ಹಾಕಿದರು. ಬಳಿಕ ಶೋನಲ್ಲಿದ್ದ ಒಬ್ಬ ಹುಡುಗಿ ನನಗೆ 10 ಮಂದಿ ಹುಡುಗರು ಫಾಲೋ ಆಗುತ್ತಿದ್ದಾರೆ ಎಂದು ಹೇಳು‌ತ್ತಾರೆ. ನಾಳೆಯಿಂದ ಕಲ್ಯಾಣ್ ರಾಮ್ ಸಹ ನಿನ್ನ ಹಿಂದೆ ಬೀಳುತ್ತಾರೆ ಎಂದು ಬ್ರಹ್ಮಾಜಿ ಕುರಿತು ಕಾಮಿಡಿ ಮಾಡುತ್ತಾರೆ. ಬಳಿಕ ಸುಮಾ ಕಲ್ಯಾಣ್ ರಾಮ್ ಗೆ ಒಂದು ಟಾಸ್ಕ್ ನೀಡುತ್ತಾರೆ. ಇದೀಗ ಈ ಟಾಸ್ಕ್ ವೈರಲ್ ಆಗುತ್ತಿದೆ.

ಸುಮಾ ನೀಡಿದ ಟಾಸ್ಕ್ ನಂತೆ ಕಲ್ಯಾಣ್ ರಾಮ್ ಆಶಿಕಾ ರಂಗನಾಥ್ ಗೆ ಪ್ರಪೋಸ್ ಮಾಡಬೇಕು. ಅದರಂತೆ ಕಲ್ಯಾಣ್ ರಾಮ್ ರೋಜಾ ಹೂವನ್ನು ಹಿಡಿದು ಆಶಿಕಾ ಗೆ ಬ್ಯೂಟಿಪುಲ್ ಅಂಡ್ ಕ್ಯೂಟ್ ಆಗಿ ಪ್ರಪೋಸ್ ಮಾಡುತ್ತಾರೆ. ಬಳಿಕ ಕಲ್ಯಾಣ್ ರಾಮ್ ಸುಮಾರವರಿಗೂ ಸಹ ರೋಜ್ ನೀಡಿ ನೀವು ಸಹ ಸುಂದರವಾಗಿದ್ದೀರಾ ಎಂದು ಹೇಳುತ್ತಾರೆ. ಸದ್ಯ ಈ ಪ್ರೊಮೋ ವೈರಲ್ ಆಗುತ್ತಿದೆ. ಇನ್ನೂ ಕಲ್ಯಾಣ್ ರಾಮ್ ಅಮಿಗೋಸ್ ಸಿನೆಮಾ ಈಗಾಗಲೇ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದೆ.