ಮತ್ತೊಂದು ವಿವಾದದಲ್ಲಿ ಸಿಲುಕಿದ ಬಾಲಯ್ಯ, ಕ್ಷಮೆ ಕೋರಬೇಕೆಂದು ಆಗ್ರಹ…!

Follow Us :

ಸ್ಟಾರ್‍ ನಟ ಬಾಲಕೃಷ್ಣ ಇತ್ತೀಚಿಗೆ ವಿವಾದಗಳಿಗೆ ಕೇರ್‍ ಆಫ್ ಅಡ್ರಸ್ ಆಗುತ್ತಿದ್ದಾರೆ. ಆತ ನೀಡುವ ಕೆಲವೊಂದು ಹೇಳಿಕೆಗಳ ಕಾರಣದಿಂದ ಅನೇಕ ವಿವಾದಗಳಿಗೆ ಕಾರಣರಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಅಕ್ಕಿನೇನಿ ತೊಕ್ಕಿನೇನಿ ಎಂದು ಮಾತನಾಡಿದ್ದು, ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಅಕ್ಕಿನೇನಿ ಅಭಿಮಾನಿಗಳು ಬಾಲಕೃಷ್ಣ ರವರ ಬಗ್ಗೆ ಆಕ್ರೋಷ ಸಹ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ದಾದಿಯರನ್ನು ಉದ್ದೇಶಿಸಿ ಆತ ಮಾಡಿದ ಹೇಳಿಕೆಗಳು ವಿವಾದಕ್ಕೆ ಗುರಿಯಾಗಿದ್ದು, ಬಾಲಕೃಷ್ಣ ಕ್ಷಮೆ ಕೋರಲು ಆಗ್ರಹ ವ್ಯಕ್ತವಾಗುತ್ತಿದೆ.

ನಂದಮೂರಿ ಬಾಲಕೃಷ್ಣ ಅನೇಕ ವಿವಾದಗಳಲ್ಲಿ ಸಿಲುಕುತ್ತಿರುತ್ತಾರೆ. ವೀರಸಿಂಹಾರೆಡ್ಡಿ ಪ್ರಮೋಷನ್ ವೇಳೆಯಲ್ಲಿ ನಡೆದ ಸಂದರ್ಶನದಲ್ಲಿ ದೇವ ಬ್ರಾಹ್ಮಣರ ಗುರು ದೇವರ ಮಹರ್ಷಿ, ಅವರ ನಾಯಕ ರಾವಣಾಸುರ ಎಂದು ಕಾಮೆಂಟ್ ಮಾಡಿದ್ದರು. ಈ ಹೇಳಿಕೆಗಳ ಮೂಲಕ ದೇವಾಂಗ ಸಮುದಾಯವನ್ನು ಕೀಳಾಗಿ ನೋಡಿದ್ದಾರೆ ಎಂದು ಬಾಲಕೃಷ್ಣ ಕ್ಷಮೆ ಕೋರಲು ಒತ್ತಾಯ ಮಾಡಿದ್ದರು. ಬಳಿಕ ಬಾಲಕೃಷ್ಣ ಸಹ ತಿಳಿಯದೇ ಮಾತನಾಡಿದ್ದೇನೆ ಯಾರನ್ನೂ ಕೀಳಾಗಿ ಕಾಣುವ ಉದ್ದೇಶವಿಲ್ಲ ಎಂದು ವಿವರಣೆ ಸಹ ನೀಡಿ ಕ್ಷಮೆ ಕೋರಿದ್ದರು. ಬಳಿಕ ವೀರಸಿಂಹಾರೆಡ್ಡಿ ಸಕ್ಸ್ ಮೀಟ್ ನಲ್ಲೂ ಸಹ ಅಕ್ಕಿನೇನಿ ಅಭಿಮಾನಿಗಳನ್ನು ಕೆರಳುವಂತೆ ಅಕ್ಕಿನೇನಿ ತೊಕ್ಕಿನೇನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಾಲಕೃಷ್ಣ ಈ ಹೇಳಿಕೆಗೆ ಕ್ಷಮೆ ಕೋರಲೇ ಬೇಕು ಎಂದು ಡಿಮ್ಯಾಂಡ್ ಮಾಡಿದ್ದರು. ಆದರೆ ಬಾಲಕೃಷ್ಣ ರವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಎ.ಎನ್.ಆರ್‍ ರವರನ್ನು ನನಗಿಂತ ಅಭಿಮಾನಿಸುವವರು ಯಾರೂ ಇಲ್ಲ. ಅವರಿಗೂ ಸಹ ನಾನೆಂದರೇ ತುಂಬಾನೆ ಅಭಿಮಾನ. ಅವರನ್ನು ಅವಮಾನಿಸುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದರು.

ಇದೀಗ ಬಾಲಕೃಷ್ಣ ದಾದಿಯರ ವಿರುದ್ದ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಬಾಲಕೃಷ್ಣ ಹೋಸ್ಟ್ ಮಾಡುವ ಅನ್ ಸ್ಟಾಪುಬಲ್ ಶೋ ನಲ್ಲಿ ನರ್ಸ್‌ಗಳ ಬಗ್ಗೆ ಅನುಚಿತವಾಗಿ ಮಾತನಾಡಿದ್ದಾರೆ. ಈ ಹಿಂದೆ ಸಹ ಅವರು ಅದೇ ರೀತಿ ಮಾತನಾಡಿದ್ದರು. ಅವರು ಹೇಳಿದ ಹೇಳಿಕೆಗಳನ್ನು ವಾಪಸ್ಸು ಪಡೆದು ಕ್ಷಮೆ ಕೋರಬೇಕು ಎಂದು ಆಂಧ್ರಪ್ರದೇಶದ ದಾದಿಯರ ಸಂಕ್ಷೇಮ ಸಂಘದ ಅಧ್ಯಕ್ಷ  ಆಗ್ರಹಿಸಿದ್ದಾರೆ. ಇನ್ನೂ ಈ ವಿವಾದಕ್ಕೆ ಸಂಬಂಧಿಸಿದಂತೆ ಬಾಲಕೃಷ್ಣ ಸಹ ರಿಯಾಕ್ಟ್ ಆಗಿದ್ದಾರೆ.

ನರ್ಸ್‌ಗಳ ಬಗ್ಗೆ ಕೀಳಾಗಿ ಮಾತನಾಡಿದ್ದೇನೆ ಎಂದು ಕೆಲವರು ಅಸತ್ಯಗಳನ್ನು ಪ್ರಚಾರ ಮಾಡುತ್ತಿದ್ದಾರೆ. ನನ್ನ ಮಾತುಗಳನ್ನು ಬೇಕೆಂತಲೇ ತಿರುಚಿದ್ದಾರೆ. ನಿಸ್ವಾರ್ಥವಾಗಿ ರೋಗಿಗಳಿಗೆ ಸೇವೆಗಳನ್ನು ನೀಡುವಂತಹ ಸಹೋದರಿಯರೆಂದರೇ ನನಗೆ ತುಂಬಾನೆ ಗೌರವ, ಬಸವತಾರಕಂ ಕ್ಯಾನ್ಸರ್‍ ಆಸ್ಪತ್ರೆಯಲ್ಲಿ ನರ್ಸ್‌ಗಳ ಸೇವೆಯನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇಬೆ. ರಾತ್ರಿ ಹಗಲು ರೋಗಿಗಳಿಗೆ ಸೇವೆ ಮಾಡುತ್ತಾರೆ. ಅವರೆಂದರೇ ನನಗೆ ತುಂಬಾ ಗೌರವ, ಅವರಿಗೆ ಎಷ್ಟು ಬಾರಿ ಕೃತಜ್ಞತೆ ತಿಳಿಸಿದರೂ ಕಡಿಮೆ. ಅದರಲ್ಲೂ ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸೇವೆ ಮಾಡಿದ್ದಾರೆ. ಅವರ ಋಣ ನಾವು ತೀರಿಸಿಕೊಳ್ಳಬೇಕು. ನಿಜಕ್ಕೂ ನನ್ನ ಮಾತುಗಳು ನಿಮ್ಮ ಮನೋಭಾವಗಳಿಗೆ ದಕ್ಕೆ ತಂದಿದ್ದರೇ ನಾನು ಪಶ್ಚಾತ್ಥಾಪ ವ್ಯಕ್ತ ಪಡಿಸುತ್ತೇನೆ ಎಂದಿದ್ದಾ ಬಾಲಕೃಷ್ಣ.