ಸೀನಿಯರ್ ಬ್ಯೂಟಿ ಭಾನುಪ್ರಿಯಾ ಆ ವ್ಯಾದಿಯಿಂದ ಬಳಲುತ್ತಿದ್ದಾರಂತೆ, ಅಷ್ಟಕ್ಕೂ ಭಾನುಪ್ರಿಯಾಗಿರುವ ಸಮಸ್ಯೆಯಾದರು ಏನು?

ತೆಲುಗು ಸಿನಿರಂಗದಲ್ಲಿ ಸುಮಾರು ವರ್ಷಗಳ ಕಾಲ ತಮ್ಮ ಅದ್ಬುತವಾದ ನಟನೆಯೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿ ಮಾಡಿದ ನಟಿಯರಲ್ಲಿ ಸೀನಿಯರ್‍ ನಟಿ ಭಾನುಪ್ರಿಯಾ ಸಹ ಒಬ್ಬರಾಗಿದ್ದಾರೆ. ಫ್ಯಾಮಿಲಿ ಓರಿಯೆಂಟೆಂಡ್ ಸಿನೆಮಾಗಳ ಜೊತೆಗೆ ಕಮರ್ಷಿಯಲ್ ಸಿನೆಮಾಗಳಲ್ಲೂ ಸಹ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ತನ್ನ ಕೆರಿಯರ್‍ ನಲ್ಲಿ ಅನೇಕ ಹಿಟ್ ಸಿನೆಮಾಗಳನ್ನು ತೆಕ್ಕೆಗೆ ಹಾಕಿಕೊಂಡಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ಯಾರೆಕ್ಟರ್‍ ರೋಲ್ಸ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯರಲ್ಲಿ ಭಾನುಪ್ರಿಯಾ ಸಹ ಒಬ್ಬರಾಗಿದ್ದರು. 80-90 ರ ದಶಕದಲ್ಲಿ ತನ್ನ ಕಣ್ಣುಗಳ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ನಟಿಯಾಗಿ ಸುಮಾರು ದಶಕಗಳ ಕಾಲ ಸಿನಿರಂಗವನ್ನು ಆಳಿದ್ದರು. ಆಕೆ ಒಲ್ಳೆಯ ಡ್ಯಾನ್ಸರ್‍ ಸಹ ಆಗಿದ್ದು, ಆಕೆಗೆ ಮತಷ್ಟು ಆಫರ್‍ ಗಳು ಹರಿದುಬಂದವು. ಇನ್ನೂ ಹಿರೋಯಿನ್ ಆಗಿ ತನ್ನ ಕೆರಿಯರ್‍ ಅಂತ್ಯವಾಗುತ್ತಿದ್ದಂತೆ ಆಕೆ ಸಿನೆಮಾಗಳಿಂದ ದೂರವುಳಿದರು. ಬಳಿಕ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿಯೂ ಸಹ ಫೇಂ ಸಂಪಾದಿಸಿಕೊಂಡರು. ಅನೇಕ ಸಿನೆಮಾಗಳಲ್ಲಿ ಆಕೆ ನಟರ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾನುಪ್ರಿಯ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಭಾನುಪ್ರಿಯಾ ತಾನು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಯ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ಭಾನುಪ್ರಿಯಾ ನೆನಪಿನ ಶಕ್ತಿ  ಕಳೆದುಕೊಂಡಿರುವುದಾಗಿ ಆಕೆ ತಿಳಿಸಿದ್ದಾರೆ. ನನ್ನ ಪತಿ ಸತ್ತುಹೋದ ಬಳಿಕ ನಾನು ತುಂಬಾ ಸಮಸ್ಯೆಗೆ ಸಿಲುಕಿದ್ದೆ. ಅದರಲ್ಲೂ ನನ್ನ ಆರೋಗ್ಯ ಹಾಳಾಯಿತು. ಮೆಮೆರಿ ಲಾಸ್ ಗೆ ಗುರಿಯಾದೆ. ಸಿನೆಮಾಗಳಲ್ಲಿ ನಟಿಸದೇ ಇರಲು ಸಹ ಕಾರಣ ಸಹ ಇದೆ. ಡೈಲಾಗ್ ಗಳು ಮರೆತು ಹೋಗುತ್ತಿರುತ್ತೇನೆ. ಡ್ಯಾನ್ಸ್ ನ ಕೆಲವೊಂದು ಮುದ್ರೆಗಳನ್ನು ಸಹ ಮರೆತಿದ್ದೇನೆ. ಡ್ಯಾನ್ಸ್ ವಿಚಾರದಲ್ಲೂ ನಾನು ಹಿಂದೆ ಸರಿದೆ. ನನಗೆ ಡ್ಯಾನ್ಸ್ ಸ್ಕೂಲ್ ಮಾಡಬೇಕೆಂಬ ಮಹದಾಸೆಯಿತ್ತು. ಮೆಮೋರಿ ಲಾಸ್ ಕಾರಣದಿಂದ ಈ ಆಸೆಯನ್ನು ಸಹ ಕೈಬಿಟ್ಟೆ. ಈಗಲೂ ಸಹ ನಾನು ಮೆಡಿಸಿನ್ಸ್ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಇನ್ನೂ ನನ್ನ ಕುಟುಂಬದ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬಂದವು. ನಾನು ನನ್ನ ಪತಿಯಿಂದ ಬೇರೆಯಾಗಿದ್ದೆ ಎಂದು ಸುದ್ದಿಗಳು ಕೇಳಿಬರುತ್ತಿತ್ತು. ಅದೆಲ್ಲಾ ಸುಳ್ಳು ಸುದ್ದಿ. ನನ್ನ ಪತಿ ವಿದೇಶದಲ್ಲಿದ್ದರೂ ಸಹ ಆತ ಇಲ್ಲಿಗೆ ಬರುತ್ತಿದ್ದರು.  ನಾನು ಸಹ ಅಲ್ಲಿಗೆ ಹೋಗುತ್ತಿದೆ. ಬೇರೆಯಾಗಿದ್ದೆ ಎಂಬುದು ಸುಳ್ಳು ಸುದ್ದಿಗಳು ಎಂದು ತಮ್ಮ ವೈಯುಕ್ತಿಕ ಜೀವನದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Previous articleಕನ್ನಡದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಗೆ ಪ್ರಪೋಸ್ ಮಾಡಿದ ನಂದಮೂರಿ ಕಲ್ಯಾಣ್ ರಾಮ್, ಕ್ಯೂಟ್ ಪ್ರಪೋಸ್ ವೈರಲ್….!
Next articleಅಲ್ಲು ಅರ್ಜುನ್ ಪತ್ನಿ ಸ್ನೇಹಾ ಬಗ್ಗೆ ಅಲ್ಲು ಅರವಿಂದ್ ಕಾಮೆಂಟ್ಸ್, ನನ್ನ ಸೊಸೆ ರಿಚ್, ಆಕೆಗೆ ಆ ಅವಶ್ಯಕತೆಯಿಲ್ಲ ಎಂದ ಅಲ್ಲು ಅರವಿಂದ್..!