Film News

ವಿವಾದಾತ್ಮಕ ಹೇಳಿಕೆ ಕೊಟ್ಟ ಬಾಲಯ್ಯ, ಅಕ್ಕಿನೇನಿ ನಾಗಾರ್ಜುನ್ ಬಗ್ಗೆ ವಿವಾದಾತ್ಮಕ ಹೇಳಿಕೆ….!

ನಂದಮೂರಿ ಬಾಲಕೃಷ್ಣ ರವರು ಮಾತನಾಡುವ ಭರದಲ್ಲಿ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ತೆರೆಕಂಡ ವೀರಸಿಂಹಾರೆಡ್ಡಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು, ಅಖಂಡ ಸಿನೆಮಾದಂತೆ ಈ ಸಿನೆಮಾ ಸಹ ಬಾಲಕೃಷ್ಣ ಕೆರಿಯರ್‍ ನಲ್ಲಿ ಅಧಿಕ ಕಲೆಕ್ಷನ್ ಮಾಡಿದ ಸಿನೆಮಾ ಆಗಿದೆ. ಈ ಸಿನೆಮಾದ ವಿಜಯೋತ್ಸವ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ಈ ಕಾರ್ಯಕ್ರಮದಲ್ಲಿ ಬಾಲಯ್ಯ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ವೀರಸಿಂಹಾರೆಡ್ಡಿ ಸಿನೆಮಾದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಜೋರಾಗಿಯೇ ಮಾತನಾಡಿದ್ದಾರೆ. ಡೈಲಾಗ್ ಗಳನ್ನು ಹೊಡೆದಿದ್ದಾರೆ. ಇದೇ ಸಮಯದಲ್ಲಿ ಸಂಚಲನಾತ್ಮಕ ಹೇಳಿಕೆಗಳನ್ನು ಸಹ ನೀಡಿದ್ದಾರೆ. ಇನ್ನೂ ಎ.ಪಿ. ಸರ್ಕಾರದ ವಿರುದ್ದ ಪರೋಕ್ಷವಾಗಿ ವಿಮರ್ಶೆಗಳನ್ನು ಸಹ ಮಾಡಿದ್ದಾರೆ. ಇದೀಗ ವೀರಸಿಂಹಾರೆಡ್ಡಿ ಶೂಟಿಂಗ್ ವೇಳೆ ನಡೆದ ಕೆಲವೊಂದು ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್ ನಲ್ಲಿ ಒಬ್ಬ ಕಲಾವಿದರೊಂದಿಗೆ ಅನೇಕ ಹಳೆಯ ವಿಚಾರಗಳನ್ನು ಮಾತನಾಡಿಕೊಳ್ಳುತ್ತಿದ್ದೆವು. ವೇದ ಶಾಸ್ತ್ರಗಳು, ತಂದೆಯ ಡೈಲಾಗ್ ಗಳು, ಆ ರಂಗಾರಾವು, ಅಕ್ಕಿನೇನಿ ತೊಕ್ಕಿನೇನಿ ಎಂಬ ವಿಚಾರಗಳನ್ನು ಮಾತಾನಾಡಿಕೊಳ್ಳುತ್ತಿದ್ದೆವು ಎಂದು ಬಾಲಯ್ಯ ಹೇಳಿದ್ದಾರೆ.

ಇನ್ನೂ ಬಾಲಕೃಷ್ಣ ಅಕ್ಕಿನೇನಿ ತೊಕ್ಕಿನೇನಿ ಎಂದು ಹೇಳಿದ್ದು, ಈ ಹೇಳಿಕೆ ವಿರುದ್ದ ಅಕ್ಕಿನೇನಿ ಅಭಿಮಾನಿಗಳು ತೀವ್ರವಾಗಿ ಅಸಮಧಾನ ಹೊರಹಾಕಿದ್ದಾರೆ. ಬಾಯಿಗೆ ಬಂದಂತೆ ಹೇಳುವುದು ಸರಿಯೇ ಎಂದು ವಿಮರ್ಶೆಗಳನ್ನು ಸಹ ಮಾಡುತ್ತಿದ್ದಾರೆ. ಸದಾ ತಂದೆಯ ಬಗ್ಗೆ ಮಾತನಾಡುವ ಬಾಲಕೃಷ್ಣ, ಇತರೆ ಲೆಜೆಂಡ್ ನಟರಿಗೂ ಸಹ ಗೌರವ ಕೊಡುವುದನ್ನು ಕಲಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನೂ ಬಾಲಕೃಷ್ಣ ಅನೇಕ ಬಾರಿ ಇಂತಹ ಕಾಮೆಂಟ್ ಗಳ ಮೂಲಕ ವಿವಾದಗಳನ್ನು ಸೃಷ್ಟಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಅಕ್ಕಿನೇನಿ ನಾಗೇಶ್ವರ್‍ ರಾವ್ ರನ್ನು ತೊಕ್ಕಿನೇನಿ ಎಂದು ಹೇಳಿರುವುದು ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ಈಗಾಗಲೇ ಬಾಲಕೃಷ್ಣ ಹಾಗೂ ನಾಗಾರ್ಜುನ ಮಧ್ಯೆ ವಿಭೇದಗಳು ನಡೆಯುತ್ತಿದೆ ಎಂಬ ಪ್ರಚಾರ ನಡೆಯುತ್ತಿದೆ. ಇಂತಹ ಸಮಯದಲ್ಲಿ ಬಾಲಕೃಷ್ಣ ಮಾಡಿದ ಈ ಹೇಳಿಕೆಗಳು ಯಾವ ರೀತಿ ಪರಿಣಾಮಕಾರಿಯಾಗಲಿದೆ ಎಂಬುದನ್ನು ನೋಡಬೇಕಿದೆ. ಇನ್ನೂ ಬಾಲಕೃಷ್ಣ ಅಭಿಮಾನಿಗಳು ಆ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಬೇಕು ಎಂದು ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅಕ್ಕಿನೇನಿ ಅಭಿಮಾನಿಗಳು ಸೇರಿದಂತೆ ಅನೇಕರು ಬಾಲಕೃಷ್ಣ ಈ ರೀತಿಯ ಹೇಳಿಕೆ ನೀಡಬಾರದು ಎಂದು ಅಭಿಪ್ರಾಯಪಡುತ್ತಿದ್ದಾರೆ.

Most Popular

To Top