Film News

ಬಾಯ್ ಕಟ್ ಬಾಲಿವುಡ್ ಕುರಿತು ಖಾರವಾಗಿ ಪ್ರತಿಕ್ರಿಯಿಸಿ ಕರಿನಾ, ಸಿನೆಮಾಗಳಿಲ್ಲದೇ ಇದ್ದರೇ ನಿಮಗೆ ಮನರಂಜನೆ ಎಲ್ಲಿಂದ ಎಂದ ನಟಿ….!

ಇತ್ತೀಚಿಗೆ ಬಾಲಿವುಡ್ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣುತ್ತಿಲ್ಲ. ಕಳೆದ ವರ್ಷ ಬಾಲಿವುಡ್ ನ ಅನೇಕ ಸ್ಟಾರ್‍ ಗಳ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದಕ್ಕೆ ಜೊತೆಯಾಗಿ ಬಾಯ್ ಕಟ್ ಬಾಲಿವುಡ್ ಎಂಬ ಟ್ರೆಂಡ್ ಸಹ ಜೋರಾಗಿಯೇ ನಡೆಯುತ್ತಿದೆ. ಬಾಲಿವುಡ್ ಸಿನೆಮಾಗಳು ಸೋಲಲು ಇದು ಸಹ ಒಂದು ಕಾರಣ ಎನ್ನಲಾಗುತ್ತಿದೆ. ಇನ್ನೂ ಈ ಬಗ್ಗೆ ಬಾಲಿವುಡ್ ಸೀನಿಯರ್‍ ನಟಿ ಕರೀನಾ ಕಪೂರ್‍ ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ ಸಿನೆಮಾಗಳಿಗೆ ಬಾಯ್ ಕಟ್ ಟ್ರೆಂಡ್ ತುಂಬಾನೆ ಸಮಸ್ಯೆಯಾಗಿ ಪರಿಣಮಿಸಿದೆ ಎನ್ನಬಹುದಾಗಿದೆ. ಬಾಲಿವುಡ್ ನ ಪ್ರತಿಯೊಂದು ಸಿನೆಮಾವನ್ನು ಬಾಯ್ ಕಟ್ ಮಾಡಬೇಕೆಂದು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ನಡೆಯುತ್ತಲೇ ಇರುತ್ತದೆ. ಈ ಕಾರಣದಿಂದಲೇ ಸ್ಟಾರ್‍ ನಟರ ಭಾರಿ ಬಜೆಟ್ ಸಿಎನಮಾಗಳೂ ಸಹ ಭಾರಿ ಸೋಲನ್ನು ಕಾಣುತ್ತಿವೆ. ಇನ್ನೂ ಈ ಟ್ರೆಂಡ್ ಕುರಿತಂತೆ ಬಾಲಿವುಡ್ ಸೀನಿಯರ್‍ ನಟಿ ಕರೀನಾ ಕಪೂರ್‍ ಸಹ ರಿಯಾಕ್ಟ್ ಆಗಿದ್ದಾರೆ. ಆಕೆ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನೆಮಾ ಬಿಡುಗಡೆಯ ವೇಳೆ ಸಹ ಬಾಯ್ ಕಟ್ ಟ್ರೆಂಡ್ ಜೋರಾಗಿಯೇ ನಡೆದಿತ್ತು. ಜೊತೆಗೆ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತ್ತು.

ಇನ್ನೂ ಈ ಬಾಯ್ ಕಟ್ ಟ್ರೆಂಡ್ ಬಗ್ಗೆ ಮಾತನಾಡಿರುವ ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍, ಬಾಯ್ ಕಟ್ ಟ್ರೆಂಡ್ ಫಿಲಂ ಇಂಡಸ್ಟ್ರಿಗೆ ಒಳ್ಳೆಯದಲ್ಲ. ಈ ವಿಚಾರದಲ್ಲಿ ನಾನು ಅದನ್ನು ಒಪ್ಪುವುದಿಲ್ಲ. ಬಾಯ್ ಕಟ್ ಟ್ರೆಂಡ್  ಇದೇ ಮಾದರಿಯಲ್ಲಿ ಮುಂದುವರೆದರೇ ಸಿನೆಮಾ ಪ್ರೇಕ್ಷಕರು ವಿನೋದವನ್ನು ಕಳೆದುಕೊಳ್ಳುತ್ತಾರೆ. ಅಷ್ಟೇಅಲ್ಲ ನೀವು ಈ ರೀತಿಯಲ್ಲಿ ಮಾಡಿದರೇ ನಾವು ಹೇಗೆ ಮನರಂಜಿಸಲು ಸಾಧ್ಯ. ಸಿನೆಮಾಗಳು ಇಲ್ಲದೇ ಇದ್ದರೇ ತಮಗೆ ಮನರಂಜನೆ ಎಲ್ಲಿಂದ ಸಿಗುತ್ತದೆ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ಇನ್ನೂ ಅಮೀರ್‍ ಖಾನ್ ಜೊತೆಗೆ ಕರೀನಾ ಲಾಲ್ ಸಿಂಗ್ ಚಡ್ಡಾ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾ ಸಹ ಬಾಯ್ ಕಟ್ ಬಾಲಿವುಡ್ ಏಟಿಗೆ ಡಿಜಾಸ್ಟರ್‍ ಸಿನೆಮಾ ಆಗಿತ್ತು.

ಸದ್ಯ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಸಿನೆಮಾ ಸಹ ಇಂತಹುದೇ ಟ್ರೆಂಡ್ ಗೆ ಗುರಿಯಾಗಿದೆ. ಈ ಸಿನೆಮಾದ ಹಾಡೊಂದರಲ್ಲಿ ಕೇಸರಿ ಬಣ್ಣ ಬಿಕಿನಿ ಧರಿಸಿ ಅಸಭ್ಯವಾಗಿ ದೀಪಿಕಾ ನಟಿಸಿದ್ದಾರೆ ಎಂದು ದೊಡ್ಡ ಮಟ್ಟದಲ್ಲೇ ವಿರೋಧ ವ್ಯಕ್ತವಾಗಿತ್ತು. ಈ ಸಿನೆಮಾವನ್ನು ಬಾಯ್ ಕಟ್ ಮಾಡಬೇಕೆಂದು ಟ್ರೆಂಡ್ ನಡೆಯುತ್ತಿದೆ. ಇನ್ನೂ ಪಠಾನ್ ಸಿನೆಮಾ ಜ.25 ರಂದು ತೆರೆ ಕಾಣಲಿದೆ.

Most Popular

To Top