ಬಾಲಯ್ಯ ಹುಟ್ಟುಹಬ್ಬಕ್ಕೆ ಹೈ ವೋಲ್ಟೇಜ್ ಮಾಸ್ ಟೀಸರ ಟ್ರೀಟ್, ಭಗವಂತ್ ಕೇಸರಿ ಹೆಸರು ತುಂಬಾ ವರ್ಷ ಇರುತ್ತದೆ ಎಂದ ಬಾಲಯ್ಯ…..!

Follow Us :

ತೆಲುಗು ಸಿನಿರಂಗದ ನಂದಮೂರಿ ಕುಟುಂಬದ ನಟಸಿಂಹ ನಂದಮೂರಿ ಬಾಲಕೃಷ್ಣ ರವರು ಇಂದಿಗೆ 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜೂನ್ 10, 1960 ರಂದು ಅವರು ಜನಿಸಿದರು. ಬಾಲ್ಯದಿಂದಲೇ ಸಿನಿಮಾಗಳಲ್ಲಿ ನಟಿಸಿ ಇದೀಗ ದೊಡ್ಡ ಸ್ಟಾರ್‍ ನಟನಾಗಿ ಬೆಳೆದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಇಂದು ಅವರ ಹುಟ್ಟುಹಬ್ಬವಾಗಿ ಅನೇಕ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇನ್ನೂ ಬಾಲಕೃಷ್ಣ ರವರ ಭಗವಂತ್ ಕೇಸರಿ ಸಿನೆಮಾದ ಹೈ ವೋಲ್ಟೇಜ್ ಟೀಸರ್‍ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಹುಟ್ಟುಹಬ್ಬದ ಟ್ರೀಟ್ ನೀಡಿದ್ದಾರೆ.

ಪ್ರಸಕ್ತ ವರ್ಷದ ಆರಂಭದಲ್ಲಿ ನಂದಮೂರಿ ಬಾಲಕೃಷ್ಣ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದರು. ಇದೀಗ ಅನೀಲ್ ರಾವಿಪೂಡಿ ನಿರ್ದೇಶನದಲ್ಲಿ ಬಾಲಕೃಷ್ಣ ಭಗವಂತ್ ಕೇಸರಿ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ತೆಲಂಗಾಣ ಮೂಲದ ಕಥೆಯನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ಅನೀಲ್ ರಾವಿಪೂಡಿ ತೆಲಂಗಾಣ ಸ್ಟೈಲ್ ನಲ್ಲಿ ಬಾಲಯ್ಯನಿಂದ ಕೆಲವೊಂದು ಡೈಲಾಗ್ ಗಳನ್ನು ಸಹ ಹೊಡೆಸಿದ್ದಾರೆ. ಇದೀಗ ನಂದಮೂರಿ ಬಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಭಗವಂತ್ ಕೇಸರಿ ಚಿತ್ರತಂಡ ಹೈ ವೋಲ್ಟೇಜ್ ಮಾಸ್ ಟೀಸರ್‍ ರಿಲೀಸ್ ಮಾಡಲಾಗಿದೆ. ಬಿಡುಗಡೆಯಾದ ಟೀಸರ್‍ ನಲ್ಲಿ ಬಾಲಕೃಷ್ಣ ಗೆಟಪ್, ಬಾಡಿ ಲಾಂಗ್ವೇಜ್ ತುಂಬಾನೆ ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಇದೀಗ ಟೀಸರ್‍ ನಲ್ಲಿ ಕೆಲವೊಂದು ಡೈಲಾಗ್ ಗಳು ಇದ್ದು, ಸಖತ್ ಸದ್ದು ಮಾಡುತ್ತಿವೆ. ರಾಜು ಎಂಬುವವನು ಹಿಂದೆ ಇರುವ ನೂರಾರು ಮಂದಿಯನ್ನು ತೋರಿಸುತ್ತಾನೆ. ಮೊಂಡುತನ ಇರುವವನು ಒಂದೆ ಒಂದು ಗುಂಡಿಗೆಯನ್ನು ತೋರಿಸುತ್ತಾನೆ ಎಂದು ಡೈಲಾಗ್ ಹೊಡೆದಿದಾರೆ. ಇನ್ನೂ ಬಾಲಯ್ಯ ತಮ್ಮದೇ ಆದ ಶೈಲಿಯಲ್ಲಿ ಖಳನಾಯಕನಿಗೆ ಧಮ್ಕಿ ನೀಡುವುದು, ಕೆಲವೊಂದು ಆಕ್ಷನ್ ದೃಶ್ಯಗಳು ಗೂಸ್ ಬಂಪ್ಸ್ ತರಿಸುವಂತಿದೆ. ಇನ್ನೂ ಟೀಸರ್‍ ನ ಕೊನೆಯಲ್ಲಿ ನೆಲಕೊಂಡ ಭಗವಂತ್ ಕೇಸರಿ, ಈ ಹೆಸರು ಸುಮಾರು ವರ್ಷಗಳು ಉಳಿಯುತ್ತದೆ ಎಂದು ಗರ್ಜನೆ ಮಾಡಿ ಹೇಳಿದ್ದಾರೆ. ಇನ್ನೂ ಟೀಸರ್‍ ನೋಡಿದ ಅಭಿಮಾನಿಗಳು ಪುಲ್ ಖುಷಿಯಾಗಿದ್ದು, ಸಿನೆಮಾ ಬ್ರೇಕ್ ಮಾಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಬಾಲಕೃಷ್ಣ ಗೆ ಜೋಡಿಯಾಗಿ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಬಾಲಯ್ಯನ ಪುತ್ರಿಯಾಗಿ ಸ್ಯಾಂಡಲ್ ವುಡ್ ಸ್ಟಾರ್‍ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾ ದಸರಾ ಹಬ್ಬದ ಕೊಡುಗೆಯಾಗಿ ಬಿಡುಗಡೆ ಮಾಡಲಾಗುತ್ತದೆ. ಇದೀಗ ಈ ಟೀಸರ್‍ ಸಖತ್ ಸದ್ದು ಮಾಡುತ್ತಿದ್ದು, ಸಿನೆಮಾದ ಮೇಲಿನ ನಿರೀಕ್ಷೆ ದುಪಟ್ಟು ಮಾಡಿದೆ.