ಶ್ರೀಲೀಲಾ ಕೆನ್ನೆಗೆ ಬಾರಿಸಿದ್ರಂತೆ ಬಾಲಕೃಷ್ಣ, ಆಕೆ ಜೋರಾಗಿ ಆಳುತ್ತಾ ಕಣ್ಣೀರಾಕಿದ್ದಾರೆ, ಕಾರಣ ಏನು ಗೊತ್ತಾ?

ತೆಲುಗು ಸಿನಿರಂಗದ ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ಅಖಂಡ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಅವರ ಕೆರಿಯರ್‍ ನಲ್ಲೇ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಸಿನೆಮಾ ಸಾಲಿಗೆ ಸಹ ಸೇರಿಕೊಂಡಿತ್ತು. ಇದೀಗ ನಂದಮೂರಿ ಬಾಲಕೃಷ್ಣ ಹಾಗೂ ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ NBK108 ಸಿನೆಮಾ ಸೆಟ್ಟೇರಿದ್ದು ಶೂಟಿಂಗ್ ಸಹ ಬರದಿಂದ ಸಾಗುತ್ತಿದೆ. ಈ ಸಿನೆಮಾದಲ್ಲಿ ಶ್ರೀಲೀಲಾ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಶ್ರೀಲೀಲಾ ಕೆನ್ನೆಗೆ ಬಾಲಕೃಷ್ಣ ಬಾರಿಸಿದ್ದಾರೆ. ಆಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟಕ್ಕೂ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಕನ್ನಡ ಮೂಲದ ನಟಿ ಶ್ರೀಲೀಲಾ ಇದೀಗ ತೆಲುಗು ಸಿನಿರಂಗದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಈ ಹಾದಿಯಲ್ಲೇ ಆಕೆ ನಂದಮೂರಿ ಬಾಲಕೃಷ್ಣರವರ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಶ್ರೀಲೀಲಾ ಬಾಲಕೃಷ್ಣ ರವರ ಸೊಸೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ಬಾಲಕೃಷ್ಣರವರಿಗೆ ಕೋಪ ಬಂದರೇ ಯಾರು ಎಂದೂ ಸಹ ನೋಡದೇ ಹೊಡೆದು ಬಿಡುತ್ತಾರೆ. ಇದೀಗ ನಟಿ ಶ್ರೀಲೀಲಾಗೂ ಸಹ ಹೊಡೆದು ಬಿಟ್ಟಿದ್ದಾರಂತೆ. ಅರೇ ಅದೇನೂ ಶ್ರೀಲೀಲಾ ಗೆ ಬಾಲಕೃಷ್ಣ ಹೊಡೆದಿದ್ದಾರೂ ಏಕೆ ಎಂಬೆಲ್ಲಾ ಅನುಮಾನಗಳು ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ.

NBK108 ಸಿನೆಮಾ ದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನೆಮಾದ ಶೂಟೀಂಗ್ ವೇಳೆ ಬಾಲಯ್ಯ ಶ್ರೀಲೀಲಾಗೆ ಹೊಡೆದಿದ್ದಾರೆ. ಆದರೆ ಇದು ಸನ್ನಿವೇಶವೊಂದಕ್ಕಾಗಿ ಹೊಡೆದಿದ್ದಾರೆ. ಈ ದೃಶ್ಯದಲ್ಲಿ ನಟಿಸುವಾಗ ಬಾಲಯ್ಯ ಶ್ರೀಲೀಲಾಗೆ ಹೊಡೆದಿದ್ದಾರೆ. ಈ ದೃಶ್ಯದಲ್ಲಿ ಲೀನವಾಗಲು ಶ್ರೀಲೀಲಾ ರವರೇ ತನ್ನನ್ನು ಹೊಡಿರಿ ಎಂದು ಕೇಳಿದ್ದು, ಆ ವೇಳೆ ಬಾಲಯ್ಯ ಆಕೆಯನ್ನು ಹೊಡೆದಿದ್ದಾರಂತೆ. ಇನ್ನೂ ಇದೊಂದು ದೃಶ್ಯದ ಶೂಟೀಂಗ್ ಆದರೂ ಸಹ ಸೆಟ್ ನಲ್ಲಿರುವವರು ಎಲ್ಲರೂ ಶಾಕ್ ಆದರಂತೆ. ಇನ್ನೂ ಬಾಲಕೃಷ್ಣ ಹೊಡೆದ ಕಾರಣದಿಂದ ಶ್ರೀಲೀಲಾ ಸಹ ಬಿಕ್ಕಿ ಬಿಕ್ಕಿ ಅತ್ತಿದ್ದಾರಂತೆ. ಇನ್ನೂ ಈ ಸುದ್ದಿಯಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ಮಾತ್ರ ತಿಳಿಯದು ಆದರೆ ಸಿನಿವಲಯದಲ್ಲಿ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಅನೀಲ್ ರಾವಿಪೂಡಿ ಈ ಸಿನೆಮಾದಲ್ಲಿ ಬಾಲಕೃಷ್ಣ ರವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಈ ಸಿನೆಮಾದಲ್ಲಿ ಬಾಲಕೃಷ್ಣ ಲಾರಿ ಡ್ರೈವರ್‍ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ದಸರಾ ಹಬ್ಬದ ಕೊಡುಗೆಯಾಗಿ ಸೆಪ್ಟೆಂಬರ್‍ ಮಾಹೆಯಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದೆಯಂತೆ ಚಿತ್ರತಂಡ.