ಅದಕ್ಕಾಗಿ ನಾನು ತುಂಬಾ ದುಃಖಪಡುತ್ತಿದ್ದೇನೆ ಎಂದ ನಂದಮೂರಿ ಬಾಲಕೃಷ್ಣ, ನನ್ನ ತಪ್ಪನ್ನು ಕ್ಷಮಿಸುತ್ತೀರಾ ಎಂದ ನಟ….!

ತೆಲುಗು ಸಿನಿರಂಗದ ಸ್ಟಾರ್‍ ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ ನೇರ ನುಡಿಗಳನ್ನಾಡು ವ್ಯಕ್ತಿತ್ವ ಹೊಂದಿರುವವರು. ಅವರ ಡೈಲಾಗ್ ಡಿಲವರಿ ಸಿನೆಮಾಗಳಂತೆ ನಿಜ ಜೀವನದಲ್ಲೂ ಸಹ ಇರುತ್ತದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ಆಕೆ ನೀಡಿದ…

ತೆಲುಗು ಸಿನಿರಂಗದ ಸ್ಟಾರ್‍ ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ ನೇರ ನುಡಿಗಳನ್ನಾಡು ವ್ಯಕ್ತಿತ್ವ ಹೊಂದಿರುವವರು. ಅವರ ಡೈಲಾಗ್ ಡಿಲವರಿ ಸಿನೆಮಾಗಳಂತೆ ನಿಜ ಜೀವನದಲ್ಲೂ ಸಹ ಇರುತ್ತದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ಆಕೆ ನೀಡಿದ ಕೆಲವೊಂದು ಹೇಳಿಕೆಗಳು ವಿವಾದಕ್ಕೆ ಗುರಿಯಾಗಿದ್ದು, ಆ ಹೇಳಿಕೆಗಳನ್ನು ನೀಡಿದ ಕಾರಣದಿಂದ ನಾನು ತುಂಬಾ ದುಃಖಪಟ್ಟೆ, ನೀವು ನನ್ನನ್ನು ಕ್ಷಮಿಸಿ ಎಂದು ಬಾಲಯ್ಯ ಹೇಳಿದ್ದಾರೆ.

ನಟ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾ ಇದೇ ಜ.12 ರಂದು ತೆರೆಗೆ ಬಂದಿದ್ದು, ಅದ್ದೂರಿಯಾಗಿ ಪ್ರದರ್ಶನ ವಾಗುತ್ತಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡುತ್ತಿದೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ನಡೆದ ಸಂದರ್ಶನವೊಂದರಲ್ಲಿ ಆತ ಮಾತನಾಡುತ್ತಾ ದೇವ ಬ್ರಾಹ್ಮಣರಿಗೆ ದೇವಲ ಮಹರ್ಷಿ ಗುರು, ಇನ್ನೂ ದೇವಲ ಮಹರ್ಷಿಗೆ ನಾಯಕ ರಾವಣಾಸುರ ಎಂದು ಹೇಳಿದ್ದರು. ಈ ಹೇಳಿಕೆಗಳು ದೇವಾಂಗ ಜಾತಿಗೆ ಸೇರಿದ ಅನೇಕರ ಆಕ್ರೋಷಕ್ಕೆ ಕಾರಣವಾಗಿದೆ. ಇನ್ನೂ ಬಾಲಕೃಷ್ಣ ಒಂದು ಸಮುದಾಯದ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಆ ಸಮುದಾಯದ ವತಿಯಿಂದ ಜೋರಾದ ಬೇಡಿಕೆ ಸಹ ಎದುರಾಗಿದ್ದು, ಇದೀಗ ಈ ಬಗ್ಗೆ ಬಾಲಯ್ಯ ಸ್ಪಂಧಿಸಿದ್ದಾರೆ.

ನಂದಮೂರಿ ಬಾಲಕೃಷ್ಣ ಈ ಬಗ್ಗೆ ಪ್ರತಿಕ್ರಿಯೆ ನೀಡಿ ದೇವ ಬ್ರಾಹ್ಮಣರ ನಾಯಕ ರಾವಣ ಬ್ರಹ್ಮ ಎಂಬುದು ತಪ್ಪಾದ ಸಮಾಚಾರ. ಆದರೆ ದುರದೃಷ್ಟಾವಶಾತ್ ಆ ಸಂದರ್ಭದಲ್ಲಿ ಬಂದ ಮಾತು ಮಾತ್ರ. ನನ್ನ ತಪ್ಪನ್ನು ಕ್ಷಮಿಸುತ್ತೀರಾ ಎಂದು ಭಾವಿಸುತ್ತಿದ್ದೇನೆ. ದೇವಬ್ರಾಹ್ಮಣ ಸಹೋದರ ಸಹೋದರಿಯರೇ ನಿಮ್ಮ ಸಹೋದರ ನಂದಮೂರಿ ಬಾಲಕೃಷ್ಣ ರವರ ಮನವಿ. ದೇವ ಬ್ರಾಹ್ಮಣರ ನಾಯಕ ರಾವಣ ಬ್ರಹ್ಮ ಎಂಬುದು ನನಗೆ ಬಂದ ಸಮಾಚಾರ. ಆದರೆ ಅದು ತಪ್ಪು ಎಂದು ನನಗೆ ತಿಳಿಸಿದ ದೇವ ಬ್ರಾಹ್ಮಣ ದೊಡ್ಡವರಿಗೆ ನನ್ನ ಕೃತಜ್ಞತೆಗಳು. ನಾನಾಡಿದ ಮಾತುಗಳ ಕಾರಣದಿಂದ ದೇವಾಂಗರ ಮನೋಭಾವಕ್ಕೆ ದಕ್ಕೆಯಾಗಿದೆ ಎಂದು ನಾನು ತುಂಭಾ ದುಃಖ ಪಟ್ಟೆ. ನನಗೆ ಯಾರನ್ನು ನೋಯಿಸುವ ಉದ್ದೇಶವಿಲ್ಲ. ಅದು ತೆಲುಗು ಪ್ರಜೆಗಳಿಗೆಲ್ಲ ತಿಳಿದಿದೆ. ಆಕಸ್ಮಿಕವಾಗಿ ಆ ವೇಳೆ ಬಂದಂತಹ ಹೇಳಿಕೆಯಾಗಿದೆ. ಆದರೆ ನಿಮ್ಮನ್ನು ನೋಯಿಸಿದರೇ ನನಗೆ ಆಗುವ ಪ್ರಯೋಜನವಾದರೂ ಏನು ಹೇಳಿ. ಅದರಲ್ಲೂ ದೇವಾಂಗ ಸಮುದಾಯದ ಅನೇಕರು ನನ್ನ ಅಭಿಮಾನಿಗಳಿದ್ದಾರೆ. ನನ್ನವರನ್ನು ನಾನು ನೋಯಿಸುತ್ತೇನೆಯೇ? ಅರ್ಥ ಮಾಡಿಕೊಳ್ಳುತ್ತೀರಾ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.