Film News

ಗಾಸಿಪ್, ಟ್ರೋಲ್ ಗಳ ಕುರಿತು ರಶ್ಮಿಕಾ ಕಾಮೆಂಟ್ಸ್, ನನ್ನ ಬಗ್ಗೆ ಮಾತಾಡಿದ್ದು ಸಾಕು ಎಂದ ನಟಿ….!

ಪುಷ್ಪಾ ಸಿನೆಮಾದ ಮೂಲಕ ಇಡೀ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಸಹ ಪರಿಚಯವಾದ ನಟಿ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುತ್ತಾರೆ. ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಸದ್ಯ ಸೌತ್ ಅಂಡ್ ನಾರ್ತ್ ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಆಕೆ ಎಷ್ಟರ ಮಟ್ಟಿಗೆ ಖ್ಯಾತಿ ಪಡೆದುಕೊಂಡಿದ್ದಾರೋ ಅಷ್ಟೇ ಟ್ರೋಲ್ ಸಹ ಆಗುತ್ತಿರುತ್ತಾರೆ. ಆಕೆಯನ್ನು ಕೆಲವರು ಹೊಗಳಿದರೇ, ಮತ್ತೆ ಕೆಲವರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ಆಕೆ ಈ ಗಾಸಿಪ್, ಟ್ರೋಲ್ ಗಳ ಬಗ್ಗೆ ಮಾತನಾಡಿದ್ದಾರೆ.

ನಟಿ ರಶ್ಮಿಕಾ ಅಭಿನಯದ ವಾರಿಸು ಸಿನೆಮಾದ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದೆ. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನೂ ಆಕೆ ಇತ್ತೀಚಿಗೆ ಸುದ್ದಿ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಬಗೆಗಿನ ಟ್ರೋಲ್ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನಾವು ಮನರಂಜನೆ ನೀಡುವ ಸಲುವಾಗಿ ಸಿನೆಮಾ ಮಾಡುತ್ತಿದ್ದೆವೇ. ಇನ್ನೂ ನಾವು ಒಳ್ಳೆಯ ಸಿನೆಮಾ ಮಾಡಿದರೇ ಜನರು ಇಷ್ಟಪಡುತ್ತಾರೆ. ಒಳ್ಳೆಯ ಸಿನೆಮಾ ಮಾಡಿಲ್ಲ ಎಂದರೇ ಎಂತಹ ಸಿನೆಮಾ ಎಂದು ಠೀಕೆ ಮಾಡುತ್ತಾರೆ. ಇನ್ನೂ ನಮ್ಮ ಜೀವನ ಒಂದೇ ಸಿನೆಮಾದ ಮೇಲೆ ಅವಲಂಬಿಸಿಲ್ಲ. ಇದೊಂದು ಸುದೀರ್ಘ ಪಯಣವಿದ್ದಂತೆ ಎಂದಿದ್ದಾರೆ.

ಮುಂದುವರೆದು ಆಕೆ ತಮ್ಮ ಬಗೆಗಿನ ಟ್ರೋಲ್ ಹಾಗೂ ನಕರಾತ್ಮಕ ಹೇಳಿಕೆಗಳ ಬಗ್ಗೆ ಮಾತನಾಡಿದ್ದಾರೆ. ಅದರಿಂದ ಆಕೆಯ ವೃತ್ತಿ ಜೀವನ ಮೇಲೆ ಯಾವ ರೀತಿಯ ಪರಿಣಾಮ ಬೀರಿತು ಎಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅಂತಹ ಟ್ರೋಲ್ ಗಳು ಹಾಗೂ ನೆಗೆಟಿವಿಟಿಯನ್ನು ಹೇಗೆ ಎದುರಿಸಬೇಕು ಎಂಬುದನ್ನು ನಾನು ಕಲಿತಿದ್ದೇನೆ. ಸುಮಾರು ಹತ್ತು ವರ್ಷಗಳ ಹಿಂದೆ ಪಾಪರಾಜಿಗಳು, ಸೋಷಿಯಲ್ ಮಿಡಿಯಾಗಳು ಅಷ್ಟೊಂದು ಪ್ರಚಲಿತದಲ್ಲಿರಲಿಲ್ಲ. ಆಗ ಜನರು ಸ್ಟಾರ್‍ ಗಳನ್ನು ನೋಡಲು ಸಿನೆಮಾ ಥಿಯೇಟರ್‍ ಗಳಿಗೆ ಹೋಗಬೇಕಿತ್ತು.  ಆದರೆ ಈಗ ಆ ರೀತಿಯಲಿಲ್ಲ. ನಾವು ಕಲಾವಿದರಾಗಿದ್ದು, ನಾವು ಮಾಡುವ ಕೆಲಸದ ಬಗ್ಗೆ ಮಾತ್ರ ಮಾತನಾಡಿ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಬಗ್ಗೆ ನೀವು ಏನು ಯೋಚನೆ ಮಾಡುತ್ತಿರೀ ಎಂಬುದನ್ನು ನಾವು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಅದು ಪಾಸಿಟೀವ್ ಇರಲಿ, ನೆಗೆಟೀವ್ ಇರಲಿ ನನ್ನ ಬಗ್ಗೆ ಮಾತನಾಡಿದ್ದೀರಿ ಅಷ್ಟೆ ಎಂದು ರಶ್ಮಿಕಾ ತಮ್ಮ ಬಗೆಗಿನ ನೆಗೆಟಿವ್ ಕಾಮೆಂಟ್ ಗಳ ಬಗ್ಗೆ ಮಾತನಾಡಿದ್ದಾರೆ.

ಇನ್ನೂ ರಶ್ಮಿಕಾ ಸದ್ಯ ಬಹುಬೇಡಿಕೆ ನಟಿಯಾಗಿದ್ದು, ಆಕೆಯ ಕೈಯಲ್ಲಿ ಸಾಲು ಸಾಲು ಸಿನೆಮಾಗಳಿವೆ. ಆಕೆ ಇತ್ತೀಚಿಗಷ್ಟೆ ತಮಿಳಿನ ಸ್ಟಾರ್‍ ನಟ ದಳಪತಿ ವಿಜಯ್ ಜೊತೆಗೆ ವಾರಿಸು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಬಾಲಿವುಡ್ ನಲ್ಲಿ ಆಕೆ ಮಿಷನ್ ಮಜ್ನು ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಒಟಿಟಿ ಮೂಲಕ ಸ್ಟ್ರೀಮಿಂಗ್ ಆಗಲಿದೆ. ಜೊತೆಗೆ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದು, ಈ ಸಿನೆಮಾದ ಮೇಲೆ ರಶ್ಮಿಕಾ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Most Popular

To Top