Film News

ಆಂಕರ್ ಆಗಿ ಕೋಟ್ಯಂತರ ಸಂಪಾದನೆ ಮಾಡಿದ ಅನಸೂಯ, ಆಕೆಯ ಆಸ್ತಿ ಬಗ್ಗೆ ತಿಳಿದ್ರೆ ಶಾಕ್ ಆಗುತ್ತೀರಾ?

ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ನಟಿಯರಲ್ಲಿ ಅನಸೂಯ ಒಬ್ಬರಾಗಿರುತ್ತಾರೆ. ನಟಿ ಅನಸೂಯ ಸ್ಟಾರ್‍ ನಟಿಯರಿಗಿಂತಲೂ ಸಹ ಕಡಿಮೆಯಿಲ್ಲ ಎಂಬಂತೆ ಸದಾ ಸುದ್ದಿಯಾಗುತ್ತಿರುತ್ತಾರೆ. ಆಕೆ ಪೊಟೋಗಳು, ಪೋಸ್ಟ್ ಗಳ ಮೂಲಕ ಸದಾ ಸುದ್ದಿಯಾಗುತ್ತಿರುತ್ತಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಅನಸೂಯ ರವರ ಆಸ್ತಿಯ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಆಂಕರ್‍ ಕಂ ನಟಿ ಅನಸೂಯ ತುಂಬಾನೆ ಆಸ್ತಿ ಸಂಪಾದನೆ ಮಾಡಿದ್ದಾಗಿ ಆಕೆ ಆಸ್ತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.

ಸಾಮಾನ್ಯವಾಗಿ ಸಿನಿಮಾ ಸೆಲೆಬ್ರೆಟಿಗಳ ಬಗ್ಗೆ ಅನೇಕ ಚರ್ಚೆಗಳು ಸದಾ ನಡೆಯುತ್ತಿರುತ್ತವೆ. ಸಿನಿರಂಗದಲ್ಲಿ ಎಷ್ಟು ಸಂಪಾದನೆ ಮಾಡಿದರೂ ಅದನ್ನು ಕಾಪಾಡಿಕೊಳ್ಳುವುದು ಸಹ ಅಷ್ಟೆ ಮುಖ್ಯವಾಗಿರುತ್ತದೆ. ಸಿನಿರಂಗದಲ್ಲಿ ಕೋಟಿಗಟ್ಟಲೇ ಸಂಪಾದನೆ ಮಾಡಿದ ಅನೇಕರು ಹಣವನ್ನು ಕಳೆದುಕೊಂಡಿದ್ದು ಇದೆ. ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ಕೋಟಿಗಟ್ಟಲೇ ಸಂಪಾದನೆ ಮಾಡಿದ ಅನೇಕ ಕಲಾವಿದರೂ ಸಹ ಇದ್ದಾರೆ. ಈ ಸಾಲಿಗೆ ಆಂಕರ್‍ ಆಗಿ ಕೆರಿಯರ್‍ ಪ್ರಾರಂಭಿಸಿ ನಟಿಯಾಗಿ ಕ್ರೇಜ್ ಪಡೆದುಕೊಂಡ ಅನಸೂಯ ಸಹ ಸೇರುತ್ತಾರೆ. ಕಿರುತೆರೆಯ ಜಬರ್ದಸ್ತ್ ಶೋ ಮೂಲಕ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿದ ಅನಸೂಯ ಸಿನೆಮಾಗಳಲ್ಲೂ ಸಹ ನಟಿಸುವ ಮೂಲಕ ಮತಷ್ಟು ಕ್ರೇಜ್ ಬೆಳೆಸಿಕೊಂಡಿದ್ದಾರೆ. ಸದ್ಯ ಆಂಕರಿಂಗ್ ಗೆ ದೂರವಾಗಿ ನಟಿಯಾಗಿ ಮುಂದುವರೆಯುತ್ತಿದ್ದಾರೆ. ಇದೀಗ ಅನಸೂಯ ಎಷ್ಟು ಸಂಪಾದನೆ ಮಾಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಚರ್ಚೆಯಾಗುತ್ತಿದೆ.

ಅನೇಕ ವರ್ಷಗಳ ಕಾಲ ಅನಸೂಯ ಆಂಕರಿಂಗ್ ಮಾಡುತ್ತಿದ್ದು, ಸದ್ಯ ಸಿನೆಮಾಗಳು, ವೆಬ್ ಸಿರೀಸ್ ಹಾಗೂ ಸ್ಪೇಷಲ್ ಶೋ ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇನ್ನೂ ತನಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಇನ್ನೂ ಆಕೆ ಕೈತುಂಬಾ ಸಂಪಾದನೆ ಮಾಡಿ ಇತರೆ ಮೈನ್ ಲೀಡ್ ಹಿರೋಯಿನ್ ಗಳಿಗೆ ಸಮಾನವಾಗಿ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅನಸೂಯ ಹೈದರಾಬಾದ್ ನಲ್ಲಿ ಸುಮಾರು 8 ಕೋಟಿಗೂ ಅಧಿಕ ಬೆಲೆಯುಳ್ಳ ಒಂದು ಮನೆ, ಎರಡು ದುಬಾರಿ ಕಾರುಗಳು ಇದ್ದು, ಈ ಕಾರುಗಳ ಬೆಲೆ ಸುಮಾರು 2.5 ಕೋಟಿಯಿರಬಹುದು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಅನಸೂಯಗೆ ಮತಷ್ಟು ಆಸ್ತಿ ಇದೆ ಎಂದು ಹೇಳಲಾಗುತ್ತಿದ್ದು, ಆಕೆಯ ಬಳಿ ಒಟ್ಟು 25 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೂ ತೆಲುಗು ರಂಗದಲ್ಲಿ ಸ್ಟಾರ್‍ ಆಂಕರ್‍ ಆದ ಸುಮ ರವರ ಬಳಿಕ ಅನಸೂಯ ರವರು ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ಆಂಕರ್‍ ಆಗಿದ್ದಾರೆ. ಇನ್ನೂ ಆಕೆ ಉದ್ಯಮಿ ಭಾರದ್ವಾಜ್ ರವರನ್ನು ಮದುವೆಯಾಗಿದ್ದು, ಸಂಪಾದನೆ ಸಹ ಕೋಟಿಗಟ್ಟೆಲೇ ಇರುತ್ತದೆ ಎಂದು ಹೇಳಬಹುದಾಗಿದೆ. ಸದ್ಯ ಆಕೆ ಪುಷ್ಪಾ-2 ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಜೊತೆಗೆ ಆಕೆ ರಂಗಮಾರ್ತಾಂಡ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಜೊತೆಗೆ ಆಕೆ ಕನ್ಯಾಶುಲ್ಕಂ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸಲಿದ್ದಾರಂತೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕೆಯನ್ನು ಆಗಾಗ ಟ್ರೋಲ್ ಸಹ ಆಗುತ್ತಿರುತ್ತಾರೆ, ಟ್ರೋಲರ್‍ ಗಳಿಗೆ ಆಕೆ ಸ್ಟ್ರಾಂಗ್ ಡೋಸ್ ಸಹ ಕೊಡುತ್ತಿರುತ್ತಾರೆ.

Most Popular

To Top