ಮೋದಿ ಪರ ಹಾಡು ಬರೆದ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ….!

Follow Us :

ಸದ್ಯ ರಾಜ್ಯದಲ್ಲಿ ಕೆಲವೊಂದು ಘಟನೆಗಳು ನಡೆಯುತ್ತಿದ್ದು, ಅದರಿಂದ ಜನರು ಭಯಭೀತರಾಗುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಜೈ ಶ್ರೀರಾಮ್ ಎಂದು ಕೂಗಿದ್ದರು ಎಂದು ಅವರ ಮೇಲೆ ಕೆಲ ಮುಸ್ಲೀಂ ಯುವಕರು ಹಲ್ಲೆ ನಡೆಸಿದ್ದರು. ಇದೀಗ ಅಂತಹುದೇ ಮತ್ತೊಂದು ಘಟನೆ ಮೈಸೂರಿನಲ್ಲಿ ನಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಾಡು ಬರೆದ ಕಾರಣದಿಂದ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಹಿಂದೂ ಯುವಕ ಆರೋಪಿಸಿದ್ದಾನೆ.

ಮೈಸೂರಿನ ರೋಹಿತ್ ಎಂಬಾತ ಪ್ರಧಾನಿ ಮೋದಿಯವರ ಬಗ್ಗೆ ಹಾಡು ಬರೆದಿದ್ದಕ್ಕೆ ಅನ್ಯಕೊಮಿನ ಯುವಕರು ಹಲ್ಲೆ ಮಾಡಿದ್ದಾಗಿ, ಹಾಗೂ ಪಾಕಿಸ್ತಾನದ ಪರ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾಗಿ ಗಂಭೀರ ಆರೋಪ ಮಾಡಿದಾರೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ತನ್ನ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದಾನೆ. ಇನ್ನೂ ರೋಹಿತ್ ಕೆಲವು ದಿನಗಳ ಹಿಂದೆ ಮೋದಿಯ ಬಗ್ಗೆ ಸಾಂಗ್ ಬರೆದು ರಿಲೀಸ್ ಮಾಡಿದ್ದೆ. ಯೂಟ್ಯೂಬ್ ನಲ್ಲಿ ನೋಡಿ, ಸಬ್ ಸ್ಕೈಬ್ ಮಾಡಿ ಎಂದು ಸ್ನೇಹಿತರು ಹಾಗೂ ಪರಿಚಯಸ್ಥರಿಗೆ ಹೇಳಿದ್ದೆ. ಬಳಿಕ ಮೈಸೂರಿನ ಅತಿಥಿ ಗೃಹದ ಬಳಿ ಬಂದಾಗ ಅಲ್ಲಿದ್ದ ಒಬ್ಬ ಹುಡುಗನ ಹತ್ತಿರ ಮೋದಿ ಹಾಡಿನ ಬಗಗೆ ಹೇಳಿ ಮೊಬೈಲ್ ನಲ್ಲಿ ಹಾಡು ತೋರಿಸಿದ್ದೆ. ಮೊದಲು ಚೆನ್ನಾಗಿದೆ ಎಂದು ಹೇಳಿ, ಬಳಿಕ ನನ್ನ ಸ್ನೇಹಿತರ ಹತ್ತಿರ ಹೋಗೋಣ ಬಾ ಎಂದು ಕರೆದುಕೊಂಡು ಹೋದ. ಆತ ಅನ್ಯ ಕೋಮಿನ ಯುವಕ ಅಂತಾ ನನಗೆ ಮೊದಲು ತಿಳಿದಿರಲಿಲ್ಲ.

ಆ ವ್ಯಕ್ತಿ ನನ್ನನ್ನು ಆತನ ಸ್ನೇಹಿತರ ಬಳಿ ಕರೆದುಕೊಂಡು ಹೋಗಿದ್ದ. ಬಳಿಕ ಅಲ್ಲಿದ್ದ ಎಲ್ಲರೂ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಮೋದಿ ಬಗ್ಗೆ ಹಾಡು ಬರೆಯುತ್ತೀಯಾ ಎಂದು ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಅದು ಸಾಲದು ಎಂಬಂತೆ ಪಾಕಿಸ್ತಾನ ಪರ ಘೋಷಣೆ ಕೂಗು ಎಂದು ಒತ್ತಾಯ ಮಾಡಿದ್ದರಂತೆ. ಮೋದಿ ಬಗ್ಗೆ ಹಾಡು ಹೇಳ್ತೀಯಾ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರಂತೆ. ಬಳಿಕ ರೋಹಿತ್ ಮೇಲೆ ಹಲ್ಲೆ ನಡೆಸಿ ಅವರು ಪರಾರಿಯಾಗಿದ್ದಾರಂತೆ. ಹಲ್ಲೆಗೆ ಒಳಗಾದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.