News

ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರದ ಪತನದ ಬಗ್ಗೆ ಬಂದು ಕೇಳಿ ಎಂದ ಮಾಜಿ ಪಿಎಂ ದೇವೇಗೌಡ…..!

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದ್ದು, ಕಾಂಗ್ರೇಸ್ ಹಾಗೂ ಎನ್.ಡಿ.ಎ ಮೈತ್ರಿ ಕೂಟ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಎನ್.ಡಿ.ಎ ಕೂಟದ ಕೆಲ ನಾಯಕರು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರ ಪತನ ಆಗಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮಾಜಿ ಪ್ರಧಾನಿ ದೇವೇಗೌಡ ಸಹ ರಾಜ್ಯ ಸರ್ಕಾರದ ಪತನದ ಬಗ್ಗೆ ಹೇಳಿದ್ದಾರೆ.

ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ದೇವೇಗೌಡ ರವರು, ಚುನಾವಣೆ ಬಳಿಕ ನನ್ನ ಬಳಿ ಬಂದು ಕೇಳಿ ರಾಜ್ಯ ಸರ್ಕಾರದ ಪತನದ ಬಗ್ಗೆ ಹೇಳುತ್ತೇನೆ. ನಾನು ಎಲ್ಲೂ ಹೋಗಲ್ಲ, ಬೆಂಗಳೂರಿನ ಮನೆಗೆ ಬಂದು ಕೇಳಿ, ಹೇಳ್ತೀನಿ ಎಂದಿದ್ದಾರೆ. ಕಾಂಗ್ರೇಸ್ ನವರು ಏನೇನು ಮಾಡುತ್ತಿದ್ದಾರೆ ಅನ್ನೋದು ನನಗೆ ಎಲ್ಲವೂ ತಿಳಿದಿದೆ. ವಾಲ್ಮೀಕಿ, ಮಹಿಳೆಯರು ಹಾಗೂ ಮುಸ್ಲೀಂರಿಗೆ ಮೀಸಲಾತಿ ಕೊಟ್ಟವನು ಯಾವನು? ಡೋಂಟ್ ಟಾಕ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಗುಡುಗಿದ್ದಾರೆ.  ಸಿದ್ದರಾಮಯ್ಯ ಬಳಿ ಯಾವ ಜಾತ್ಯತೀತತೆ ಇದೆ ಠಾಕ್ರೆ ಬಳಿ ಹೋಗಿ ಹೊಂದಾಣಿಕೆ ಮಾಡಿಕೊಂಡಿದ್ದೀರಾ ಅಲ್ವಾ ನಿಮಗೆ ನಾಚಿಕೆ ಆಗೊಲ್ವಾ? ಜಾತ್ಯಾತೀತ ಪಕ್ಷದ ಬಗ್ಗೆ ಸಿಎಂ ಸಿದ್ದರಾಮಯ್ಯ ನವರ ಬಗ್ಗೆ ಮಾತನಾಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ದೇಶದಲ್ಲಿ ಎರಡು ರಾಜಕೀಯ ಬಣಗಳಿವೆ, ಒಂದು ಎನ್.ಡಿ.ಎಸ್ ಹಾಗೂ I.N.D.I.A ಒಕ್ಕೂಟವಿದೆ. ಒಂದು ಬಣಕ್ಕೆ ಯಾರೂ ಮುಖ್ಯಸ್ಥರಿಲ್ಲ. ಸುಭದ್ರ ಸರ್ಕಾರ ಕೊಟ್ಟಿರುವ ನರೇಂದ್ರ ಮೋದಿ ಎನ್.ಡಿ.ಎ ಒಕ್ಕೂಟದ ಮುಖ್ಯಸ್ಥರಾಗಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರವನ್ನು ಮುನಿಸ್ವಾಮಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಾರೆ. 91ನೇ ವಯಸ್ಸಿನಲ್ಲಿ ಯಾವುದೇ ಆಕಾಂಕ್ಷೆ ಇಲ್ಲದೇ ನಾವು ಎನ್.ಡಿ.ಎ ಕೂಟ ಸೇರಿದ್ದೇವೆ. ಮೋದಿ ಒಬ್ಬರಿಗೆ ದೇಶ ಆಳುವಂತಹ ಶಕ್ತಿ ಇರೋದು, ಅವರನ್ನು ಬಿಟ್ಟು ಯಾರಿಗಾದರೂ ಇದ್ದರೇ ಹೇಳಲಿ ನೋಡೋಣ, ಕರ್ನಾಟಕದ 28 ಕ್ಷೇತ್ರಗಳಲ್ಲಿ ಎನ್.ಡಿ.ಎ ಗೆಲುವು ಸಾಧಿಸುತ್ತದೆ ಎಂದು ದೇವೇಗೌಡ ರವರು ಹೇಳಿದ್ದಾರೆ.

Most Popular

To Top