ನನಗೂ ಮದುವೆಯಾಗಬೇಕೆಂಬ ಆಸೆಯಿದೆ, ಆದರೆ ಸಮಯ ಕೂಡಿ ಬರಬೇಕಲ್ವಾ ಎಂದ ಕಂಗನಾ….!

ಬಾಲಿವುಡ್ ಫೈರ್‍ ಬ್ರಾಂಡ್ ಕಂಗನಾ ರಾಣಾವತ್ ಬಾಲಿವುಡ್ ಸ್ಟಾರ್‍ ನಟರೂ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಸದಾ ಒಂದಲ್ಲ ಒಂದು ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಆಕೆ ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ತನಗೆ ಮದುವೆಯಾಗಲು ಆಸೆಯಿದ್ದು, ಅದಕ್ಕೆ ಸಮಯ ಸಹ ಕೂಡಿ ಬರಬೇಕಲ್ಲ ಎಂದು ಹೇಳಿದ್ದು, ಆಕೆಯ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ವಿವಾದಗಳಿಗೆ ಕೇರ್‍ ಆಫ್ ಅಡ್ರೆಸ್ ಎಂದರೇ ಕಂಗನಾ ರಾನೌತ್ ಎಂದು ಹೇಳಬಹುದು. ದೊಡ್ಡ ಸ್ಟಾರ್‍ ಗಳಾಗಲಿ, ಅಥವಾ ದೊಡ್ಡ ರಾಜಕಾರಣಿಗಳಾಗಲಿ ನೇರವಾಗಿ ಅವರ ಮೇಲೆ ಆರೋಪಗಳನ್ನು ಮಾಡಿಬಿಡುತ್ತಾರೆ. ಅವರನ್ನು ಎದುರಿಸಿ ಸಹ ನಿಲ್ಲುತ್ತಾರೆ. ಇನ್ನೂ ಕಂಗನಾ ಮದುವೆಯ ವಯಸ್ಸು ದಾಟಿದರೂ ಸಹ ಆಕೆ ಇನ್ನೂ ಮದುವೆಯಾಗಿಲ್ಲ, ಮದುವೆಯ ಬಗ್ಗೆ ಅನೇಕ ಬಾರಿ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದರು. ಇದೀಗ ಮತ್ತೊಮ್ಮೆ ಆಕೆ ಮದುವೆಯ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ.

ಸದ್ಯ ಕಂಗನಾ ಮದುವೆಯಾಗುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಯಾವಾಗ ಮದುವೆಯಾಗಲಿದ್ದಾರೆ ಎಂಬುದು ಮಾತ್ರ ತಿಳಿಸಿಲ್ಲ. ಮದುವೆಯ ಬಗ್ಗೆ ಕಂಗನಾ ಮಾತನಾಡುತ್ತಾ, ಯಾವುದು ಯಾವಾಗ ನಡೆಯಬೇಕು ಆಗಲೇ ಅದು ನಡೆಯುತ್ತದೆ. ನನಗೆ ಮದುವೆಯಾಗಬೇಕೆಂಬ ಆಸೆಯಿದೆ. ನನಗೆ ಅಂತ ಒಂದು ಸ್ವಂತ ಕುಟುಂಬ ಏರ್ಪಾಡುಮಾಡಿಕೊಳ್ಳಬೇಕು. ಆದರೆ ನಾನು ಆತುರಪಟ್ಟರೇ ಅದು ನಡೆಯೊಲ್ಲ. ಯಾವಾಗ ನಡೆಯಬೇಕು ಎಂದು ನನ್ನ ಹಣೆಯ ಮೇಲೆ ಬರೆದಿದೆಯೋ ಆಗಲೇ ಅದು ನಡೆಯುತ್ತದೆ ಎಂದಿದ್ದಾರೆ. ಇನ್ನೂ ಈ ಹಿಂದೆ ಸಹ ಕಂಗನಾ ಮದುವೆಯ ಬಗ್ಗೆ ಮಾತನಾಡಿದ್ದರು. ಧಾಕಡ್ ಸಿನೆಮಾದಲ್ಲಿದ್ದಂತೆ ನಾನು ಹೇಗೆ ಟಾಮ್ ಭಾಯ್ ಆಗಿರುತ್ತೇನೆ. ನಾನು ಏಕೆ ಇತರರ ಮೇಲೆ ಕೈ ಮಾಡುತ್ತೇನೆ. ನನ್ನ ಮೇಲೆ ಇಂತಹ ರೂಮರ್‍ ಗಳನ್ನು ಹರಿಬಿಟ್ಟರೇ ನನಗೆ ಮದುವೆಯಾಗುವುದು ಕಷ್ಟ ಎಂದೂ ಸಹ ಹೇಳಿದ್ದರು.

ಇನ್ನೂ ಕಂಗನಾ ಸದ್ಯ ಟಿಕೂ ವೆಡ್ಸ್ ಶೇರು ಎಂಬ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾವನ್ನು ಕಂಗನಾ ರವರೇ ನಿರ್ಮಾಣ ಮಾಡಿದ್ದಾರೆ. ಈ ಸಿನೆಮಾದಲ್ಲಿ ನವಾಜುದ್ದೀನ್ ಸಿದ್ದೀಕಿ, ಅವನೀತ್ ಕೌರ್‍ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನೆಮಾ ಜೂನ್ 23 ರಿಂದ ಅಮೇಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದರ ಜೊತೆಗೆ ಆಕೆ ಎಮರ್ಜೆನ್ಸಿ ಹಾಗೂ ಚಂದ್ರಮುಖಿ-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.