Film News

ರಿಸೆಪ್ಷನ್ ಕಾರ್ಯಕ್ರಮದಲ್ಲಿ ಅತ್ತೆಗೆ ಲಿಪ್ ಕಿಸ್ ಕೊಟ್ಟ ಹಾಸ್ಯ ನಟನ ಅಳಿಯ, ಕಿಡಿಕಾರಿದ ನೆಟ್ಟಿಗರು….!

ಕಾಲಿವುಡ್ ಖ್ಯಾತ ಹಾಸ್ಯ ನಟ ರೊಬೋ ಶಂಕರ್‍ ಕಿರುತೆರೆಯ ಮೂಲಕ ತುಂಬಾನೆ ಫೇಮಸ್ ಆದರು. ಬಳಿಕ ಸಿನೆಮಾಗಳಲ್ಲೂ ಸಹ ನಟಿಸುವ ಅವಕಾಶ ಪಡೆದುಕೊಂಡು ಖ್ಯಾತ ಹಾಸ್ಯ ನಟನಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಮಾರಿ, ವಿಶ್ವಾಸಂ ಸೇರಿದಂತೆ ಅನೇಕ ಸೂಪರ್‍ ಹಿಟ್  ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ರೋಬೋ ಶಂಕರ್‍ ಮಗಳ ಮದುವೆ ನಡೆದಿತ್ತು. ಮದುವೆ ರಿಸೆಪ್ಷನ್ ನಲ್ಲಿ ಮಗಳ ಗಂಡ ಅತ್ತೆಗೆ ಲಿಪ್ ಕಿಸ್ ಕೊಟ್ಟಿದ್ದಾನೆ. ಈ ಪೊಟೋ ಹಾಗೂ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಆತನ ನಡೆಯ ವಿರುದ್ದ ವಿಮರ್ಶೆಗಳನ್ನು ಮಾಡುತ್ತಿದ್ದಾರೆ.

ನಟ ರೊಬೋ ಶಂಕರ್‍ ಹಾಗೂ ಅವರ ಪತ್ನಿ ಪ್ರಿಯಾಂಕ ಶಂಕರ್‍ ರವರಿಗೆ ಇಂದ್ರಜಾ ಶಂಕರ್‍ ಎಂಬ ಮಗಳಿದ್ದಾರೆ. ಇಂದ್ರಜ ಶಂಕರ್‍ ಸಹ ಕಾಲಿವುಡ್ ನಲ್ಲಿ ನಟಿಯಾಗಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ದಳಪತಿ ವಿಜಯ್ ಅಭಿನಯದ ಬಿಗಿಲ್ ಸಿನೆಮಾದಲ್ಲಿ ಪುಟ್ ಬಾಲ್ ಪ್ಲೇಯರ್‍ ಆಗಿ ನಟಿಸಿದ್ದರು. ವಿಶ್ವಕ್ ಸೇನ್ ಜೊತೆಗೆ ಪಾಗಲ್ ಎಂಬ ಸಿನೆಮಾದಲ್ಲೂ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗಷ್ಟೆ ಆಕೆ ಮದುವೆಯಾದರು. ಸದ್ಯ ಆಕೆಗೆ 20 ವರ್ಷ ವಯಸ್ಸಾಗಿದ್ದು, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ಆಕೆಯ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಕೆಲವು ದಿನಗಳ ಬಳಿಕ ಈ ಜೋಡಿಯ ರೆಸೆಪ್ಷನ್ ಕಾರ್ಯಕ್ರಮ ಸಹ ಆಯೋಜನೆ ಮಾಡಲಾಗಿತ್ತು.

ತಮಿಳಿನ ನಿರ್ದೇಶಕ ಕಾರ್ತಿಕ್ ಜೊತೆಗೆ ಹಾಸ್ಯನಟ ರೊಬೋ ಶಂಕರ್‍ ಮಗಳಾದ ಇಂದ್ರಜ ಶಂಕರ್‍ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಕೆಲವು ದಿನಗಳ ಬಳಿಕ ರಿಸೆಪ್ಷನ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮದುವೆಗೆ ಕಡಿಮೆ ಮಂದಿ ಹಾಜರಾಗಿದ್ದರು. ಆದರೆ ರಿಸೆಪ್ಷನ್ ನಲ್ಲಿ ಮಾತ್ರ ಅನೇಕ ಸೆಲೆಬ್ರೆಟಿಗಳು ಹಾಜರಾಗಿದ್ದರು. ಕಮಲ್ ಹಾಸನ್, ಶಿವಕಾರ್ತಿಕೇಯನ್ ಸೇರಿದಂತೆ ಅನೇಕ ದೊಡ್ಡ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧುವರರನ್ನು ಆರ್ಶಿವಾದ ಮಾಡಿದರು. ಇನ್ನೂ ರಿಸೆಪ್ಷನ್ ವೇದಿಕೆಯ ಮೇಲೆ ಕಾರ್ತಿಕ್ ಡ್ಯಾನ್‌ ಮಾಡಿದ್ದರು. ರೊಬೋ ಶಂಕರ್‍ ಪತ್ನಿ ಪ್ರಿಯಾಂಕಾ ಶಂಕರ್‍ ಸಹ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಕಾರ್ತಿಕ್ ಮಾಡಿದ ಕೆಲಸದ ಕಾರಣದಿಂದ ವಿವಾದ ಒಂದು ಸೃಷ್ಟಿಯಾಗಿದೆ.

ನೃತ್ಯ ಮಾಡುತ್ತಾ ಕಾರ್ತಿಕ್ ತಮ್ಮ ಅತ್ತೆ ಪ್ರಿಯಾಂಕಾಗೆ ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅತ್ತೆ ತಾಯಿಗೆ ಸಮಾನ ಎಂದು ಹೇಳಲಾಗುತ್ತದೆ ಆದರೆ ಅಳಿಯ ಅತ್ತೆಗೆ ಲಿಪ್ ಕಿಸ್ ಕೊಟ್ಟಿದ್ದು ಸರಿಯಲ್ಲ ಎಂದು ಅನೇಕರು ವಿಮರ್ಶೆ ಮಾಡುತ್ತಿದ್ದಾರೆ. ಈ ಸುದ್ದಿ ಇದೀಗ ಕಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ.

Most Popular

To Top