News

ತರಕಾರಿ ಇಡೋಕೆ ಹೋಗಿ ತನ್ನ ಮಗುವನ್ನು ಫ್ರಿಡ್ಜ್ ನಲ್ಲಿಟ್ಟ ಮಹಾತಾಯಿ, ಬಳಿಕ ಆಗಿದ್ದೇನು ಗೊತ್ತಾ? ವೈರಲ್ ಆದ ವಿಡಿಯೋ…!

ಇತ್ತೀಚಿಗೆ ಚಿಕ್ಕವರಿಂದ ದೊಡ್ಡವರವರೆಗೂ ಮೊಬೈಲ್ ಗೆ ದಾಸರಾಗುತ್ತಿದ್ದಾರೆ. ಶ್ರೀಮಂತರ ಸ್ವತ್ತು ಎಂಬಂತೆ ಇದ್ದ ಮೊಬೈಲ್ ಇದೀಗ ಕುರಿ ಕಾಯುವವನೂ ಸಹ ಮೊಬೈಲ್ ಬಳಸುತ್ತಿದ್ದಾನೆ. ಅದರಲ್ಲೂ ಉಚಿತವಾಗಿ ಇಂಟರ್‍ ನೆಟ್ ಸೌಲಭ್ಯ ಸಹ ಸಿಗುತ್ತಿದ್ದು, ಸೋಷಿಯಲ್ ಮಿಡಿಯಾ ಸಹ ಹೆಚ್ಚಾಗಿ ಬಳಕೆಯಾಗುತ್ತಿದೆ. ಮೊಬೈಲ್ ಗೆ ದಾಸಳಾಗಿದ್ದ ಓರ್ವ ಮಹಾತಾಯಿ ತರಕಾರಿಯನ್ನು ಇಡಲು ಹೋಗಿ ಮೈಮರೆತು ತನ್ನ ಮಗುವನ್ನೇ ಫ್ರಿಡ್ಜ್ ನಲ್ಲಿಟ್ಟ ಘಟನೆ ನಡೆದಿದೆ.

ಇದೀಗ ಪ್ರತಿಯೊಬ್ಬರು ಮೊಬೈಲ್ ಬಳಸುತ್ತಿದ್ದಾರೆ. ಅಡುಗೆ ಮಾಡುವಾಗ, ಊಟ ಮಾಡುವಾಗ, ಶೌಚಾಲಯಕ್ಕೆ ಹೋಗುವಾಗ ಮೊಬೈಲ್ ಮಾತ್ರ ಮರೆಯುತ್ತಿಲ್ಲ ಅದನ್ನು ಕೈಯಲ್ಲೇ ಇಟ್ಟುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಇದೀಗ ಪೋನ್ ಇಲ್ಲದೇ ಏನು ಕೆಲಸ ನಡೆಯೊಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಅನೇಕರ ಪರಿಸ್ಥಿತಿಯಾಗಿದೆ. ಇದೀಗ ಮೊಬೈಲ್ ಬಳಸುತ್ತಾ ತಲ್ಲೀನಳಾಗಿದ್ದ ತಾಯಿಯೊಬ್ಬಳು ತನ್ನ ಮಗುವನ್ನು ಫ್ರಿಡ್ಜ್ ನಲ್ಲಿಟ್ಟು ಮೈ ಮರೆತು ಮೊಬೈಲ್ ಬಳಸುತ್ತಿರುತ್ತಾರೆ. ಈ ಸಂಬಂಧ ವಿಡಿಯೋ ಒಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ಗೆ ವಿವಿಧ ರೀತಿಯ ವಿಮರ್ಶೆಗಳೂ ಸಹ ಎದುರಾಗುತ್ತಿದೆ. ಈ ಮಹಾತಾಯಿಯ ಬೇಜವಾಬ್ದಾರಿಗೆ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮೊಬೈಲ್ ನಲ್ಲಿ ಮಾತನಾಡುತ್ತಾ ತರಕಾರಿ ಕಟ್ ಮಾಡುತ್ತಿರುತ್ತಾಳೆ. ಆಕೆಯ ಮುಂದೆ ಮಗು ಆಟವಾಡುತ್ತಿರುತ್ತದೆ. ಸ್ವಲ್ಪ ಸಮಯದ ಬಳಿಕ ತರಕಾರಿ ಕಟ್ ಮಾಡುವುದು ಮುಗಿದ ಬಳಿಕ ಆಕೆ ತರಕಾರಿಯನ್ನು ಫ್ರಿಡ್ಜ್ ನಲ್ಲಿ ಇಡಲು ಹೋಗುತ್ತಾಳೆ. ಮೊಬೈಲ್ ನಲ್ಲಿ ಮಾತನಾಡುತ್ತಾ ಆಕೆ ತರಕಾರಿಯನ್ನು ಬಿಟ್ಟು, ತನ್ನ ಮಗುವನ್ನೆ ಎತ್ತಿಕೊಂಡು ಹೋಗಿ ಫ್ರಿಡ್ಜ್ ಬಾಗಿಲು ತೆಗೆದು ತನ್ನ ಮಗುವನ್ನು ಒಳಗೆ ಇಟ್ಟು ಬಾಗಿಲು ಹಾಕುತ್ತಾಳೆ. ಬಳಿಕ ಮೊಬೈಲ್ ನಲ್ಲಿ ಮಾತನಾಡುತ್ತಾ ಕುಳಿತಿದ್ದಾಳೆ. ಮಗುವಿನ ಅರಿವೇ ಆಕೆಗೆ ಇರುವುದಿಲ್ಲ. ನಂತರ ಗಂಡ ಬಂದು ತಿಂಡಿ ತಿನ್ನಲು ಕೂತಾಗ ಮಗು ಇಲ್ಲದೇ ಇರುವುದನ್ನು ಗಮನಿಸಿ ಆಕೆಯನ್ನು ಕೇಳುತ್ತಾನೆ. ಆದರೂ ಸಹ ಆಕೆಗೆ ಮಗು ಎಲ್ಲಿ ಎಂಬ ಪರಿಜ್ಞಾನವೇ ಇರುವುದಿಲ್ಲ.

ಬಳಿಕ ಮಗುವನ್ನು ಹುಡುಕಾಡಲು ಮುಂದಾಗುತ್ತಾಳೆ. ಈ ಸಮಯದ್ಲಿ ಫ್ರಿಡ್ಜ್ ನಲ್ಲಿ ಶಬ್ದ ಬರುತ್ತಿರುವುದನ್ನು ಗಮನಿಸಿದ ಗಂಡ ಫ್ರಿಡ್ಜ್ ತೆಗೆದು ಮಗು ಇರುವುದನ್ನು ನೋಡಿ ಅಲ್ಲಿಂದ ಮಗುವನ್ನು ಎತ್ತಿಕೊಳ್ಳುತ್ತಾನೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಆಕೆಯ ವಿರುದ್ದ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಜೊತೆಗೆ ಕೆಲವರು ಇದು ಸೋಷಿಯಲ್ ಮಿಡಿಯಾದಲ್ಲಿ ಪಾಪ್ಯುಲರ್‍ ಆಗುವುದಕ್ಕೆ ಈ ರೀತಿ ಮಾಡಿದ್ದಾರೆ ಎಂದು, ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಸಹ ಹೊರಹಾಕುತ್ತಿದ್ದಾರೆ.

Most Popular

To Top