Film News

ಯಂಗ್ ಹಿರೋ ಜೊತೆಗೆ ಸೀಕ್ರೆಟ್ ಆಗಿ ಅಫೈರ್ ನಡೆಸುತ್ತಿದ್ದಾರಂತೆ ಹಾಟ್ ಆಂಕರ್ ಶ್ರೀಮುಖಿ, ವೈರಲ್ ಆದ ರೂಮರ್…..!

ತೆಲುಗು ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಆಗಿ ಕ್ರೇಜ್ ಪಡೆದುಕೊಂಡ ಆಂಕರ್‍ ಶ್ರೀಮುಖಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರನ್ನೂ ಮೀರಿಸುವಂತೆ ಹಾಟ್ ಪೋಸ್ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಗ್ಲಾಮರ್‍ ಸುನಾಮಿ ಹಬ್ಬಿಸುತ್ತಿದ್ದಾರೆ. ದಿನೇ ದಿನೇ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಸಿನೆಮಾಗಳು, ಕಿರುತೆರೆ ಶೋಗಳಲ್ಲಿ ಬ್ಯುಸಿಯಾಗಿರುವ ಶ್ರೀಮುಖಿ ಸುಮಾರು ವರ್ಷಗಳಿಂದ ಯಂಗ್ ಹಿರೋ ಜೊತೆಗೆ ಲವ್ ಟ್ರಾಕ್ ನಡೆಸುತ್ತಿದ್ದಾರೆ ಎಂಬ ರೂಮರ್‍ ಇದೀಗ ಹಾಟ್ ಟಾಪಿಕ್ ಆಗಿದೆ.

ಸದ್ಯ ತೆಲುಗು ಕಿರುತೆರೆಯಲ್ಲಿ ಶ್ರೀಮುಖಿ ಜೋರಾಗಿ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಸ್ಟಾರ್‍ ಮಾ ಟಿವಿಯಲ್ಲಿ ಪ್ರಸಾರವಾಗುವ ನಾಲ್ಕೈದು ಶೋಗಳಿಗೆ ಆಕೆ ಹೋಸ್ಟ್ ಮಾಡುತ್ತಿದ್ದಾರೆ. ಕಿರುತೆರೆಯ ಜೊತೆಗೆ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮಾಡಿಸುತ್ತಿರುತ್ತಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡರೇ ಸಾಕು ಆಕೆಯ ಅಭಿಮಾನಿಗಳು ಹಬ್ಬ ಮಾಡಿಕೊಳ್ಳುತ್ತಾರೆ. ಇದೀಗ ಶ್ರೀಮುಖಿಗೆ ಸಂಬಂಧಿಸಿದ ರೂಮರ್‍ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಶ್ರೀಮುಖಿ ಮದುವೆಯ ಬಗ್ಗೆ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದೀಗ ಮತ್ತೊಂದು ರೂಮರ್‍ ಭಾರಿ ಸದ್ದು ಮಾಡುತ್ತಿದೆ. ಶ್ರೀಮುಖಿ ಯಂಗ್ ಹಿರೋ ಒಬ್ಬರ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಇಂಟರ್‍ ನೆಟ್ ಅನ್ನು ಶೇಕ್ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಆಕೆ ಟಾಲಿವುಡ್ ನ ಯಂಗ್ ನಟನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದಾರಂತೆ. ಇಬ್ಬರೂ ರಹಸ್ಯವಾಗಿ ಪ್ರೀತಿಸಿಕೊಳ್ಳುತ್ತಿದ್ದಾರಂತೆ. ಜೊತೆಗೆ ಈ ಸುದ್ದಿ ಶ್ರೀಮುಖಿ ಕುಟುಂಬಸ್ಥರಿಗೂ ಸಹ ಗೊತ್ತಂತೆ. ಈ ವರ್ಷದ ಅಂತ್ಯದಲ್ಲಿ ಮದುವೆ ಸಹ ಮಾಡಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಇನ್ನೂ ಈ ಕುರಿತು ಯಾವುದೇ ಅಧಿಕೃತ ಅಪ್ಡೇಟ್ ಮಾತ್ರ ಇಲ್ಲ. ಆದರೆ ಸುದ್ದಿ ಮಾತ್ರ ಬಿರುಗಾಳಿಯಂತೆ ಸೋಷಿಯಲ್ ಮಿಡಿಯಾ ತುಂಬಾ ಹರಿದಾಡುತ್ತಿದೆ.

ಇನ್ನೂ ಈ ಹಿಂದೆ ಸಹ ಶ್ರೀಮುಖಿ ಮದುವೆಯ ಬಗ್ಗೆ ರೂಮರ್‍ ಕೇಳಿಬಂದಿತ್ತು. ಶ್ರೀಮುಖಿ ಆಂಕರ್‍ ಪ್ರದೀಪ್ ರವರನ್ನು ವಿವಾಹ ಮಾಡಿಕೊಳ್ಳಲಿದ್ದಾರೆ ಎಂಬ ರೂಮರ್‍ ಬಂದಿದ್ದು, ಅದನ್ನು ಶ್ರೀಮುಖಿ ತಳ್ಳಿಹಾಕಿದ್ದರು. ಬಳಿಕ ಹೈದರಾಬಾದ್ ಮೂಲಕ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಂತು. ಈ ರೂಮರ್‍ ಗಳ ವಿರುದ್ದ ಆಕ್ರೋಷಗೊಂಡ ಶ್ರೀಮುಖಿ ನನಗೆ ಮದುವೆ ಫಿಕ್ಸ್ ಆದರೇ ನಾನೇ ಸ್ವತಃ ಹೇಳುತ್ತೇನೆ. ಸುಳ್ಳು ಸುದ್ದಿಗಳನ್ನು ಬರೆಯಬೇಡಿ ಎಂದು ಫೈರ್‍ ಆಗಿದ್ದರು. ಇದೀಗ ಹರಿದಾಡುತ್ತಿರುವ ರೂಮರ್‍ ಬಗ್ಗೆ ಆಕೆ ಯಾವ ರೀತಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top