News

ಪೋನ್ ನಲ್ಲಿ ಮಾತನಾಡುತ್ತಿದ್ದಾಗ ತುಂಬಾ ಅಳುತ್ತಿದ್ದ ಮಗನನ್ನು ಕತ್ತು ಹಿಸುಕಿ ಸಾಯಿಸಿದ ಪಾಪಿ ತಾಯಿ….!

ತಾಯಿಯೇ ಮೊದಲ ದೇವರು ಎನ್ನುತ್ತಾರೆ, ಆದರೆ ಇಲ್ಲೊಬ್ಬ ಪಾಪಿ ತಾಯಿ ತಾಯಿ ಸಂಕುಲಕ್ಕೆ ಅವಮಾನವಾಗುವಂತಹ ಪಾಪದ ಕೆಲಸ ಮಾಡಿದ್ದಾರೆ. ಹೆತ್ತ ತಾಯಿ ತನ್ನ ಮಗು ಅತ್ತರೇ ಸಂತೈಸಲು ತುಂಬಾನೆ ಕಸರತ್ತು ಮಾಡುತ್ತಾಳೆ. ಆದರೇ ಪೋನ್ ನಲ್ಲಿ ಮಾತನಾಡುವ ಸಮಯದಲ್ಲಿ ಮಗು ಅತ್ತಿದೆ ಎಂಬ ಕಾರಣಕ್ಕೆ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನುಷ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್ ನ ಗಿರಿಧ್ ಎಂಬಲ್ಲಿ ತಾಯಿಯೊಬ್ಬಳು ತನ್ನ 2 ವರ್ಷದ ಮಗುವನ್ನು ಕೊಲೆ ಮಾಡಿದ್ದಾಳೆ. ಮಗು ಅಳುತ್ತಿದೆ ಎಂದು ಸಿಟ್ಟಿಗೆದ್ದ ತಾಯಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಕಳೆದ ಗುರುವಾರ ರಾತ್ರಿ ಈ ಘಟನೆ ಬೆಂಗಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಮಹಿಳೆಯನ್ನು ಅಫ್ಸಾನಾ ಖಾತೂನ್ ಎಂದು ಗುರ್ತಿಸಲಾಗಿದೆ. ಸದ್ಯ ಆಕೆಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಕಳೆದ ಗುರುವಾರ ರಾತ್ರಿ ಆರೋಪಿ ಅಫ್ಸಾನಾ ಖಾತೂನ್ ಪೋನ್ ನಲ್ಲಿ ಮಾತನಾಡುತ್ತಿದ್ದಾಗ ಆಕೆಯ 2 ವರ್ಷದ ಪುತ್ರ ನಿರಂತರವಾಗಿ ಅತ್ತಿದ್ದಾನೆ. ಈ ಕಾರಣದಿಂದ ಅಫ್ಸಾನಾ ಸಿಟ್ಟಿಗೆದ್ದಿದ್ದಾಳೆ. ಬಳಿಕ ಕೋಪ ತಾಳಲಾದರದೆ 2 ವರ್ಷದ ಪುತ್ರ ಆಸಿಫ್ ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್  ಮೂಲಗಳಿಂದ ತಿಳಿದುಬಂದಿದೆ.

ಇನ್ನೂ ಘಟನೆಯ ಬಗ್ಗೆ ಸುದ್ದಿ ತಿಳಿದ ಕೂಡಲೇ ಪೊಲೀಸರು ಆರೋಪಿಯ ಮನೆಗೆ ತಲುಪಿ ಮಗುವಿನ ದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಮಹಿಳೆಯನ್ನು ಶನಿವಾರ ಬಂಧಿಸಿದ ಜೈಲಿಗೆ ಕಳುಹಿಸಲಾಗಿದೆ. ಇನ್ನೂ ಮಗುವಿನ ತಾತ ರೋಜನ್ ಅನ್ಸಾರಿ ತನ್ನ ಮೊಮ್ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿ ಅಫ್ಸಾನಾ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಪತಿಯೊಂದಿಗೆ ಅಪ್ಸಾನಾ ಗಲಾಟೆ ಮಾಡಿಕೊಂಡು ಕಿರಿಯ ಪುತ್ರನೊಂದಿಗೆ ಕೋಣೆಗೆ ಹೋಗಿ ಬೀಗ ಹಾಕಿಕೊಂಡಿದ್ದಾಳೆ. ಈ ವೇಳೆ ಮಗು ಅಳುತ್ತಿದ್ದಾಗ ಆಕೆ ಕತ್ತು ಹಿಸುಕಿ ಸಾಯಿಸಿದ್ದಾಳೆ ಎಂದು ದೂರಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿದರೂ ಪ್ರಯೋಜನವಾಗಿಲ್ಲ, ಮಗು ಆಸ್ಪತ್ರೆಗೆ ಸಾಗಿಸುವದಕ್ಕೂ ಮುಂಚೆಯೇ ಮೃತಪಟ್ಟಿದೆ ಎನ್ನಲಾಗಿದೆ. ಇನ್ನೂ ಪೊಲೀಸರ ವಿಚಾರಣೆಯ ವೇಳೆ ಆರೋಪಿ ಮಹಿಳೆ ನನಗೆ ಮಗನನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಮಗು ಅಳುತ್ತಿತ್ತು, ಹಾಸಿಗೆಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ.

Most Popular

To Top