News

ನಿಮಗೂ ಟಿಟಿಡಿಯ ಹೊಸ ಕ್ಯಾಲೆಂಡರ್ ಬೇಕಾ, ತಿರುಮಲ ತಿಮ್ಮಪ್ಪನ ಕ್ಯಾಲೆಂಡರ್ ಹೀಗೆ ಖರೀದಿಸಿ….!

ಕಲಿಯುಗದಲ್ಲಿ ದೊಡ್ಡ ಭಕ್ತ ವೃಂದವನ್ನು ಹೊಂದಿರುವ ದೇವಾಲಯಗಳಲ್ಲಿ ಟಾಪ್ ಸ್ಥಾನದಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯ ಒಂದಾಗಿದೆ. ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನಕ್ಕೆ ತುಂಬಾನೆ ಬೇಡಿಕೆಯಿದೆ. ದರ್ಶನಕ್ಕೆ ಟಿಕೆಟ್ ಸೆಕೆಂಡ್ ಗಳಲ್ಲೇ ಸೋಲ್ಡ್ ಆಗುತ್ತವೆ. ಜೊತೆಗೆ ಟಿಟಿಡಿಯಲ್ಲಿ ಉತ್ಪಾದನೆಯಾಗುವಂತಹ ಉತ್ಪನ್ನಗಳಿಗೂ  ಸಹ ತುಂಬಾನೆ ಬೇಡಿಕೆಯಿದೆ. ಇದೀಗ ಟಿಟಿಡಿ ನೂತನ ವರ್ಷದ ಡೈರಿ ಹಾಗೂ ಕ್ಯಾಲೆಂಡರ್‍ ಗಳಿಗೂ ಬೇಡಿಕೆಯಿದ್ದು, ನಿಮಗೂ ಟಿಟಿಡಿ ಕ್ಯಾಲೆಂಡರ್‍ ಬೇಕಾದರೇ ಈ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ.

ತಿರುಮಲ ತಿಮ್ಮಪ್ಪನ ಕ್ಯಾಲೆಂಡರ್‍ ಗಳನ್ನು ಈ ಬಾರಿ ಸಹ ಬಿಡುಗಡೆ ಮಾಡಲಾಗಿದೆ. ನೂತನ ಕ್ಯಾಲೆಂಡರ್‍ ಖರೀದಿ ಮಾಡಲು ಆಸಕ್ತರು ಟಿಟಿಡಿಯ ಅಧಿಕೃತ ವೆಬ್ ಸೈಟ್ http://ttdevasthanams.ap.gov.in ಗೆ ಭೇಟಿ ನೀಡಬೇಕಿದೆ. ಮೊದಲು ಈ ತಾಣಕ್ಕೆ ಭೇಡಿ ನೀಡಿ ಲಾಗಿನ್ ಆಗಬೇಕು. ತಮ್ಮ ಮೊಬೈಲ್ ನಂಬರ್‍ ನಮೂದಿಸಿ ಬಳಿಕ ಒಟಿಪಿ ಕೊಟ್ಟ ಕೂಡಲೇ ವೆಬ್ ಸೈಟ್ ಲಾಗಿನ್ ಆಗುತ್ತದೆ. ಅಲ್ಲಿ ಬಲಭಾಗದ ಸ್ಟೇಟಸ್ ಬಾರ್‍ ನಲ್ಲಿ ಮೇಲ್ಭಾಗದಲ್ಲಿ ಆನ್ ಲೈನ್ ಸೇವೆಗಳ ಟ್ಯಾಬ್ ಇರುತ್ತದೆ. ಅದನ್ನು ಸ್ಕ್ರೋಲ್ ಮಾಡಿದಾಗ ಪಬ್ಲಿಕೇಷನ್ ಎಂಬ ಆಪ್ಷನ್ ಕಾಣುತ್ತದೆ. ಬಳಿಕ ಅದರಲ್ಲಿ ಎರಡು ಆಪ್ಷನ್ ಇರುತ್ತೆ. ಸಪ್ತಗಿರಿ ಮ್ಯಾಗ್ಜೈನ್ ಹಾಗೂ ಮತ್ತೊಂಡು ಡೈರೀಸ್-ಕ್ಯಾಲೆಂಡರ್ಸ್ ಎಂಬ ಆಪ್ಷನ್ ಕಾಣುತ್ತದೆ.

ಆ ವಿಭಾಗದಲ್ಲಿ ಡೈರೀಸ್/ಕ್ಯಾಲೆಂಡರ್‍ ಹಾಗೂ ಅಲ್ಮಾನಾಕ್ ಎಂಬ ಆಯ್ಕೆಗಳು ಕಾಣುತ್ತವೆ. ಬಳಿಕ ನಿಯಮ ಹಾಗೂ ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಅದರಲ್ಲಿ ಬಿಗ್ ಡೈರಿ, ಸ್ಮಾಲ್ ಡೈರಿ, ಕ್ಯಾಲೆಂಡರ್ಸ್ ಹಾಗೂ ಟೇಬಲ್ ಟಾಪ್ ಕ್ಯಾಲೆಂಡರ್‍ ಎಂಬ ಆಯ್ಕೆಗಳಿವೆ. ನಿಮ್ಮ ಆದ್ಯತೆಯ ಆಯ್ಕೆಯನ್ನು ಸೆಲೆಕ್ಟ ಮಾಡಿಕೊಳ್ಳಿ. ದೊಡ್ಡ ಡೈರಿಗಳ ಬೆಲೆ 150 ರೂಪಾಯಿ, ಸ್ಮಾಲ್ ಡೈರಿ 120 ರೂಪಾಯಿ, 12 ಶೀಟ್ ಗಳ ಕ್ಯಾಲೆಂಡರ್‍ 130 ರೂಪಾಯಿಗಳು ಹಾಗೂ ಟೇಬಲ್ ಟಾಪ್ ಕ್ಯಾಲೆಂಡರ್‍ 75 ರೂಪಾಯಿಗಳಾಗಿದೆ. ಬಳಿಕ ನಿಮಗೆ ಎಷ್ಟು ಕ್ಯಾಲೆಂಡರ್‍ ಬೇಕು ಎಂಬುದನ್ನು ನಮೂದಿಸಿ, ವಿಳಾಸ ನಮೂದಿಸಿ. ಕೊನೆಯದಾಗಿ ಒಟ್ಟು ಆರ್ಡರ್‍ ಮೊತ್ತವನ್ನು ಆನ್ ಲೈನ್ ಮೂಲಕ ಪಾವತಿಸಬೇಕು. ತಾಣದಲ್ಲಿ ತಿಳಿಸಿದಂತೆ ತಮ್ಮ ಮನೆಯ ವಿಳಾಸಕ್ಕೆ ನೇರವಾಗಿ ಕ್ಯಾಲೆಂಡರ್‍ ಬರುತ್ತದೆ.

Most Popular

To Top