ಸಿನೆಮಾಗಳಲ್ಲಿ ನಟಿಸೋಕು ಮುಂಚೆ ತುಂಬಾ ಕೆಟ್ಟ ಜಾಹಿರಾತುಗಳಲ್ಲಿ ನಟಿಸಿದ್ದೆ ಎಂದ ಪ್ರಿಯಾಂಕ ಮೋಹನ್, ವೈರಲ್ ಆದ ಕಾಮೆಂಟ್ಸ್….!

Follow Us :

ಸಿನಿರಂಗದಲ್ಲಿ ಎಂಟ್ರಿ ಕೊಡುವ ಅನೇಕ ಕಲಾವಿದರು ಆರಂಭದಲ್ಲಿ ತುಂಬಾನೆ ಸಮಸ್ಯೆಗಳನ್ನು ಅನುಭವಿಸಿರುತ್ತಾರೆ. ಈ ಸಾಲಿಗೆ ಯಂಗ್ ಬ್ಯೂಟಿ ಪ್ರಿಯಾಂಕಾ ಮೋಹನ್ ಸಹ ಸೇರುತ್ತಾರೆ. ತಮಿಳು ಸಿನೆಮಾಗಳ ಮೂಲಕ ಕೆರಿಯರ್‍ ಆರಂಭಿಸಿದ ಈಕೆ ಗ್ಯಾಂಗ್ ಲೀಡರ್‍ ಎಂಬ ನಾನಿ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಇದೀಗ ಸಂದರ್ಶನವೊಂದರಲ್ಲಿ ಪ್ರಿಯಾಂಕ ಮೋಹನ್ ಕೆಲವೊಂದು ಕಾಮೆಂಟ್ ಗಳನ್ನು ನೀಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಪ್ರಿಯಾಂಕಾ ಮೋಹನ್ ಹೆಚ್ಚು ಪರಿಚಯ ಅವಶ್ಯಕತೆಯಿಲ್ಲದ ನಟಿ ಎಂದೇ ಹೇಳಬಹುದು. ಸದ್ಯ ಆಕೆ ತೆಲುಗಿನ ಕೆಲವೊಂದು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರ ಒಜಿ ಸಿನೆಮಾದಲ್ಲೂ ಸಹ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸಿನೆಮಾದ ಜೊತೆಗೆ ಆಕೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ನಟಿ ಪ್ರಿಯಾಂಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಸಿನೆಮಾಗಳಲ್ಲಿ ನಟಿಸುವುದಕ್ಕೂ ಮುಂಚೆ ಆಕೆ ಏನು ಮಾಡುತ್ತಿದ್ದರು ಎಂಬ ವಿಚಾರವನ್ನು ಹಂಚಿಕೊಂಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸಂದರ್ಶನದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಮೋಹನ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿರಂಗಕ್ಕೆ ಬರುವ ಮುಂಚೆ ಆಕೆ ಹಣಕ್ಕಾಗಿ ತುಂಬಾನೆ ಕಷ್ಟ ಪಟ್ಟಿದ್ದರಂತೆ. ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಕ ನನ್ನ ಕುಟುಂಬ ಆರ್ಥಿಕವಾಗಿ ಬಲಿಷ್ಟವಾದ ಕುಟುಂಬವಾಗಿರಲಿಲ್ಲ. ಕುಟುಂಬ ನಿರ್ವಹಣೆಗಾಗಿ ಅನೇಕ ಸಂಕಷ್ಟಗಳನ್ನು ಎದುರುಸುತ್ತಿದ್ದೆವಯ. ಚಿಕ್ಕಂದಿನಿಂದ ನನಗೆ ಸಿನೆಮಾಗಳಲ್ಲಿ ನಟಿಸುವ ಆಸಕ್ತಿಯಿತ್ತು. ಈ ಹಾದಿಯಲ್ಲೇ ನಾನು ನಟಿಯಾಗಲು ಪ್ರಯತ್ನಗಳನ್ನು ಮಾಡುತ್ತಿದೆ. ಕುಟುಂಬ ನಿರ್ವಹಣೆ ಮಾಡಲು, ಹಣ ಸಂಪಾದನೆ ಮಾಡಲು ತುಂಬಾನೆ ಚೀಪ್ ಕೆಲಸಗಳನ್ನು ಮಾಡಿದ್ದೆ. ಇಂಡಸ್ಟ್ರಿಗೆ ಬಂದು ಚೀಪ್ ಜಾಹಿರಾತುಗಳಲ್ಲಿ ನಟಿಸಿ ಅದರಿಂದ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿದೆ. ಆ ಜಾಹಿರಾತುಗಳಿಗಾಗಿ ಅಷ್ಟೊಂದು ಹಣ ಸಹ ಬರುತ್ತಿರಲಿಲ್ಲ. ಇನ್ನೂ ಜಾಹಿರಾತುಗಳಿಂದ ಬಂದ ಹಣ ಸಾಲದ ಬಡ್ಡಿ ತೀರಿಸೋಕೆ ಸರಿಹೋಗುತ್ತಿತ್ತು ಎಂದು ಹೇಳಿದ್ದಾರೆ.

ಇನ್ನೂ ಪ್ರಿಯಾಂಕ ಮೋಹನ್ ನೀಡಿದಂತಹ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಹೇಳಿಕೆಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನೂ ಆಕೆ ಎಂತಹ ಜಾಹಿರಾತುಗಳಲ್ಲಿ ನಟಿಸಿದ್ದರು ಎಂಬುದು ಮಾತ್ರ ತಿಳಿಸಿದಲ್ಲ. ಸದ್ಯ ಪ್ರಿಯಾಂಕ ಮೋಹನ್ ಗೆ ತೆಲುಗು ಹಾಗೂ ತಮಿಳಿನಲ್ಲಿ ಒಳ್ಳೆಯ ಅವಕಾಶಗಳು ಬರುತ್ತಿದ್ದು, ಆಕೆ ಸಿನೆಮಾಗಳ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.