ಮೊಬೈಲ್ ನಲ್ಲಿ ರೀಲ್ಸ್ ನೋಡಿದ ಕೋತಿ ವಿಡಿಯೋ ವೈರಲ್, ಮನುಷ್ಯರಂತೆ ಕೋತಿ ಸಹ ರೀಲ್ಸ್ ನೋಡುತ್ತೆ…!

Follow Us :

ಸ್ಮಾರ್ಟ್ ಪೋನ್ ಗಳು ಬಂದ ಮೇಲೆ ಬಹುತೇಕ ಎಲ್ಲರೂ ಮೊಬೈಲ್ ಗಳಿಗೆ ದಾಸರಾಗುತ್ತಿದ್ದಾರೆ. ಮೊಬೈಲ್ ಬಳಸದೇ ಇರುವವರ ಸಂಖ್ಯೆ ತುಂಬಾನೆ ವಿರಳ ಎಂದೇ ಹೇಳಬಹುದಾಗಿದೆ. ಅದರಲ್ಲೂ ಸ್ಮಾರ್ಟ್ ಪೋನ್ ನಲ್ಲಿ ಸೋಷಿಯಲ್ ಮಿಡಿಯಾ ಬಳಸುವವರ ಸಂಖ್ಯೆ ಸಹ ಹೆಚ್ಚಾಗಿದೆ. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿದರೇ ಕೇವಲ ಮನುಜರು ಮಾತ್ರವಲ್ಲ ಪ್ರಾಣಿಗಳೂ ಸಹ ಮೊಬೈಲ್ ಗೆ ದಾಸರಾಗಿದ್ದಾರೆ ಎನ್ನಬಹುದಾಗಿದೆ.

ಇಡೀ ಜೀವ ಸಂಕುಲದಲ್ಲಿ ಮನುಷ್ಯರನ್ನು ಅನುಸರಿಸುವಂತಹ ಪ್ರಾಣಿಗಳಲ್ಲಿ ಕೋತಿಗಳು ಎಂದು ಹೇಳಬಹುದು. ಮಂಗನಿಂದ ಮಾನವ ಎಂಬಂತೆ ಇದೀಗ ಮಾನವರನ್ನು ಕೋತಿಗಳು ಬೇಗ ಅನುಕರಣೆ ಮಾಡುತ್ತವೆ. ಇದಕ್ಕೆ ಪೂರಕ ಎಂಬಂತೆ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕೋತಿಗಳು ಮೊಬೈಲ್ ಬಳಕೆ ಮಾಡುವುದನ್ನು ನೋಡಬಹುದಾಗಿದೆ. ಕೋತಿಗಳು ಮೊಬೈಲ್ ನಲ್ಲಿ ಸ್ಕ್ರೋಲ್ ಮಾಡುವಂತಹ  ಕಲೆಯನ್ನು ಮನುಷ್ಯರಿಂದ ಕಲಿತುಕೊಂಡಿದೆ ಎನ್ನಬಹುದಾಗಿದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೋತಿಯೊಂದು ಮೊಬೈಲ್ ಬಳಕೆ ಮಾಡುವುದನ್ನು ನೋಡಬಹುದಾಗಿದೆ.

ಕೋತಿಯೊಂದು ಹಾಸಿಗೆಯ ಮೇಲೆ ಆರಾಮಾಗಿ ಮಲಗಿ ರೀಲ್ಸ್ ಗಳನ್ನು ನೋಡುತ್ತಿರುತ್ತದೆ. ಮನುಷ್ಯನಂತೆ ಸ್ಕ್ರೋಲ್ ಮಾಡುವುದನ್ನೂ ಸಹ ನೋಡಬಹುದಾಗಿದೆ. ಇನ್ನೂ ಈ ವಿಡಿಯೋ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಡಿಮೆ ಸಮಯದಲ್ಲೇ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದೆ. ಸುಮಾರು ನಾಲ್ಕು ಲಕ್ಷಕ್ಕೂ ಮಂದಿ ಈ ವಿಡಿಯೋ ನೋಡಿದ್ದಾರೆ. ಇನ್ನೂ ಈ ವಿಡಿಯೋಗೆ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ಅಭಿಪ್ರಾಯಗಳೂ ಸಹ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್  ಆಗುತ್ತಿದೆ.