Film News

ಆ ಕಾರಣಕ್ಕಾಗಿ ನನಗೆ ಮನೆಯ ಹೆಸರು ಬೇಡ ಎಂದುಕೊಂಡೆ ಎಂದ ನಟಿ ಸಂಯುಕ್ತಾ ಮಿನನ್, ವೈರಲ್ ಆದ ಕಾಮೆಂಟ್ಸ್….!

ಮಲಯಾಳಂ ಬ್ಯೂಟಿ ಸಂಯುಕ್ತಾ ಮಿನನ್ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ಆಕೆ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ರಾಣಾ ದಗ್ಗುಬಾಟಿ ಪತ್ನಿಯ ಪಾತ್ರದಲ್ಲಿ ಆಕೆ ತುಂಬಾನೆ ಚೆನ್ನಾಗಿ ನಟಿಸಿದ್ದಾರೆ. ಆಕೆಯ ನಟನೆಗೆ ತೆಲುಗು ಸಿನಿರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡರು. ಸದ್ಯ ಆಕೆ ಧನುಷ್ ಜೊತೆ ಸಾರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಸಂಯುಕ್ತಾ ಮಿನನ್ ಷಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಮಲಯಾಳಂ ಸಿನೆಮಾಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತಾ ಇದೀಗ ಸೌತ್ ನ ಬಹುಬೇಡಿಕೆ ನಟಿಯಾಗಿದ್ದಾರೆ. ತೆಲುಗಿನಲ್ಲಿ ಈಕೆ ಪವನ್ ಕಲ್ಯಾಣ್ ಅಭಿನಯದ ಭಿಮ್ಲಾ ನಾಯಕ್ ಸಿನೆಮಾದಲ್ಲಿ ನಟಿಸುವ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟರು. ಹಂತ ಹಂತವಾಗಿ ತೆಲುಗಿನಲ್ಲಿ ಬೇರೂರಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಕಾಲಿವುಡ್ ಸ್ಟಾರ್‍ ನಟ ಧನುಷ್ ಜೊತೆಗೆ ಸಾರ್‍ ಸಿನೆಮಾದಲ್ಲಿ ನಟಿಸಿದ್ದಾರೆ ಈ ಸಿನೆಮಾದ ಟ್ರೈಲರ್‍ ಸಹ ಇತ್ತಿಚಿಗಷ್ಟೆ ಬಿಡುಗಡೆಯಾಗಿದ್ದು, ಒಳ್ಳೆಯ ಸ್ಪಂದನೆ ಸಹ ಪಡೆದುಕೊಂಡಿದೆ. ಇನ್ನೂ ಈ ಸಿನೆಮಾ ಇದೇ ಫೆ.17 ರಂದು ರಿಲೀಸ್ ಆಗಲಿದ್ದು, ಇದರ ಅಂಗವಾಗಿ ಸಂಯುಕ್ತಾ ಮಿನನ್ ಅನೇಕ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಸಂದರ್ಶನದಲ್ಲಿ ಮಾತನಾಡಿದ ಸಂಯುಕ್ತಾ ಮಿನನ್ ತಾನು ತನ್ನ ಹೆಸರಿನಲ್ಲಿರುವ ಮಿನನ್ ಎಂಬ ಪದವನ್ನು ಏಕೆ ತೆಗೆದು ಹಾಕಿದರು ಎಂಬ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ನಾವು ಶಾಲೆಗೆ ದಾಖಲಾದಾಗ ನಮ್ಮ ಹೆಸರಿನೊಂದಿಗೆ ಮನೆಯ ಹೆಸರನ್ನು ಸಹ ಬರೆಯುತ್ತಿರುತ್ತೇವೆ. ಅದೇ ರೀತಿ ನನ್ನ ಹೆಸರಿನ ಜೊತೆಗೆ ನಮ್ಮ ಕುಟುಂಬದ ಮಿನನ್ ಎಂಬ ಹೆಸರನ್ನು ಬರೆದರು. ಯಾವುದೇ ಒಬ್ಬ ವ್ಯಕ್ತಿಯ ಹೆಸರಿನ ಜೊತೆಗೆ ಮನೆಯ ಹೆಸರು ಏಕೆ ಇರುತ್ತದೆ ಎಂದು ಅರ್ಥವಾಗುತ್ತಿರಲಿಲ್ಲ. ಆದರೆ ಇದೀಗ ಅರ್ಥವಾಗಿದೆ, ಮನುಷ್ಯರ ನಡುವೆ ಸಮನಾತೆಗಾಗಿ ಮನೆಯ ಹೆಸರು ಅಡ್ಡಿಯಾಗುತ್ತದೆ ಎಂದು ನನಗೆ ಅರ್ಥವಾಗಿದೆ. ನನ್ನ ಮನೆಯ ಹೆಸರನ್ನು ಅನೇಕ ದಿನಗಳಿಂದ ತೆಗೆದು ಹಾಕಬೇಕು ಎಂದುಕೊಂಡಿದ್ದೆ. ಕೊಂಚ ಲೇಟ್ ಆದರೂ ಸರಿ ಇನ್ನೂ ಮುಂದೆ ನನ್ನ ಹೆಸರಿನ ಹಿಂದೆ ಮಿನನ್ ಎಂಬ ಹೆಸರು ಇರುವುದಿಲ್ಲ.

ಇನ್ನೂ ನಮ್ಮ ತಂದೆ ತಾಯಿ ಸಹ ವಿಚ್ಚೇದನ ಪಡೆದುಕೊಂಡಿದ್ದಾರೆ. ನಮ್ಮ ತಾಯಿಗೂ ಸಹ ಆ ಹೆಸರನ್ನು ಮುಂದುವರೆಸುವುದು ಇಷ್ಟವಿಲ್ಲ. ಆಕೆಯ ಇಷ್ಟಕ್ಕೆ ನನಗೆ ಗೌರವ ನೀಡಬೇಕು. ಈ ಕಾರಣದಿಂದಲೇ ನಾನು ಮಿನನ್ ಎಂಬ ಹೆಸರನ್ನು ತೊಲಗಿಸಿದ್ದೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ ತಾನು ಬಾಲ್ಯದಲ್ಲಿ ಎದುರಿಸಿದ ಅನೇಕ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯ ಸಂಯುಕ್ತಾ ಹಂಚಿಕೊಂಡ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top