Film News

ಎಲ್.ಕೆ.ಜಿ ಯೂನಿಫಾರಂ ಗೂ ಕಡಿಮೆಯಿರುವ ಡ್ರೆಸ್ ಹಾಕಿದ ಪಾಯಲ್, ಗಾಳಿ ಬಂದರೇ ಕಥೆ ಅಷ್ಟೆ ಎಂದ ಫ್ಯಾನ್ಸ್…..!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕ ನಟಿಯರು ಸಿನೆಮಾಗಳಿಗಿಂತಲೂ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ತಮಗೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ RX100 ಸಿನೆಮಾ ಖ್ಯಾತಿ ಪಾಯಲ್ ರಾಜ್ ಪೂತ್ ಸೋಷಿಯಲ್  ಮಿಡಿಯಾದಲ್ಲಿ ಸೌಂದರ್ಯದ ಸುನಾಮಿಯನ್ನು ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ಎಲ್.ಕೆ.ಜಿ ಯೂನಿಫಾರಂ ನಂತಿರುವ ಶಾರ್ಟ್ ಡ್ರೆಸ್ ನಲ್ಲಿ ಮೈಂಡ್ ಬ್ಲೋಯಿಂಗ್ ಲುಕ್ಸ್ ಕೊಟ್ಟಿದ್ದಾರೆ.

ತೆಲುಗಿನ RX100 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪಾಯಲ್ ರಾಜ್ ಪೂತ್ ಮೊದಲನೇ ಸಿನೆಮಾದ ಮೂಲಕವೇ ಎಲ್ಲರನ್ನು ಸೆಳೆದರು. ಈ ಸಿನೆಮಾದಲ್ಲಿ ಆಖೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡರು. ಮೊದಲನೇ ಸಿನೆಮಾದಲ್ಲಿ ಆಕೆ ಬೋಲ್ಡ್ ಆಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ತುಂಬಾನೆ ಫೇಮಸ್ ಆದರು. ಕಳೆದ 2018ರಲ್ಲಿ ತೆರೆಕಂಡ ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಈ ಸಿನೆಮಾದ ಬಳಿಕ ಪಾಯಲ್ ಭಾರಿ ಆಪರ್‍ ಗಳನ್ನು ಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಆದರೆ ಆಕೆ ಮಾತ್ರ ಅಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ವಿಫಲರಾದರು. ಮೀಡಿಯಂ ರೇಂಜ್ ನ ಸಿನೆಮಾಗಳಲ್ಲೂ ಸಹ ಆಕೆ ಆಫರ್‍ ಗಳನ್ನು ಪಡೆದುಕೊಳ್ಳಲು ವಿಫರಾದರು. ಇನ್ನೂ ಪಾಯಲ್ ನಟಿಸಿದ ಸ್ಟಾರ್‍ ಹಿರೋಗಳು ಎಂದರೇ ವೆಂಕಟೇಶ್, ರವಿತೇಜ ಮಾತ್ರ ಸೇರುತ್ತಾರೆ. ವೆಂಕಿಮಾಮ ಸಿನೆಮಾದಲ್ಲಿ ವೆಂಕಟೇಶ್ ಜೊತೆ ನಟಿಸಿದ್ದು ಈ ಸಿನೆಮಾ ಕೊಂಚ ಸಕ್ಸಸ್ ಕಂಡುಕೊಂಡಿತ್ತು. ಆದರೆ ರವಿತೇಜ ಜೊತೆಗಿನ ಡಿಸ್ಕೋ ರಾಜಾ ಸಿನೆಮಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು.

ಇನ್ನೂ ಸಿನೆಮಾಗಳ ಕಥೆ ಒಂದು ಕಡೆಯಿಟ್ಟರೇ, ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಕ್ರೇಜ್ ಪಡೆದುಕೊಂಡಿದ್ದಾರೆ. ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಾರೆ. ಈ ಹಾದಿಯಲ್ಲೇ ಆಕೆ ಶಾರ್ಟ್ ಡ್ರೆಸ್ ಧರಿಸಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಸೀರೆಯುಡುವ ಸಮಯದಲ್ಲಿ ಸ್ಕೂಲ್ ಡ್ರೆಸ್ ಹಾಕಿದ್ದಂತೆ ಶಾರ್ಟ್ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆ ಈ ಬೋಲ್ಡ್ ಪೊಟೋಗಳಿಗೆ ಫಿದಾ ಆದ ಅಭಿಮಾನಿಗಳು ಜೋರಾದ ಗಾಳಿ ಬಂದರೇ ಏನು ಗತಿ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸದ್ಯ ಪಾಯಲ್ ಸಣ್ಣಪುಟ್ಟ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಮಾಯಾ ಪೆಟಿಕ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಶೂಟಿಂಗ್ ಕೆಲಸಗಳು ಮುಗಿಸಿಕೊಂಡಿದ್ದು, ಇನ್ನೇನು ಬಿಡುಗಡೆಗೆ ಹತ್ತಿರದಲ್ಲೇ ಇದೆ. ಕಳೆದ ವರ್ಷ ಸಾಯಿಕುಮಾರ್‍ ಪುತ್ರ ಆದಿ ಅಭಿನಯದ ತೀಸ್ ಮಾರ್‍ ಖಾನ್ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಆವರೇಜ್ ಹಿಟ್ ಪಡೆದುಕೊಂಡಿದೆ. ಬಳಿಕ ಮಂಚು ವಿಷ್ಣು ಜೊತೆ ಜಿನ್ನಾ ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಸಹ ಸೋಲನ್ನು ಕಂಡಿದೆ. ಇನ್ನೂ ಮುಂದಿನ ಸಿನೆಮಾಗಳಾದರೂ ಆಕೆಗೆ ಬ್ರೇಕ್ ನೀಡುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top