News

ಗೃಹಲಕ್ಷ್ಮೀ ನೊಂದಣಿಯ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್, SMS ಗಾಗಿ ಕಾಯುವ ಅಗತ್ಯವಿಲ್ಲ ಎಂದ ಸಚಿವೆ….!

ಕರ್ನಾಟಕ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ನೊಂದಣಿಗಾಗಿ ಸಾರ್ವಜನಿಕರು ಇನ್ನಿಲ್ಲದ ಸಮಸ್ಯೆ ಪಡುತ್ತಿದ್ದಾರೆ. ಫಲಾನುಭವಿಗಳಿಗೆ ಅನುಕೂಲವಾಗಲು ಇದೀಗ ಸಾಫ್ಟ್ ವೇರ್‍ ಮತಷ್ಟು ಸರಳೀಕರಣ ಗೊಳಿಸಿದ್ದಾರೆ. ಮೊದಲಿಗೆ ಈ ಯೋಜನೆಗೆ ನೊಂದಣಿ ಮಾಡಲು SMS ಬರುವ ವರೆಗೂ ಕಾಯಬೇಕಿತ್ತು. ಆದರೆ ಇದೀಗ ಲಕ್ಷ್ಮೀ ಹೆಬ್ಬಾಳಕರ್‍ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಅರ್ಹ ಫಲಾನುಭವಿಗಳು ಈ ಯೋಜನೆಯಡಿ ನೊಂದಣಿ ಮಾಡಿಸಿಕೊಳ್ಳಲು ಅನೇಕ ನಿಯಮಗಳಿತ್ತು. ಮೊದಲಿಗೆ ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ಬರಬೇಕಿತ್ತು. ಮೆಸೇಜ್ ಬಂದ ಬಳಿಕ ನೊಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಇದೀಗ ಮೆಸೇಜ್ ಬರದೇ ಇದ್ದರೂ ಸಹ ನೊಂದಣಿ ಕೇಂದ್ರಗಳಿಗೆ ತೆರಳಿ ನೇರವಾಗಿ ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂಬ ಸುದ್ದಿಯನ್ನು ಲಕ್ಷ್ಮೀ ಹೆಬ್ಬಾಳಕರ್‍ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಜೊತೆಗೆ ಈ ಯೋಜನೆಯಡಿ ನೊಂದಣಿ ಮಾಡಿಸಿಕೊಳ್ಳಲು ಹಣ ಪಡೆದರೇ ಕ್ರಿಮಿನಲ್ ಕೇಸ್ ಸಹ ದಾಖಲಿಸಲಾಗುತ್ತದೆ ಎಂದು ಮತ್ತೆ ಒತ್ತಿ ಹೇಳಿದ್ದಾರೆ. ಜೊತೆಗೆ ಸೇವಾ ಕೇಂದ್ರಗಳಲ್ಲಿ ಈ ಬಗ್ಗೆ ಅಸಡ್ಡೆ ತೋರಿದರೇ ಅಂತಹವರ ವಿರುದ್ದ ಸಹ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಹ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಯೋಜನೆ ಪ್ರಾರಂಭವಾದ ಏಳು ದಿನಗಳಲ್ಲೇ ಐವತ್ತು ಲಕ್ಷಕ್ಕೂ ಅಧಿಕ ಫಲಾನುಭವಿಗಳು ನೊಂದಣಿಯಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಈ ಯೋಜನೆಯ ನೊಂದಣಿಗಾಗಿ ಬಿಬಿಎಂಪಿಗೆ ನೀಡಲಾಗಿತ್ತು. ಬೆಂಗಳೂರು ಒನ್ ಸೇರಿದಂತೆ ಹಲವು ನೊಂದಣಿ ಕೇಂದ್ರಗಳಲ್ಲಿ ನೊಂದಣಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೊಂದಣಿ ಕೇಂದ್ರಗಳಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲಾ ವಾರ್ಡ್‌ಗಳ ಕಚೇರಿಗಳಲ್ಲಿ ನೊಂದಣಿ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. 198 ವಾರ್ಡ್‌ಗಳ ಕಚೇರಿಯಲ್ಲಿ ನೊಂದಣಿ ಕೇಂದ್ರ ತೆರೆದು ಕಂದಾಯ ವಿಭಾಗದ ಉಪ ಆಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ಸಹ ನೇಮಕ ಮಾಡಲಾಗಿದೆ. ಜೊತೆಗೆ ಈ ಸಂಬಂಧ ಎಲ್ಲಾ ಕಡೆ ವ್ಯಾಪಕ ಪ್ರಚಾರ ನೀಡಲು ಸಹ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Most Popular

To Top