Film News

ರೆಡ್ ಡ್ರೆಸ್ ನಲ್ಲಿ ಬೇಬಿ ಬಂಪ್ ಶೋ ಮಾಡಿದ ಗೋವಾ ಬ್ಯೂಟಿ, ಮಿರರ್ ಮುಂದೆ ಬೇಬಿ ಬಂಪ್ ಶೋ ಮಾಡಿದ ಇಲಿಯಾನಾ…..!

ಗೋವಾ ಬ್ಯೂಟಿ ಇಲಿಯಾನಾ ಮದುವೆಗೂ ಮುಂಚೆಯೇ ಗರ್ಭಿಣಿಯಾಗುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿರುವ ಇಲಿಯಾನ ಗರ್ಭಿಣಿ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಮೊದಲಿಗೆ ತನ್ನ ಪ್ರೆಗ್ನೆನ್ಸಿಯನ್ನು ಮಗುವಿನ ಟಿ ಶರ್ಟ್ ಪೋಸ್ಟ್ ಮಾಡಿ ಘೋಷಣೆ ಮಾಡಿದ್ದರು. ಇದೀಗ ಬ್ಯಾಕ್ ಟು ಬ್ಯಾಕ್ ಬೇಬಿ ಬಂಪ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಇದೀಗ ಆಕೆ ತನ್ನ ಬೇಬಿ ಬಂಪ್ ಪೊಟೋಶೂಟ್ಸ್ ಹಂಚಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗಿದೆ.

ನಟಿ ಇಲಿಯಾನಾ ಕೆಲವು ದಿನಗಳ ಹಿಂದೆಯಷ್ಟೆ ತಾನು ಗರ್ಭಿಣಿಯೆಂಬ ಸುದ್ದಿಯನ್ನು ಸೊಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿದ ಎಲ್ಲರೂ ಶಾಕ್ ಆಗಿದ್ದರು. ಅದಕ್ಕೆ ಕಾರಣ ಇಲಿಯಾನಾ ಇನ್ನೂ ಮದುವೆಯಾಗಿಲ್ಲ. ಮದುವೆಗೂ ಮುಂಚೆಯೇ ಆಕೆ ಗರ್ಭಿಣಿಯಾಗಿದ್ದಾಗಿ ಘೋಷಣೆ ಮಾಡಿದ್ದು ಎಲ್ಲರೂ ಶಾಕ್ ಆಗುವಂತೆ ಮಾಡಿತ್ತು. ಇನ್ನೂ ಇಲಿಯಾನಾ ಗರ್ಭಕ್ಕೆ ಕಾರಣ ಯಾರು. ಒಂದು ವೇಳೆ ನಿಗೂಡವಾಗಿ ಮದುವೆಯಾದರೇ ಎಂಬ ಪ್ರಶ್ನೆಗಳೂ ಸಹ ಎದುರಾಗಿವೆ. ಬಳಿಕ ಆಕೆ ತನ್ನ ಬೇಬಿ ಬಂಪ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನ ಮಗುವಿನ ತಾಯಿ ಯಾರು ಎಂಬ ವಿಚಾರವನ್ನು ಸಹ ಹಂಚಿಕೊಂಡಿದ್ದರು. ಇದೀಗ ಆಕೆ ರೆಡ್ ಕಲರ್‍ ಡ್ರೆಸ್ ನಲ್ಲಿ ಬೇಬಿಬಂಪ್ ಶೋ ಮಾಡಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇಲಿಯಾನಾ ತನ್ನ ಇನ್ಸ್ಟಾ ಖಾತೆಯಲ್ಲಿ ಬೇಬಿ ಬಂಪ್ ಪೊಟೊ ಹಂಚಿಕೊಂಡಿದ್ದಾರೆ. ತುಂಬು ಗರ್ಭಿಣಿಯಾದ ಇಲಿಯಾನಾ ರೆಡ್ ಡ್ರೆಸ್ ನಲ್ಲಿ ಬೇಬಿ ಬಂಪ್ ಶೋ ಮಾಡಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ತುಂಬಾ ಹಾಟ್ ಆಗಿ ದರ್ಶನ ಕೊಟ್ಟಿದ್ದಾರೆ. ಮಿರರ್‍ ಮುಂಭಾಗ ಆಕೆ ನಿಂತು ಬೇಬಿ ಬಂಪ್ ಶೋ ಮಾಡುತ್ತಾ ಖುಷಿಯಾಗಿ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗೆ ಆಕೆ ಮೈ ಲಿಟಿಲ್ ಎಂಬ ಫ್ರೂಟ್ ಎಮೋಜಿನಿ ಯನ್ನು ಸಹ ಹಂಚಿಕೊಂಡಿದ್ದಾರೆ. ಇನ್ನೂ ಇಲಿಯಾನಾ ಲುಕ್ಸ್, ಗೆಟಪ್ ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ.  ಇಲಿಯಾನಾ ತುಂಬಾ ಬ್ಯೂಟಿಪುಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲಿಯಾನಾಗೆ ಹುಟ್ಟೋದು ಹೆಣ್ಣು ಮಗುನಾ ಎಂಬ ಊಹೆಗಳನ್ನು ಸಹ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇಲಿಯಾನಾ ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ತನ್ನ ಪ್ರಿಯಕರ ಯಾರು ಎಂದು ಘೋಷಣೆ ಮಾಡುವುದಕ್ಕೂ ಮುಂಚೆಯೇ ಇಲಿಯಾನಾ ತಾನು ಗರ್ಭಿಣಿ ಎಂದು ಘೋಷಣೆ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆಯ ಪ್ರಿಯಕರನೊಂದಿಗೆ ಡಿನ್ನರ್‍ ಡೇಟ್ ಗೆ ಹೋಗಿದ್ದರು. ಆತ ಯಾರು ಆತನ ಬಗ್ಗೆ ಯಾವುದೇ ವಿಚಾರಗಳು ಮಾತ್ರ ಇನ್ನೂ ತಿಳಿದು ಬಂದಿಲ್ಲ.

Most Popular

To Top