ವಿಚ್ಚೇದನದ ಸುದ್ದಿಯ ಬಗ್ಗೆ ರಿಯಾಕ್ಟ್ ಆದ ಕಲರ್ಸ್ ಸ್ವಾತಿ, ವಿಚ್ಚೇದನದ ಅಫೀಷಿಯಲ್ ಆಗಿ ಹೇಳುತ್ತೇನೆ ಎಂದ ನಟಿ…..!

ಸಿನಿರಂಗದಲ್ಲಿ ಇತ್ತಿಚಿಗೆ ಲವ್, ಬ್ರೇಕಪ್, ಮದುವೆ, ವಿಚ್ಚೇದನಗಳು ಜೋರಾಗಿಯೇ ನಡೆಯುತ್ತಿವೆ. ಮದುವೆಯ ಜೊತೆಗೆ ವಿಚ್ಚೇದನಗಳೂ ಸಹ ಅದೇ ರೀತಿ ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಮೆಗಾ ಕುಟುಂಬದ ನಿಹಾರಿಕಾ ಸಹ ವಿಚ್ಚೇದನ ಪಡೆದುಕೊಂಡರು. ಇದೀಗ…

ಸಿನಿರಂಗದಲ್ಲಿ ಇತ್ತಿಚಿಗೆ ಲವ್, ಬ್ರೇಕಪ್, ಮದುವೆ, ವಿಚ್ಚೇದನಗಳು ಜೋರಾಗಿಯೇ ನಡೆಯುತ್ತಿವೆ. ಮದುವೆಯ ಜೊತೆಗೆ ವಿಚ್ಚೇದನಗಳೂ ಸಹ ಅದೇ ರೀತಿ ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಮೆಗಾ ಕುಟುಂಬದ ನಿಹಾರಿಕಾ ಸಹ ವಿಚ್ಚೇದನ ಪಡೆದುಕೊಂಡರು. ಇದೀಗ ತೆಲುಗು ನಟಿ ಕಲರ್ಸ್ ಸ್ವಾತಿ ಸಹ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಸ್ವಾತಿ ರಿಯಾಕ್ಟ್ ಆಗಿದ್ದಾರೆ. ಆಕೆಯ ಕಾಮೆಂಟ್ ಗಳು ಸಹ ವೈರಲ್ ಆಗುತ್ತಿವೆ.

ಇತ್ತೀಚಿಗೆ ಪ್ರತಿಯೊಬ್ಬರ ವೈಯುಕ್ತಿಕ ಜೀವನದ ಬಗ್ಗೆ ಸೋಷಿಯಲ್ ಮಿಡಿಯಾ ಹೊರಹಾಕುತ್ತಿದೆ ಎಂದು ಹೇಳಬಹುದು. ಅನೇಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸೋಷಿಯಲ್ ಮಿಡಿಯಾವನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ವಿಚ್ಚೇದನದ ಪಡೆದುಕೊಳ್ಳುವ ಬಗ್ಗೆ ಸಹ ಸೋಷಿಯಲ್ ಮಿಡಿಯಾ ಮೂಲಕ ಹಿಂಟ್ ನೀಡುತ್ತಿರುತ್ತಾರೆ. ಸ್ಟಾರ್‍ ನಟಿ ಸಮಂತಾ, ನಿಹಾರಿಕಾ, ಶ್ರೀಜಾ ರವರು ಇದಕ್ಕೆ ಒಳ್ಳೆಯ ಉದಾಹರಣೆ ಎಂದೇ ಹೇಳಬಹುದಾಗಿದೆ. ಸಮಂತಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಅಕ್ಕಿನೇನಿ ಎಂಬ ಹೆಸರನ್ನು ತೆಗೆದು ಹಾಕಿದ್ದು, ನಿಹಾರಿಕಾ ವಿಚ್ಚೇದನದಲ್ಲೂ ಸಹ ಇದೇ ರೀತಿಯಲ್ಲಿ ಪೊಟೊಗಳನ್ನು ಡಿಲೀಟ್ ಮಾಡುವ ಮೂಲಕ ಹಿಂಟ್ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಚಿರಂಜೀವಿ ಪುತ್ರಿ ಶ್ರೀಜಾ ಸಹ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ತನ್ನ ಪತಿಯ ಹೆಸರನ್ನು ತೆಗೆದು ಹಾಕಿದರು. ಈ ಹಾದಿಯಲ್ಲೇ ಕಲರ್ಸ್ ಸ್ವಾತಿ ಸಹ ಸಾಗುತ್ತಿದ್ದಾರೆ ಎಂಬ ರೂಮರ್‍ ಗಳೂ ಜೋರಾಗಿ ನಡೆಯುತ್ತಿವೆ.

ಸೆಲೆಬ್ರೆಟಿಗಳಾದ ಸಮಂತಾ, ನಿಹಾರಿಕಾ ವಿಚ್ಚೇದನದ ನಿರ್ಧಾರಕ್ಕೆ ಬಂದ ಬಳಿಕ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಿಂದ ಮದುವೆಯ ಪೊಟೋಗಳನ್ನು ಡಿಲೀಟ್ ಮಾಡಿದ್ದರು. ಇದೀಗ ಕಲರ್ಸ್ ಸ್ವಾತಿ ಸಹ ಅದೇ ರೀತಿಯಲ್ಲಿ ಮಾಡಿದ್ದು, ಸ್ವಾತಿ ಸಹ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಆಕೆ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಹ್ಯಾರಿ ಪೋಟರ್‍ ಎಂಬ ಸಿನೆಮಾದಲ್ಲಿನ ಸ್ವಾತಿ ಡೈಲಾಗ್ ಒಂದನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಮೂಲಕ ತನ್ನ ಮೇಲೆ ಬರುತ್ತಿರುವ ರೂಮರ್‍ ಗಳಿಗೆ ಸರಿಯಾದ ಕೌಂಟ್ ಕೊಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಜೊತೆಗೆ ಕೆಲವು ದಿನಗಳ ಹಿಂದೆ ಮಿಡಿಯಾ ಸಹ ಇದೇ ವಿಚಾರವನ್ನು ಆಕೆಗೆ ಕೇಳಲಾಗಿತ್ತು. ನಾನು ವಿಚ್ಚೇದನ ಪಡೆದುಕೊಳ್ಳುತ್ತಿಲ್ಲ. ಒಂದು ವೇಳೆ ಅಂತಹ ವಿಚಾರವೇನಾದರೂ ಇದ್ದರೇ ನಾನು ನೇರವಾಗಿ ಎಲ್ಲರೊಂದಿಗೆ ಹೇಳುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಸ್ವಾತಿ ಈ ವಿಚಾರ ಹೇಳಿದ್ದರೂ ಸಹ ಅದನ್ನು ಅನೇಕರು ನಂಬುತ್ತಿಲ್ಲ. ಈಗಾಗಲೇ ಸ್ವಾತಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ. ವಿಚ್ಚೇದನ ಬಂದ ಬಳಿಕ ನಿಹಾರಿಕಾ, ರವರಂತೆ ಘೋಷಣೆ ಮಾಡುತ್ತಾರೆ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ಬಗ್ಗೆ ಸ್ಪಷ್ಟನೆ ಸಿಗಬೇಕಾದರೇ ಮತಷ್ಟು ದಿನ ಕಾಯಬೇಕಾಗಿದೆ.