Film News

ಸುಮಾರು ವರ್ಷಗಳ ಕನಸು ಈಡೇರಿದೆ ಎಂದ ಮಿಲ್ಕಿಬ್ಯೂಟಿ, ಆ ಕನಸಾದರೂ ಏನು, ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ತಮನ್ನಾ….!

ಸೌತ್ ಸಿನಿರಂಗದಲ್ಲಿ ಗ್ಲಾಮರಸ್ ಡ್ಯಾನ್ಸ್ ಮೂಲಕ ಸಿನೆಮಾಗಳಲ್ಲಿ ಸಕ್ಸಸ್ ಕಂಡ ನಟಿಯರ ಸಾಲಿನಲ್ಲಿ ತಮನ್ನಾ ಭಾಟಿಯ ಮೊದಲಿನಲ್ಲಿರುತ್ತಾರೆ. ದಶಕಗಳ ಕಾಲದಿಂದ ತಮನ್ನಾ ಗ್ಲಾಮರ್‍ ಮೂಲಕವೇ ಸಖತ್ ಕ್ರೇಜ್ ಪಡೆದುಕೊಂಡಿದ್ದಾರೆ. ಸದ್ಯ ಆಕೆ ಕೆಲವೊಂದು ಕ್ರೇಜಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಸುಮಾರು ವರ್ಷಗಳ ಕನಸು ಈಡೇರಿದೆ ಎಂದು ತಮನ್ನಾ ಹೇಳಿದ್ದಾರೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ತಮನ್ನಾ ಭಾಟೀಯ ಇಂದಿಗೂ ಸಹ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಸೌಂದರ್ಯ, ಅಭಿನಯದ ಜೊತೆಗೆ ಗ್ಲಾಮರಸ್ ಡ್ಯಾನ್ಸ್ ಮೂಲಕವೇ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಇನ್ನೂ ಇದೀಗ ಆಕೆ ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ನಟಿ ತಮನ್ನಾ ಇದೀಗ ಕೆಲವೊಂದು ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ಸ್ಟಾರ್‍ ನಟರೊಂದಿಗೆ ನಟಿಸುತ್ತಿದ್ದಾರೆ. ಈ ಬಗ್ಗೆ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇತ್ತೀಚಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ತಮನ್ನಾ ಕೆಲವೊಂದು ಕುತೂಹಲಕಾರಿ ವಿಚಾರಗಳನ್ನು ಮಿಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ಜೈಲರ್‍, ಭೋಳಾ ಶಂಖರ್‍ ಹಾಗೂ ಆರ್‍.ಆರ್‍.ಆರ್‍ ಸಿನೆಮಾಗಳ ಬಗ್ಗೆ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ತಮನ್ನಾ ಹೈದರಾಬಾದ್ ನಲ್ಲಿ ತಮನ್ನ ಅಜಾ ಫ್ಯಾಷನ್ ಸ್ಟೋರ್‍ ಪ್ರಾರಂಭೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಾಜರಾಗಿದ್ದರು. ಈ ವೇಳೆ ಆಕೆ ಮಿಡಿಯಾದೊಂದಿಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮಿಳು ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಜೊತೆ ನಟಿಸುತ್ತಿರುವುದು ತುಂಬಾ ಸಂತಸ ತಂದಿದೆ. ಇನ್ನೂ ಇದು ನನ್ನ ಸುಮಾರು ವರ್ಷಗಳ ಕನಸಾಗಿದೆ. ಇದೀಗ ನನ್ನ ಕನಸು ನಿಜವಾಗಿದೆ. ಈಗಾಗಲೇ ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ಸೈರಾ ನರಸಿಂಹರೆಡ್ಡಿ ಸಿನೆಮಾದಲ್ಲಿ ನಟಿಸಿದ್ದೇನೆ. ಇದೀಗ ಭೋಳಾ ಶಂಕರ್‍ ಸಿನೆಮಾದಲ್ಲಿ ಮತ್ತೊಮ್ಮೆ ಚಿರು ರವರ ಜೊತೆಗೆ ನಟಿಸುತ್ತಿರುವುದು ಮತಷ್ಟು ಸಂತಸ ತಂದಿದೆ. ಜೊತೆಗೆ ಇಡೀ ಸೌತ್ ಸಿನಿರಂಗ ಗರ್ವ ಪಡುವಂತೆ ಆರ್‍.ಆರ್‍.ಆರ್‍ ಸಿನೆಮಾ ಆಸ್ಕರ್‍ ಪಡೆದುಕೊಂಡಿದ್ದು, ಇದಕ್ಕೆ ಅಭಿನಂದನೆಗಳನ್ನು ಸಹ ತಿಳಿಸಿದ್ದಾರೆ.

ಸದ್ಯ ತಮನ್ನಾ ಕೈಯಲ್ಲಿ ನಾಲ್ಕು ಸಿನೆಮಾಗಳಿವೆ. ಮೆಗಾಸ್ಟಾರ್‍ ಚಿರಂಜೀವಿ ಜೊತೆ ಭೋಳಾ ಶಂಕರ್‍, ಸೂಪರ್‍ ಸ್ಟಾರ್‍ ರಜನಿಕಾಂತ್ ಜೊತೆ ಜೈಲರ್‍ ಸಿನೆಮಾಗಳ ಜೊತೆಗೆ ಬೋಲ್ ಚುಡಿಯಾ, ಬಾಂದ್ರಾ ಎಂಬ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಜೊತೆಗೆ ವೆಬ್ ಸಿರೀಸ್ ಗಳಲ್ಲೂ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ತಮನ್ನಾ ಅಜಾ ಫ್ಯಾಷನ್ ಸ್ಟೋರ್‍ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ಇಡೀ ಕಾರ್ಯಕ್ರಮಕ್ಕೆ ಆಕರ್ಷಣೆ ಆಗಿದ್ದರು.

Most Popular

To Top