ಮದುವೆ ಬಗ್ಗೆ ಥಿಂಕ್ ಮಾಡೋಕೆ ಸೋಷಿಯಲ್ ಮಿಡಿಯಾ ಇದೆ ಅಲ್ವಾ, ನನಗೆ ಥಿಂಕ್ ಮಾಡುವ ಸಮಯವಿಲ್ಲ ಎಂದ ರಕುಲ್…!

Follow Us :

ಸೌತ್ ಅಂಡ್ ನಾರ್ತ್ ನಲ್ಲಿ ಬಹುಬೇಡಿಕೆ ಹೊಂದಿರುವ ನಟಿಯರ ಸಾಲಿಗೆ ರಕುಲ್ ಪ್ರೀತ್ ಸಿಂಗ್ ಸಹ ಸೇರುತ್ತಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಕೇವಲ ಸೌತ್ ಸಿನಿರಂಗಕ್ಕೆ ಸೀಮಿತವಾಗದೇ ಆಕೆ ಬಾಲಿವುಡ್ ನಲ್ಲೂ ಕ್ರೇಜ್ ದಕ್ಕಿಸಿಕೊಂಡು ಅಲ್ಲೂ ಸಹ ತಮ್ಮ ಹವಾ ಸೃಷ್ಟಿ ಮಾಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ರಕುಲ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದು. ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಬಹುಬೇಡಿಕೆ ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಆಕೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನಗೆ ಸಮಯದ ದೊರೆತರೆ ಮನೆಗೆ ಸೀಮಿತವಾಗುತ್ತೇನೆ. ಹಾಗಂತ ತುಂಬಾ ದಿನಗಳು ಮನೆಯಲ್ಲಿ ಖಾಲಿಯಾಗಿ ಕೂರಲಾರೆ. ನನಗೆ ಕೆಲಸ ಇದ್ದರೇ ಆರೋಗ್ಯವಾಗಿರುವ ಅನುಭೂತಿ ಆಗುತ್ತದೆ. ಸದಾ ಸಿನೆಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿರಬೇಕೆಂದು ಕೋರಿಕೊಳ್ಳುತ್ತೇನೆ. ಸಿನೆಮಾಗಳ ಶೂಟಿಂಗ್ ಇಲ್ಲದೇ ಇದ್ದರೇ ನಾನು ಸ್ನೇಹಿತರೊಂದಿಗೆ ಸಮಯ ಕಳೆಯುತ್ತೇನೆ. ಸ್ನೇಹಿತರೊಂದಿಗೆ ಮನೆಯಲ್ಲಿ ಸಮಯ ಕಳೆಯುವುದು ಎಂದರೇ ತುಂಬಾನೆ ಇಷ್ಟ. ಇನ್ನೂ ನನಗೆ ಮದುವೆ ಬಗ್ಗೆ ಆಲೋಚನೆ ಮಾಡುವ ಸಮಯವಿಲ್ಲ. ಮದುವೆಯ ಬಗ್ಗೆ ಯೋಚನೆ ಮಾಡಲು ಸೋಷಿಯಲ್ ಮಿಡಿಯಾದ ಇದೆ ಅಲ್ವಾ, ರೂಮರ್‍ ಗಳು ಬರಲಿ ಬಿಡಿ, ಸದ್ಯ ನನ್ನ ಕೈತುಂಬಾ ಸಿನೆಮಾಗಳಿವೆ, ಅವು ಆದ  ಬಳಿಕ ಬೇರೆ ವಿಚಾರಗಳ ಬಗ್ಗೆ ಆಲೋಚಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಸಿನೆಮಾಗಳಲ್ಲಿ ಆಗಲೂ, ಈಗಲೂ ಪುರುಷರ ಆಧಿಪತ್ಯ ಇದೆ. ನಾವು ಇರುವುದು ಸಹ ಪುರುಷರ ಆಧಿಪತ್ಯ ಇರುವಂತಹ ಸಮಾಜದಲ್ಲೇ. ಆದರೆ ಭಯಪಡುವಂತಹ ಅವಸರವಿಲ್ಲ. ಸೋಲನ್ನು ಒಪ್ಪಿಕೊಂಡು ಹಿಂದೆಯ ಸರಿಯಬಾರದು. ಜೀವನ ಎಂಬುದು ಪರ್ವತ ಏರುವಂತಹುದು. ಮೇಲೆ ಹೋಗುವುದು ಸವಾಲು. ಅಲ್ಲೇ ನಿಂತು ಹೋದರೇ ನಾವು ಚರಿತ್ರ ಹೀನರಾಗುತ್ತೇವೆ. ಎಷ್ಟೆ ಸಮಸ್ಯೆಗಳು ಎದುರಾದರೂ ಸಹ ನಮ್ಮ ಗುರಿಯನ್ನು ತಲುಪಲೇ ಬೇಕಾಗುತ್ತದೆ. ಸಿನಿಪರಿಶ್ರಮದಲ್ಲಿ ನಮ್ಮದೇ ಆದ ಮುದ್ರೆ ಬೀಳಲು ಕಷ್ಟಪಡಬೇಕು, ವಿಮರ್ಶೆಗಳನ್ನು ಎದುರಿಸಬೇಕು. ಇದು ಪ್ರತಿಯೊಬ್ಬರ ನಟ-ನಟಿಯರೂ ಸಹ ಅನ್ವಯಿಸುತ್ತದೆ. ಸುಮಾರು ಮಂದಿ ಮಾಡುವ ದೊಡ್ಡ ತಪ್ಪು ಹಳೆಯ ನೆನಪುಗಳನ್ನು ಮೆಲುಕು ಹಾಕುವುದು. ಎಂದೋ ನಡೆದ ವಿಚಾರವನ್ನು ಇಟ್ಟುಕೊಂಡು ಇರುವುದು ನನಗೆ ಇಷ್ಟವಿಲ್ಲ. ಗೆಲುವು ಸೋಲು ಬರುತ್ತಿರುತ್ತದೆ ಹೋಗುತ್ತಿರುತ್ತದೆ. ಅದನ್ನು ನೆನೆದು ನಾವು ಹಿಂದೆ ಸರಿಯಬಾರದು ಎಂದಿದ್ದಾರೆ.

ಅಷ್ಟೇಅಲ್ಲದೇ ಯಾರೂ ಸಹ ಹಣ ಸಂಪಾದನೆ ಮಾಡಲು ಸಿನೆಮಾಗಳಲ್ಲಿ ಬರಬೇಡಿ. ಕಷ್ಟಪಡುವಂತಹ ಶಕ್ತಿ ಇದ್ದರೇ ಮಾತ್ರ ಸಿನಿರಂಗದಲ್ಲಿ ಹೆಜ್ಜೆ ಹಾಕಬೇಕು. ನಮ್ಮದ್ದು ಸೈನಿಕ ಕುಟುಂಬ ಆ ಕಾರಣದಿಂದಲೇ ನಾನು ಏನಕ್ಕೂ ಭಯಪಡಲ್ಲ. ನಾನು ಸವಾಲುಗಳನ್ನು ಎದುರಿಸುತ್ತೇನೆ ಎಂದು ಅನೇಕ ವಿಚಾರಗಳನ್ನು ಆಕೆ ಹಂಚಿಕೊಂಡಿದ್ದಾರೆ.