ಸ್ಟೈಲಿಷ್ ಸ್ಯೂಟ್ ಧರಿಸಿ ಮಿಂಚಿದ ಮಿಲ್ಕಿ ಬ್ಯೂಟಿ, ಹೊಸ ವೆಬ್ ಸಿರೀಸ್ ಗಾಗಿ ಸ್ಟೈಲಿಷ್ ಲುಕ್ಸ್, ಕಿಲ್ಲಿಂಗ್ ಲುಕ್ಸ್ ಕೊಟ್ಟ ತಮನ್ನಾ…..!

Follow Us :

ಸೌತ್ ಸಿನಿರಂಗದ ಸ್ಟಾರ್‍ ಹಾಗೂ ಬಹುಬೇಡಿಕೆ ನಟಿ ತಮನ್ನಾ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕೆರಿಯರ್‍ ಪುಲ್ ಜೋಷ್ ಆಗಿ ಸಾಗಿಸುತ್ತಿದ್ದಾರೆ. ಅದರಲ್ಲೂ ವೆಬ್ ಸಿರೀಸ್ ಗಳಲ್ಲೂ ಸಹ ತಮನ್ನಾ ನಟಿಸುತ್ತಿದ್ದು, ಆಕೆಯ ಕೆರಿಯರ್‍ ನಲ್ಲಿ ಎಂದೂ ಮಾಡದಂತಹ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬೋಲ್ಡ್, ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇತ್ತೀಚಿಗಷ್ಟೆ ತೆರೆಕಂಡ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ಗಳಲ್ಲಿ ತಮನ್ನಾ ಕೆಲವೊಂದು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ದು ಅನೇಕ ವಿಮರ್ಶೆಗಳಿಗೆ ಸಹ ಗುರಿಯಾಗಿತ್ತು.

ಮಿಲ್ಕಿ ಬ್ಯೂಟಿ ತಮನ್ನಾ ಇದೀಗ ಮತ್ತೊಂದು ವೆಬ್ ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿರೀಸ್ ನಿಮಿತ್ತ ತಮನ್ನಾ ಪುಲ್ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ನಿರ್ಮಾಣವಾದ ಆಕರಿ ಸಚ್ (Aakhri Sach) ಎಂಬ ವೆಬ್ ಸಿರೀಸ್ ನಲ್ಲಿ ತಮನ್ನಾ ನಟಿಸಿದ್ದು, ಈ ಸಿರೀಸ್ ಇದೇ ಆ.25 ರಿಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕೆಲವು ತಿಂಗಳುಗಳಿಂದ ತಮನ್ನಾ ಹೆಸರು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ನಲ್ಲೇ ಇದೆ. ನಟ ವಿಜಯ್ ವರ್ಮಾ ಜೊತೆಗೆ ಡೇಟಿಂಗ್, ವೆಬ್ ಸಿರೀಸ್ ಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದು, ಹೀಗೆ ಆಕೆಯ ಹೆಸರು ಸದಾ ಕೇಳಿಬರುತ್ತಲೇ ಇದೆ. ಇದೀಗ ಹೊಸ ಸಿರೀಸ್ ನಲ್ಲಿ ಆಕೆ ಹೇಗೆ ನಟಿಸಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇನ್ನೂ ಆಕರಿ ಸಚ್ (Aakhri Sach) ಎಂಬ ವೆಬ್ ಸಿರೀಸ್ ಎಂಬ ವೆಬ್ ಸಿರೀಸ್ ಪ್ರಮೋಷನ್ ನಿಮಿತ್ತ ತಮನ್ನಾ ಪುಲ್ ಆಕ್ಟೀವ್ ಆಗಿದ್ದಾರೆ. ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರಮೋಷನ್ ನಿಮಿತ್ತ ಇದೀಗ ಸ್ಟೈಲಿಷ್ ಆಗಿ ದರ್ಶನ ಕೊಟ್ಟಿದ್ದಾರೆ. ಸ್ಯೂಟ್ ಧರಿಸಿ ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದಾರೆ. ಕಾಫಿ ಕಲರ್‍ ಸ್ಟೈಲಿಷ್ ಸ್ಯೂಟ್ ನಲ್ಲಿ ತಮನ್ನಾ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಮಾಡ್ರನ್ ವೇರ್‍ ನಲ್ಲಿ ಬ್ಯೂಟಿಪುಲ್ ಲುಕ್ಸ್ ಜೊತೆಗೆ ಮತ್ತೇರಿಸುವಂತಹ ನೋಟ ಬೀರಿದ್ದಾರೆ. ಗ್ಲಾಮರಸ್ ಆಗಿರುವ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಭಿಮಾನಿಗಳು ನೆಟ್ಟಿಗರು ಹಾಟ್, ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಫೈರೀಂಗ್ ಎಮೋಜಿಗಳು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಆಕರಿ ಸಚ್ (Aakhri Sach) ಸಿರೀಸ್ ನ ಟ್ರೈಲರ್‍ ಸಹ ಇತ್ತಿಚಿಗಷ್ಟೆ ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಈಗಾಗಲೇ ಜೀ ಖರ್ದಾ, ಲಸ್ಟ್ ಸ್ಟೋರೀಸ್-2 ಸಿರೀಸ್ ಗಳ ಮೂಲಕ ಭಾರಿ ಫೇಂ ಪಡೆದುಕೊಂಡ ತಮನ್ನಾ ಇದೀಗ ಹೊಸ ಸಿರೀಸ್ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಕೊನೆಯದಾಗಿ ಆಕೆ ಜೈಲರ್‍ ಹಾಗೂ ಭೋಳಾ ಶಂಕರ್‍ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.