News

ಸಾಲ ಮರುಪಾವತಿ ಮಾಡೋಕೆ ಆಗದೇ, ಹೆಂಡತಿ ನಗ್ನ ವಿಡಿಯೋ ತೋರಿಸಿ ಸಾಲ ಮನ್ನಾ ಮಾಡಿಸುತ್ತದ್ದನಂತೆ…..!

ಈ ನಾಗರೀಕ ಸಮಾಜದಲ್ಲಿ ವಿವಿಧ ರೀತಿಯ ಮನುಷ್ಯರಿರುತ್ತಾರೆ. ಕಾಸರಗೋಡಿನಲೊಬ್ಬ ಮಹಾನುಭಾವ ಸಾಲ ಪಡೆದು ಮರುಪಾವತಿ ಮಾಡದೇ ಆತ ಘನ್ನಂದಾರಿ ಕೆಲಸ ಮಾಡುತ್ತಿದ್ದ. ಸಾಲ ಕೊಟ್ಟವರು ಕೇಳಿದರೇ ಅವರಿಗೆ ಹೊಸ ದಾಳ ಹಾಕುತ್ತಿದ್ದ. ಆತ ತನ್ನ ಪತ್ನಿಯಿಂದ ಬಲವಂತವಾಗಿ ಬೆತ್ತಲೆಯಾಗಿ ವಿಡಿಯೋ ಕರೆ ಸಾಲ ಮರುಪಾವತಿ ಮಾಡಿಸುತ್ತಿದ್ದನಂತೆ. ಈ ಮಹಾನುಭಾವನ ವಿರುದ್ದ ಪತ್ನಿ ರೋಸಿಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಸರಗೋಡಿನ ನಿಲೇಶ್ವರ ಠಾಣಾ ವ್ಯಾಪ್ತಿಯ ಈ ಪಾಪಿ ಪತಿ 20 ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ. ಪಾಲಾ ಎಂಬಲ್ಲಿ ಈ ಜೋಡಿ ಬಾಡಿಗೆ ಮನೆಯಲ್ಲಿ ವಾಸವಿದ್ದರಂತೆ. ಪತಿಗೆ ಊರೂ ತುಂಬಾ ಸಾಲಗಳಂತೆ. ಸಾಲ ಮರುಪಾವತಿಗಾಗಿ ಸಾಲ ಕೊಟ್ಟವರು ಕೇಳುತ್ತಾರೆ ಎಂದು ಆ ರಸ್ತೆಯಲ್ಲಿ ಹೋಗುವುದೇ ಇಲ್ಲವಂತೆ, ಕರೆ ಮಾಡಿದರೇ ಕರೆ ಸ್ವೀಕಾರ ಮಾಡುತ್ತಿರಲಿಲ್ಲವಂತೆ. ಕೆಲವರಂತೂ ಮನೆಗೆ ಬಂದು ಸಾಲ ತೀರಿಸುವಂತೆ ಧಮ್ಕಿ ಸಹ ಹಾಕಿದ್ದಾರಂತೆ. ಇನ್ನೂ ಸಾಲ ಬಾದೆ ಹೆಚ್ಚಾಗುತ್ತಿದ್ದಂತೆ ಪಾಪಿ ಪತಿ ಹೊಸ ಪ್ಲಾನ್ ಮಾಡಿದ್ದಾನೆ. ಸಾಲ ಮರುಪಾವತಿಸುವಂತೆ ಕೇಳುವವರ ಜತೆಗೆ ತನ್ನ ಹೆಂಡತಿಯನ್ನು ಮಲಗಿಸಲು ಪ್ರಯತ್ನ ಸಹ ಮಾಡಿದ್ದಾರೆ. ಸಾಲ ಮರುಪಾವತಿಸುವಂತೆ ಕೇಳಿದಾಗ ಪತ್ನಿಯನ್ನು ಬೆದರಿಸಿ ಬೆತ್ತಲೆಯಾಗಿ ವಿಡಿಯೋ ಕರೆ ಮಾಡಿಸಲು ಪ್ಲಾನ್ ಮಾಡಿದ್ದಾನೆ. ಆ ಮೂಲಕ ಸಾಲ ಮನ್ನಾ ಅಥವಾ ಮರುಪಾವತಿ ಮುಂದೂಡುಕೆ ಮಾಡುತ್ತಿದ್ದನಂತೆ.

ತನ್ನ ಪತ್ನಿಯಿಂದ ಬೆತ್ತಲೆ ಕರೆ ಮಾಡಿಸಿ ಈ ಫಿಗರ್‍ ಫ್ರೀ, ಬಾಡಿ ಮಸಾಜ್ ಸೇರಿ ಎಲ್ಲಾ ಫ್ರೀ ಎಂದು ಸಾಲ ಮನ್ನಾ ಮಾಡಿಸಿಕೊಳ್ಳುತ್ತಿದ್ದನಂತೆ. ಆತನ ಕಿರುಕುಳಕ್ಕೆ ಬೇಸತ್ತ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪತಿ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಮದುವೆಯಾದ ಒಂದೇ ವರ್ಷಕ್ಕೆ ಸಂತ್ರಸ್ತೆ ಮಹಿಳೆ ತುಂಬಾನೆ ನೋವು ಅನುಭವಿಸಿದ್ದಾರೆ.

Most Popular

To Top