ರೆಡ್ ಮಿರ್ಚಿಯಂತೆ ಖಾರವಾದ ಪೋಸ್ ಕೊಟ್ಟ ಮಿಲ್ಕಿ ಬ್ಯೂಟಿ, ಸ್ಟನ್ನಿಂಗ್ ಸ್ಟಿಲ್ಸ್ ಕೊಟ್ಟ ತಮನ್ನಾ……..!

Follow Us :

ಸೌತ್ ಸ್ಟಾರ್‍ ಮಿಲ್ಕಿ ಬ್ಯೂಟಿ ತಮನ್ನಾ ಇತ್ತೀಚಿಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅದರಲ್ಲೂ ಆಕೆ ನಟಿಸಿದ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್ 2 ವೆಬ್ ಸಿರೀಸ್ ನಲ್ಲಿ ಬೋಲ್ಡ್ ನಟನೆಯ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇದೀಗ ಜೈಲರ್‍ ಸಿನೆಮಾದ ಈವೆಂಟ್ ಗಾಗಿ ಆಕೆ ರೆಡ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದು ಪೊಟೋಗಳು ವೈರಲ್ ಆಗುತ್ತಿವೆ.

ತೆಲುಗು ಸಿನೆಮಾಗಳ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡ ತಮನ್ನಾ  ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಪಡೆದುಕೊಂಡರು. ಇದೀಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ.  ಸೆಕೆಂಡ್ ಇನ್ನಿಂಗ್ಸ್ ನಲ್ಲಿ ರೂಟ್ ಬದಲಿಸಿರುವ ತಮನ್ನಾ ಬೋಲ್ಡ್ ದೃಶ್ಯಗಳಲ್ಲು ಸಹ ನಟಿಸುತ್ತಾ ಸೈ ಎನ್ನಿಸಿದ್ದಾರೆ. ಕೆರಿಯರ್‍ ಆರಂಭದಲ್ಲಿ ಬೋಲ್ಡ್ ದೃಶ್ಯಗಳಿಂದ ದೂರ ಉಳಿದ ತಮನ್ನಾ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ನಲ್ಲಿ ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳ ಮೂಲಕ ಶಾಕ್ ಕೊಟ್ಟಿದ್ದರು. ಈ ಸಿರೀಸ್ ಬಳಿಕ ಆಕೆ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ತಮನ್ನಾ ಎರಡು ದೊಡ್ಡ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ಭೋಳಾಶಂಕರ್‍ ಸಿನೆಮಾದಲ್ಲಿ ಹಾಗೂ ಮೊದಲ ಬಾರಿಗೆ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಜೊತೆಗೆ ಜೈಲರ್‍ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೂ ಈ ಸಿನೆಮಾಗಳು ಕೆಲವೇ ದಿನಗಳಲ್ಲಿ  ಬಿಡುಗಡೆಯಾಗಲಿದೆ. ಜೈಲರ್‍ ಸಿನೆಮಾ ಇದೇ ಆ.10 ರಂದು ಬಿಡುಗಡೆಯಾಗಲಿದೆ. ಇತ್ತೀಚಿಗಷ್ಟೆ ಜೈಲರ್‍ ಸಿನೆಮಾದ ಆಡಿಯೋ ಲಾಂಚ್ ಈವೆಂಟ್ ಆಯೋಜಿಸಲಾಗಿದ್ದು, ಈ ಈವೆಂಟ್ ನಲ್ಲಿ ರೆಡ್ ಕಲರ್‍ ಔಟ್ ಫಿಟ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ.  ಬ್ಯೂಟಿಪುಲ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಗ್ಲಾಮರಸ್ ಆಗಿ ಪೋಸ್ ಗಳನ್ನು ಕೊಡುತ್ತಾ ಇಡೀ ಈವೆಂಟ್ ಗೆ ಹೈಲೇಟ್ ಆಗಿದ್ದಾರೆ. ಇದೀಗ ಆ ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಮತಷ್ಟು ವೈರಲ್ ಆಗುತ್ತಿವೆ.

ಇದೀಗ ತಮನ್ನಾ ಜೈಲರ್‍ ಈವೆಂಟ್ ಗೆ ಸಂಬಂಧಿಸಿದ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ. ಎದೆಯ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಪೊಟೋಗಳಿಗೆ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ತಮನ್ನಾ ಜೈಲರ್‍, ಬೋಳಾ ಶಂಕರ್‍ ಸಿನೆಮಾ ಬಿಡುಗಡೆಗೆ ಸಿದ್ದವಾಗಿದೆ. ಇದರ ಜೊತೆಗೆ ತಮಿಳಿನಲ್ಲಿ ಅರಣ್ಣಮೈ-4, ಮಲಯಾಳಂ ನಲ್ಲಿ ಬಂದ್ರಾ, ಹಿಂದಿಯಲ್ಲಿ ವಿದಾ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.