ಡೇಟಿಂಗ್, ಸೆಕ್ಸ್ ಬಗ್ಗೆ ಶಾಕಿಂಗ್ ಪೋಸ್ಟ್ ಮಾಡಿದ ರಶ್ಮಿ, ರಾಕ್ಷಸತ್ವದ ಶೃಂಗಾರದ ಕೋರಿಕೆಯಿಂದ ಅದನ್ನು ಕಳೆದುಕೊಳ್ಳುತ್ತಿದ್ದೇವೆ….!

Follow Us :

ತೆಲುಗು ಕಿರುತೆರೆಯಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಆಂಕರ್‍ ಗಳಲ್ಲಿ ಒಬ್ಬರಾದ ರಶ್ಮಿ ಕಿರುತೆರೆ ಶೋಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಕೆಲವೊಮ್ಮೆ ಆಕೆ ಸಂಚಲನಾತ್ಮಕ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಮನರಂಜನೆಯ ಜೊತೆಗೆ ಆಕೆ ಸೋಷಿಯಲ್ ಆಕ್ಟಿವಿಸ್ಟ್ ಆಗಿದ್ದು, ಇದೀಗ ಆಕೆ ಡೇಟಿಂಗ್ ಹಾಗೂ ಸೆಕ್ಸ್ ಬಗ್ಗೆ ಮಾಡಿದ ಪೋಸ್ಟ್ ವೈರಲ್ ಆಗುತ್ತಿದೆ.

ಆಂಕರ್‍ ಕಂ ನಟಿ ರಶ್ಮಿ ಕಿರುತೆರೆಯಲ್ಲಿ ಭಾರಿ ಪೇಂ ಪಡೆದುಕೊಂಡಿದ್ದಾರೆ. ನಟಿಯಾಗಿ ಕೆರಿಯರ್‍ ಆರಂಭಿಸಿದರೂ ಸಹ ಆಕೆಗೆ ಕಿರುತೆರೆಯಲ್ಲಿ ಭಾರಿ ಕ್ರೇಜ್ ಪಡೆದುಕೊಂಡರು. ಇದೀಗ ಸಿನೆಮಾಗಳಲ್ಲೂ ಸಹ ಫೇಂ ಪಡೆದುಕೊಳ್ಳಲು ಭಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಯಾವುದೇ ಸಿನೆಮಾ ಆಕೆಗೆ ಬ್ರೇಕ್ ನೀಡಲಿಲ್ಲ ಎಂದೇ ಹೇಳಬಹುದು. ಸಿನೆಮಾಗಳಲ್ಲಿ ಆಕೆಯ ಜೋರು ಕಡಿಮೆಯಾದರೂ ಸಹ ಕಿರುತೆರೆಯಲ್ಲಿ ಮಾತ್ರ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ವಿವಿಧ ಶೋಗಳ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ತೆಲುಗು ಕಿರುತೆರೆ ಶೋಗಳಿಗೆ, ವಿಶೇಷ ಕಾರ್ಯಕ್ರಮಗಳಿಗೆ ಮೊದಲ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ರಶ್ಮಿ ಪ್ರಾಣಿಗಳ ಹಿಂಸೆ ನಡೆದರೇ ಅದರ ವಿರುದ್ದ ಕೂಡಲೇ ಸೋಷಿಯಲ್ ಮಿಡಿಯಾ ವೇದಿಕೆಯಲ್ಲಿ ರಿಯಾಕ್ಟ್ ಆಗುತ್ತಾರೆ. ಜೊತೆಗೆ ಸಮಾಜದಲ್ಲಿ ನಡೆಯುವಂತಹ ಕೆಲವೊಂದು ವಿಚಾರಗಳ ಬಗ್ಗೆ ಸಹ ಮಾತನಾಡುತ್ತಿರುತ್ತಾರೆ. ನಿರ್ಭಯವಾಗಿ ತಮ್ಮ ಅನಿಸಿಕೆಯನ್ನು ಹೊರಹಾಕುತ್ತಿರುತ್ತಾರೆ. ಇದೀಗ ತನ್ನ ಇನ್ಸ್ಟಾ ಖಾತೆಯಲ್ಲಿ ಆಕೆ ಪೋಸ್ಟ್ ಮಾಡಿದ ಸ್ಟೋರಿ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಸೆಕ್ಸ್ ಡೇಟಿಂಗ್ ಬಗ್ಗೆ ರಶ್ಮಿ ಬೋಲ್ಡ್ ಆಗಿ ಪೋಸ್ಟ್ ಮಾಡಿದ್ದಾರೆ. ಡೇಟಿಂಗ್ ಕಾರಣದಿಂದ ಮನುಷ್ಯರ ನಡುವೆ ಸಂಬಂಧಗಳು ಹೇಗೆ ಪೆಟ್ಟು ತಿನ್ನುತ್ತಿದೆಯೋ ಎಂಬ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ. ಶೃಗಾರಕ್ಕೆ ಸಂಬಂಧಿಸಿದ ಕೆಲವೊಂದು ದೃಶ್ಯಗಳು ಸೈಕಲ್ ಮಾದರಿಯಲ್ಲಿರುವ ಈ ಪೊಟೋದಲ್ಲಿ ಸಂಬಂಧಗಳ ಗಳ ಬಗ್ಗೆ ಯೋಚಿಸದೇ ಪ್ರತಿಯೊಬ್ಬರೂ ಶೃಂಗಾರವನ್ನು ಅನುಭವಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ದೇವರು ನಿಜವಾದ ಪ್ರೀತಿಯನ್ನು ಅನುಭವಿಸಿ ಎಂದು ನಮ್ಮನ್ನು ಆ ಮಾರ್ಗದಲ್ಲಿ ಕಳುಹಿಸುತ್ತಿದ್ದರೇ, ರಾಕ್ಷಸತ್ವ ತುಂಬಿದ ಶೃಂಗಾರ ಕೋರಿಕೆಗಳ ಕಾರಣದಿಂದ ಪ್ರೀತಿಯನ್ನು ತಿರಸ್ಕಾರ ಮಾಡುತ್ತಿರುವಂತೆ ಈ ಪೋಸ್ಟ್ ನ ಅರ್ಥವಾಗಿದೆ.

ಇನ್ನೂ ರಶ್ಮಿ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆಯ ಈ ಪೋಸ್ಟ್ ಗೆ ಅನೇಕರು ಬೆಂಬಲ ಸಹ ನೀಡುತ್ತಿದ್ದಾರೆ. ಸದ್ಯ ರಶ್ಮಿ ಭೋಳಾಶಂಕರ್‍ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಕೆಲವು ದಿನಗಳಲ್ಲೇ ಬಿಡುಗಡೆಯಾಗಲಿದೆ. ಸಿನೆಮಾಗಳು, ಕಿರುತೆರೆ ಶೋಗಳು ಸೇರಿದಂತೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ ರಶ್ಮಿ ಗೌತಮ್.