ಕಡಲ ತೀರದಲ್ಲಿ ನಿಂತು ಜೀವನದ ಬಗ್ಗೆ ಪಾಠ ಮಾಡಿದ ನಟಿ ರಾಧಿಕಾ ಪಂಡಿತ್, ವೈರಲ್ ಆದ ಪೋಸ್ಟ್…….!

Follow Us :

ಚಂದನವನದ ಸಿಂಡ್ರೆಲಾ ಎಂದೇ ಖ್ಯಾತಿ ಪಡೆದುಕೊಂಡಿರುವ ರಾಧಿಕಾ ಪಂಡಿತ್ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ರಾಕಿಂಗ್ ಸ್ಟಾರ್‍ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯಾದ ಬಳಿಕ ಆಕೆ ಕುಟುಂಬ ನಿರ್ವಹಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಆಕೆಯನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳೂ ಸಹ ಕಾಯುತ್ತಿದ್ದಾರೆ. ಈ ಬಗ್ಗೆ ಆಕೆ ಇನ್ನೂ ಯಾವುದೇ ಅಪ್ಡೇಟ್ ನೀಡಿಲ್ಲ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಆಗಾಗ ತಮ್ಮ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ.

ಕನ್ನಡದ ನಟಿ ರಾಧಿಕಾ ಪಂಡಿತ್ ರವರಿಗೆ ಕನ್ನಡ ಸಿನಿರಂಗದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ದೊಡ್ಡ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಸಿನೆಮಾಗಳಿಂದ ದೂರವಾದ ಬಳಿಕ ರಾಧಿಕಾ ಪಂಡಿತ್ ಸೋಷಿಯಲ್ ಮಿಡಿಯಾ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಆಕೆ ತನ್ನ ವೈಯುಕ್ತಿಕ ಜೀವನ, ಕೆಲವೊಂದು ಹೆಲ್ತ್ ಟಿಪ್ಸ್ ಸೇರಿದಂತೆ ತನ್ನ ಮಕ್ಕಳೊಂದಿಗಿನ ಮುದ್ದಿನ ಪೊಟೋಗಳು, ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ರಾಧಿಕಾ ಹೊಸ ಪೊಟೋ ಹಂಚಿಕೊಂಡು ಜೀವನದ ಬಗ್ಗೆ ಕೆಲವೊಂದು ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ.

ಇನ್ನೂ ರಾಧಿಕಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಅಂಡ್ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಎಲ್ಲರನ್ನೂ ಸೆಳೆದಿದ್ದಾರೆ. ಸೂರ್ಯಾಸ್ತದ ಸಮಯದಲ್ಲಿ ಕಡಲ ತೀರದಲ್ಲಿ ನಿಂತು ಆಕೆ ಜೀವನದ ಬಗ್ಗೆ ಒಂದು ಸಂದೇಶ ಹಾಕಿದ್ದಾರೆ. ಒಳ್ಳೆಯ ದಿನಗಳು ಸಂತೋಷವನ್ನು ನೀಡುತ್ತವೆ, ಕೆಟ್ಟ ದಿನಗಳು ಅನುಭವಗಳನ್ನು ನೀಡುತ್ತವೆ, ಅತೀ ಕೆಟ್ಟ ದಿನಗಳು ಪಾಟ ಕಲಿಸುತ್ತವೆ, ಉತ್ತಮ ದಿನಗಳ ನೆನಪುಗಳನ್ನು ನೀಡುತ್ತವೆ ಎಂದು ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದಾರೆ. ಇನ್ನೂ ರಾಧಿಕಾ ಹಂಚಿಕೊಂಡ ಈ ಪೋಸ್ಟ್ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುವ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ರಾಧಿಕಾ ಪಂಡಿತ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ಆಕೆಯನ್ನು ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಹಂಚಿಕೊಳ್ಳುವ ಪೋಸ್ಟ್ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಜೊತೆಗೆ ಅಭಿಮಾನಿಗಳು ಆಕೆಯನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಆಸೆ ನೆರವೇರುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.